ಭದ್ರಾವತಿಶಿವಮೊಗ್ಗ

ಮಹಿಳಾ ದಿನಾಚರಣೆಯನ್ನು ಆಚರಿಸುವ ಮೂಲಕ ಮಹಿಳೆಯರು ಖುಷಿ ಪಡಬೇಕು : ಫಾದರ್‌ ಲ್ಯಾನ್ಸಿ ಡಿಸೋಜಾ

ಭದ್ರಾವತಿ: ಪ್ರತಿವರ್ಷ ಒಂದಿ ಲ್ಲೊಂದು ಹಬ್ಬಗಳನ್ನು ನಾವು ಆಚರಿಸುತ್ತೇವೆ. ಅದರಿಂದ ಪರ ಸ್ಪರ ಸಂತಸ, ಭಾಂಧವ್ಯ ಮೂಡಿ ಸಂತ ಸದ ವಾತಾವರಣ ಉಂಟಾ ಗುತ್ತದೆ. ಅದೇ ರೀತಿಯಲ್ಲಿ ಮಹಿಳಾ ದಿನಾಚರಣೆಯನ್ನು ಆಚ ರಿಸುವ ಮೂಲಕ ಮಹಿಳೆಯರು ಖುಷಿ ಪಡಬೇಕು ಎಂದು ನ್ಯೂಟೌನ್‌ ಅಮಲೋಧ್ಭವಿ ಮಾತೆ ದೇವಾಲಯದ ಫಾದರ್‌ ಲ್ಯಾನ್ಸಿ ಡಿಸೋಜಾ ಕರೆ ನೀಡಿದರು.

ಅವರು ಚರ್ಚ್‌ ನ ಕಾರ್ಯ್ಲ ಯದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಮಾ ಜದಲ್ಲಿ ಪ್ರತಿಯೊಂದು ಕುಟುಂ ಬದ ಹೆಣ್ಣು ಕಡ್ಡಾಯವಾಗಿ ವಿದ್ಯಾಭ್ಯಾಸವನ್ನು ಮಾಡಬೇಕು. ಇದಕ್ಕೆ ತಂದೆ ತಾಯಿ, ಪೋಷಕರು ಪೋತ್ಸಾಹಿಸಬೇಕು. ಆ ಮೂಲಕ ಮಹಿಳೆಯು ಸ್ವಾವಲಂಬಿ ಜೀವನ ನಡೆಸುವ ಮೂಲಕ ತನ್ನ ಸ್ವಂತ ಕಾಲ ಮೇಲೆ ನಿಲ್ಲುವಂತಾಗಬೇಕು ಎಂದು ತಿಳಿಸಿದರು.

 ಇಂದು ಮಾಧ್ಯಮಗಳಿಂದ ಒಳ್ಳೆಯದು ಹಾಗು ಕೆಟ್ಟದ್ದು ಇದೆ. ಅದೇ ರೀತಿಯಲ್ಲಿ ಮೋಬೈಲ್‌ ನಿಂದಲೂ ಕೆಟ್ಟದ್ದು ಒಳ್ಳೆಯದು ಇದೆ. ಆದರೆ ನಾವು ಅವುಗಳ ಬಳಕೆಯನ್ನು ಮಾಡಿಕೊಳ್ಳುವುದರ ಮೇಲೆ ಅವಲಂಬಿಸಿದೆ. ಕೆಟ್ಟ ರೀತಿಯಲ್ಲಿ ಉಪಯೋಗಿಸಿದಾಗ ಕೆಟ್ಟದ್ದಾಗುತ್ತದೆ ಎಂದು ಮಾರ್ಮಿ ಕವಾಗಿ ನುಡಿದರಲ್ಲದೆ, ವಿಶೇಷ ವಾಗಿ ಹೆಣ್ಣು ಮಕ್ಕಳು ಹೇಗೆ ಉಪಯೋಗಿಸುತ್ತಾರೆ ಎಂಬುದರ ಮೇಲೆ ಅವರ ಜೀವನ ನಿಂತಿದೆ ಎಂದು ಕಿವಿ ಮಾತು ಹೇಳಿದರು.

ಇಂದು ಮಹಿಳೆಯರು ತಮ್ಮ ದೈನಂದಿನ ಜೀವನದ ಜೊತೆಯಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಗಮನ ಕೊಡಬೇಕು. ಉತ್ತಮ ಆರೋಗ್ಯಯುತ ಜೀವನ ವನ್ನು ನಡೆಸಬೇಕು. ಒಂದು ವೇಳೆ ಕುಟುಂಬದಲ್ಲಿ ಆನಾರೋಗ್ಯ ಕಾಡಿದರೆ ಮನೆ ಮನೆಯಂ ದಿಯೆಲ್ಲ ಆತಂಕ ಪಡಬೇಕಾಗು ತ್ತದೆ. ಇದಕ್ಕಾಗಿ ಶಾಂತಿ ನೆಮ್ಮದಿಯ ವಾತಾವರಣದ ಜೊತೆಗೆ ಒತ್ತಡ ಮುಕ್ತ ಜೀವನ ನಡೆಸಬೇಕು ಎಂದು ಕರೆ ನೀಡಿದರು.

