ಶಿವಮೊಗ್ಗಹೊಸನಗರ

ಹೊಸನಗರ ಪಪಂಗೆ ಖಾಸಗಿ ಬಸ್‌ ಸ್ಟ್ಯಾಂಡ್‌ ಮಳಿಗೆಗಳ ಹರಾಜಿನಿಂದ ಭರ್ಜರಿ ಹಣ ಸಂದಾಯ ; ಬಸ್‌ ಸ್ಟ್ಯಾಂಡ್‌ ಆವರಣದಲ್ಲಿ ಅಧಿಕಾರಿಗಳಿಂದ 2 ಗಂಟೆ ಹೈಡ್ರಾಮ !

ಹೊಸನಗರ : ಪಟ್ಟಣದ ಖಾಸಗಿ ಬಸ್‌ ಸ್ಟ್ಯಾಂಡ್‌ ಮಳಿಗೆ ಗಳು ಹರಾಜು ಮಾಡಲಾಗಿದ್ದು 14 ಮಳಿಗೆಗಳಲ್ಲಿ 10 ಮಳಿಗೆಗಳು ಬಹಿರಂಗ ಹರಾಜಿನಲ್ಲಿ ಭರ್ಜರಿ ಹಣ ಸಂದಾಯವಾಗಿದೆ. ಸುಮಾ ರು 15 ವರ್ಷಗಳ ಹಿಂದೆ ಸುಮಾ ರು 14 ಮಳಿಗೆಗಳು ಹಾಗೂ ಒಂದು ಬಸ್‌್ಸ ಸ್ಟ್ಯಾಂಡ್‌ ಹೋಟೆ ಲ್‌ ಹರಾಜ್‌ ಆಗಿದ್ದು ಆದರೆ ಅಂದು ಅಲ್ಪ ಮೊತ್ತಕ್ಕೆ ಹರಾಜಾ ಗಿತ್ತು ಆದರೆ ಈ ಬಾರಿ ಸರ್ಕಾರದ ಟೆಂಡರ್‌ ಮೊತ್ತವೇ ಹೆಚ್ಚು ಮಾಡ ಲಾಗಿದ್ದು ಸರ್ಕಾರದ ಮೊತ್ತ ಕ್ಕಿಂತಲೂ ಹೆಚ್ಚಾಗಿ ಬಹಿರಂಗ ಹರಾಜು ಆಗಿದ್ದು ಬಿಡ್‌ದಾರರು ಹೆಚ್ಚು ಹೆಚ್ಚು ಮೊತ್ತಕ್ಕೆ ಬಹಿರಂಗ ಹರಾಜಿನಲ್ಲಿ ತಮ್ಮ ಮಳಿಗೆಗಳನ್ನು ಪಡೆದಿದ್ದಾರೆ.