ಅಂತೋಣಿ ವಿಲ್ಸನ್‌ ಮಾತ ನಾಡಿ ಸಮಾಜದಲ್ಲಿ ಏನಾದರೂ ಬದಲಾವಣೆ ಆಗಬೇಕು ಎಂದರೆ ಅದಕ್ಕೆ ಮಹಿಳೆಯರೇ ಮೂಲ ಕಾರಣ. ಅವರಿಂದ ಮಾತ್ರ ಏನಾದರೂ ಬದಲಾವಣೆ ಆಗಲು ಸಾಧ್ಯ. ಪ್ರಸ್ತುತ ಇನ್ನು ಕೆಲವೆ ದಿನಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಪ್ರತಿಯೊಬ್ಬರ ಮತ ಅಮೂಲ್ಯವಾದ್ದು. ನಾನೊಬ್ಬಳು ಮತ ಹಾಕದಿದ್ದರೆ ಏನಾಗುತ್ತದೆ ಎಂಬಂತ ಮನೋಭಾವ ಖಂಡಿತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲ. ಆದ ಕಾರಣ ಪ್ರತೊಯೊಬ್ಬ ಮತದಾ ರರು ಕಡ್ಡಾಯವಾಗಿ ಮತ ಚಲಾ ಯಿಸಿ ಎಂದು ಕರೆ ನೀಡಿದರಲ್ಲದೆ, ಮತದಾರ ಪಟ್ಟಿ ಯಲ್ಲಿ ತಮ್ಮ ಹಾಗು ತಮ್ಮ ಕುಟುಂ ಬದ ಹೆಸರುಗಳು ಇದೆಯಾ ಎಂಬುದನ್ನು ಕಡ್ಡಾಯವಾಗಿ ಪರಿ ಶೀಲನೆ ಮಾಡ ಬೇಕು. ಇಲ್ಲದಿದ್ದರೆ ಮತದಾನದ ದಿನದಂದು ನಮ್ಮಗಳ ಹೆಸರು ಎಲ್ಲಾದರೂ ಬಿಟ್ಟು ಹೋಗಿ ರಬಹುದು. ಆಗ ಯಾವ ಬೂತ್‌ ನಲ್ಲಿದೆ ಎಂದು ಹುಡು ಕಾಟಬೇಕಾಗತ್ತದೆ ಎಂದು ಮಾಹಿತಿಯನ್ನು ನೀಡಿದರು. ಅಮಲೋಧ್ಭವಿ ಮಾತೆ ದೇವಾ ಲಯದ ಮಹಿಳಾ ವಿಭಾಗದ ಸಂಘಟನೆಯ ಸಚೇತಕಿ ಶಾಂತಿ ವೇದಿಕೆಯಲ್ಲಿ ಉಪಸ್ಥಿತರಿ ದ್ದರು. ಮಹಿಳಾ ದಿನಾಚರಣೆ ಅಂಗ ವಾಗಿ ಪತ್ರಕರ್ತೆ ಫಿಲೋಮಿನಾ ರವರನ್ನು ಸನ್ಮಾನಿಸಲಾಯಿತು.

ಗ್ಲಾಡೀಸ್‌ ಮತ್ತು ಸಂಗಡಿಗರು ಪ್ರಾರ್ಥನೆ ಮಾಡಿಡರು. ನಿರ್ಮ ಲಾ ದಿವ್ಯರಾಜ್‌ ಸ್ವಾಗತಿಸಿದರು. ರೋಸಿ ಡಿ ಸೋಜಾ ಕಾರ್ಯಕ್ರಮ ನಿರೂಪಿಸಿದರು. ಆಗ್ನೀಸ್‌ ವಂದನಾರ್ಪಣೆ ಮಾಡಿದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದು ಬಹುಮಾನಗಳನ್ನು ವಿತರಿಸಲಾ ಯಿತು. ಮಹಿಳಾ ಸದಸ್ಯರು ಗಳಿಂದ ಇಸ್ರೇಲ್‌ ಘಟನೆ ಆಧಾರಿತ ಬೈಬ ಲ್‌ ಕುರಿತ ಕಿರು ನಾಟಕ ಪ್ರದರ್ಶನ ನಡೆಯಿತು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.