1ನೇ ಮಳಿಗೆ ವಿನಾಯಕ 15 ಸಾವಿರಕ್ಕೆ, 2ನೇ ಮಳಿಗೆ ಶಾಂತಮೂರ್ತಿ 16500 ರೂಪಾಯಿಗೆ, 3ನೇ ಮಳಿಗೆ ಸದಾನಂದ 16500ಕ್ಕೆ, 4ನೇ ಮಳಿಗೆ ಕೆ.ಬಿ ಮಂಜುನಾಥ 14500, 5ನೇ ಮಳಿಗೆ 24054 ರೂಪಾಯಿಗಳಿಗೆ ಅನೀಷ್‌ ದೇವ್‌, 6ನೇ ಮಳಿಗೆ ಪ್ರದೀಪ್‌ 17ಸಾವಿರ ರೂಪಾಯಿಗೆ, 7ನೇ ಮಳಿಗೆ ದಯಾನಂದಮೂರ್ತಿ 13554ರೂಪಾಯಿಗೆ, 8ನೇ ಮಳಿಗೆ ದಯಾನಂದರವರು 14054ರೂಪಾಯಿಗಳಿಗೆ 9ನೇ ಮಳಿಗೆ ಬಿ.ಎಂ ಬಸವರಾಜ್‌ 12500ರೂಪಾಯಿಗಳಿಗೆ 11ನೇ ಮಳಿಗೆ ಸುರೇಶ್‌ ಬಿ.ಎಸ್‌ 13554ರೂಪಾಯಿಗಳಿಗೆ 14ನೇ ಮಳಿಗೆ ನಾಗರಾಜ ಎಂಬುವವರು 20ಸಾವಿರ ರೂಪಾಯಿಗೆ ಪಡೆದಿದ್ದು ಮಳಿಗೆ ಸಂಖ್ಯೆ 12, 13ರ ಮಳಿಗೆಗಳಿಗೆ ಯಾರು ಬಿಡ್‌ ಮಾಡದೇ ಇರುವ ಕಾರಣ ಹಾಗೆಯೇ ಉಳಿದಿದೆ ಕೊನೆಯ ದಾಗಿ ಬಸ್‌್ಸ ಸ್ಟ್ಯಾಂಡ್‌ ಹೋಟಲ್‌ ಠೇವಣಿ ಮೊತ್ತ 1366924 ವಾಗಿದ್ದು ಸರ್ಕಾರದ ದರ 96,757 ಆಗಿದ್ದು ಬಿಡ್‌ದಾರ ರಾದ ಚಂದ್ರಶೇಖರ ಮತ್ತು ಸಂತೋಷ್‌ ಶೇಟ್‌ರವರು 50 ಸಾವಿರಕ್ಕೆ ಹರಾಜು ಕರೆದಿದ್ದು ಸರ್ಕಾರದ ಮೊತ್ತಕ್ಕೆ ಬರದೇ ಇರುವುದರಿಂದ ಹಾಗೇಯೇ ಉಳಿದಿದೆ ಈ ಬಾರೀಯ ಬಸ್‌್ಸ ಸ್ಟ್ಯಾಂಡ್‌ ಮಳಿಗೆಗಳ ಹರಾಜಿನಲ್ಲಿ ಪಟ್ಟಣ ಪಂಚಾಯಿತಿಗೆ ಬಾರಿ ಲಾಭ ಗಳಿಸಿದೆ.

ಹೊಸನಗರ ಪಟ್ಟಣ ಪಂಚಾ ಯಿತಿಯ ಮುಖ್ಯಾಕಾರಿಗಳು ಹಾಗೂ ಪಟ್ಟಣ ಪಂಚಾಯಿತಿಯ ಸಿಬ್ಬಂದಿಗಳು ಹಾಗೂ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸದಸ್ಯ ರುಗಳು ಯಾವುದೇ ಗೊಂದಲ ವಾಗದಂತೆ ಬಸ್‌ ಸ್ಟ್ಯಾಂಡ್‌ ಮಳಿಗೆಗಳ ಬಹಿರಂಗ ಹರಾಜು ಅಚ್ಚುಕಟ್ಟಾಗಿ ನಡೆಸಿದರು.

ಪಟ್ಟಣ ಪಂಚಾಯಿತಿಯ ಹೈಡ್ರಾಮ: ಮಳಿಗೆ ಮಾಲೀಕರು ಹೈರಾಣು ಹೊಸನಗರ ಪಟ್ಟಣ ಪಂಚಾಯಿತಿಯ ಮಳಿಗೆಗಳ ಹರಾಜು ಪ್ರಕ್ರಿಯೇ ಮುಗಿಯು ತ್ತಿದಂತೆ ಹೈಡ್ರಾಮವೇ ನಡೆಯಿತು. ಗುರುವಾರ ಟೆಂಡರ್‌ ಪ್ರಕ್ರಿಯೇ ನಡೆಯಿತು. ಆದರೆ ಹಿಂದೆ ಅಂಗಡಿ ಮಾಲೀಕರಿಗೆ ಅಂಗಡಿ ಖಾಲಿ ಮಾಡುವ ಬಗ್ಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪನವರ ಅಧ್ಯಕ್ಷತೆಯಲ್ಲಿ ಶನಿವಾರ ತುರ್ತು ಸಭೆ ನಡೆಸಲಾಯಿತು. ತುರ್ತು ಸಭೆಯಲ್ಲಿ ಕೆಲವು ಸದಸ್ಯರು ಇಂದೇ ಹಿಂದಿನ ಅಂಗಡಿ ಮಾಲೀ ಕರನ್ನು ತೆರವು ಮಾಡಬೇಕು ಎಂದು ಪಟ್ಟು ಹಿಡಿದಿದ್ದೂ ಇಲ್ಲವಾದರೇ ಕೆಲವರು ಕೋರ್ಟ್‌ ಮೊರೆ ಹೋಗುವ ಸಾಧ್ಯತೆ ಇದೆ ಎಂದು ಪಟ್ಟು ಹಿಡಿದಿದ್ದು ಕೆಲವು ಸದಸ್ಯರು ತಕ್ಷಣ ಬೇಡ ಒಂದು ವಾರ ಗಡುವು ನೀಡಿ ಆಮೇಲೆ ಖಾಲಿ ಮಾಡಿಸಲಿ ಎಂದು ಹೇಳಿ ದರು.

ಪಟ್ಟಣ ಪಂಚಾಯಿತಿಯ ಸದಸ್ಯರ ಹೊಂದಾಣಿಕೆಯ ಕೊರತೆಯಿಂದ ಅಕಾರಿಗಳಿಗೆ ಏನೂ ಮಾಡಬೇಕು ಎಂಬುವು ದನ್ನೂ ತಿಳಿಯದ ನೌಕರರು ಮುಖ್ಯಾಕಾರಿ ಬಾಲಚಂದ್ರಪ್ಪ ನವರ ನೇತೃತ್ವದಲ್ಲಿ ಪಟ್ಟಣ ಪಂಚಾಯಿತಿಯ ಮಹಿಳಾ ನೌಕರರು ಸೇರಿ ಶನಿವಾರ ಸಂಜೆ 4ಗಂಟೆಗೆ ಎಲ್ಲ ಮಳಿಗೆಗಳನ್ನು ಖಾಲಿ ಮಾಡಿ ಬೀಗ ಹಾಕಲು ಆಗಮಿಸಿದ್ದು ಕೆಲವು ಅಂಗಡಿಗಳ ಸಾಮಾನು ಹೊರಗೆ ಹಾಕಿ ಬೀಗ ಹಾಕುವ ಪ್ರಕ್ರಿಯೆಯು ನಡೆ ಯಿತು. ಪಾನಿಪೂರಿ ಅಂಗಡಿಯ ಮಾಡಿದ ತಿನಿಸುಗಳ ಜೊತೆಗೆ ಪಾತ್ರೆಗಳನ್ನು ಹೊರ ಹಾಕುವ ಪ್ರಕ್ರಿಯೇ ನಡೆಯಿತು. ಬಿ.ಎಸ್‌ ಸುರೇಶ್‌ ಮಾತ್ರ ಯಾವುದೇ ಕಾರಣಕ್ಕೂ ನಾನು ಅಂಗಡಿಗೆ ಬೀಗ ಹಾಕುವುದಿಲ್ಲ ನೀವು ಬೀಗ ಹಾಕುವುದಾದರೇ ನನ್ನನ್ನು ಒಳಗೆ ಹಾಕಿ ಬೀಗ ಹಾಕಿ ಎಂದು ಪಟ್ಟು ಹಿಡಿದರು.

ಸುಮಾರು ಎರಡು ಗಂಟೆಗಳ ಕಾಲ ನಡೆದ ಬೀಗ ಹಾಕುವ ಹೈಡ್ರಾಮಕ್ಕೆ 2ಗಂಟೆ ನಂತರ ತೆರೆಬಿತ್ತು ಎಲ್ಲ ಅಂಗಡಿಯ ಹಳೇಯ ಮಾಲೀಕರಿಗೆ ಮಾರ್ಚ್‌24 ಶುಕ್ರವಾರದವರೆಗೆ ಅಂಗಡಿ ನಡೆಸಲು ಅವಕಾಶ ನೀಡಲಾಯಿತು. ಒಟ್ಟಾರೆ ಪಟ್ಟಣ ಪಂಚಾಯಿತಿ ಅಕಾರಿಗಳ ವರ್ಗ ಮತ್ತು ಪಟ್ಟಣ ಪಂಚಾಯತಿ ಆಡಳಿತ ಮಂಡಳಿ ಹೊಸನಗರ ಪಟ್ಟಣದ ಜನತೆಗೆ ನಗೆಪಾಟಲಿಗೆ ಗುರಿಯಾದರು.