ಜಿಲ್ಲಾ ಸುದ್ದಿ

ಜಾತಿರಹಿತ ಪ್ರಜಾಪ್ರಭುತ್ವ ನಮಗೆ ಬೇಕಿದೆ :ಹಿರೇಮಗಳೂರು ಕಣ್ಣನ್‌

ಶಿವಮೊಗ್ಗ : ಜಾತಿರಹಿತವಾಗಿ ಎಲ್ಲರೂ ಕೂಡಿ ಬಾಳುವ ಪ್ರಜಾ ಪ್ರಭುತ್ವ ನಮಗೆ ಬೇಕಿದೆ ಎಂದು ಖ್ಯಾತ ವಾಗ್ಮಿ ಹಿರೇಮಗಳೂರು ಕಣ್ಣನ್‌ ಅಭಿಪ್ರಾಯಪಟ್ಟರು.

ಗುರುವಾರ ನಗರದ ಆದಿ ಚುಂಚನಗಿರಿ ಸಮುದಾಯ ಭವನ ದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಜಿಲ್ಲಾ  ಕನ್ನಡ ಸಾಹಿತ್ಯ ಪರಿಷತ್ತು, ಆದಿಚುಂಚ ನಗಿರಿ ಮಹಾಸಂಸ್ಥಾನ ಮಠದ ಸಂಯುಕ್ತಾಶ್ರಯದಲ್ಲಿ ಏರ್ಪಡಿ ಸಿದ್ದ 211 ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಹಾಗೂ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ದತ್ತಿ ಕಾರ್ಯಕ್ರಮದಲ್ಲಿ ಧರ್ಮ ಮತ್ತು ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು

ಪ್ರಜಾಪ್ರಭುತ್ವದ ಹಿತವನ್ನು ಕಾಪಾಡುವ ಜವಾಬ್ದಾರಿ ಪ್ರತಿ ಯೊಬ್ಬ ನಾಗರೀಕರ ಮೇಲಿದೆ. ಮತದಾನವೆಂಬುದು ಪ್ರಜಾಪ್ರ ಭುತ್ವದ ಪವಿತ್ರ ವ್ಯವಸ್ಥೆಯಾ ಗಿದ್ದು, ಸರಿಯಾದ ವ್ಯಕ್ತಿತ್ವಗಳಿಗೆ ಮತ ದಾನ ಮಾಡುವ ಮೂಲಕ ಅಂತಹ ಪಾವಿತ್ರತೆಯನ್ನು ಮತ್ತಷ್ಟು ಎತ್ತಿಹಿಡಿಯೋಣ.

ಆಧುನಿಕತೆಯ ಜಾಡಿನಲ್ಲಿ ಸಿಲುಕಿ ನಮ್ಮ ಸಂಸ್ಕೃತಿ ಕಣ್ಮರೆಯಾ ಗುತ್ತಿದೆ. ಯಾರು ನಮ್ಮ ಸಂಸ್ಕೃತಿ ಸಂಸ್ಕಾರ ಮರೆಯುತ್ತಾರೆ, ಅವರು ಪಶುವಿಗೆ ಸಮಾನರು. ಪಾಶ್ಚಾತ್ಯ ಸಂಸ್ಕೃತಿ ಬದುಕಿನ ಅವಿಭಾಜ್ಯತೆ ಎಂಬ ಮೌಡ್ಯದಿಂದ ಹೊರಬನ್ನಿ ಎಂದು ಹೇಳಿದರು.

ಆದಿಚುಂಚನಗಿರಿ ಮಹಾಸಂ ಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಮಾತನಾಡಿ, ಸಾಹಿತ್ಯ ಬದುಕಿನ ಭಾಗವಾಗಬೇಕು. ಧರ್ಮ ಮತ್ತು ಸಾಹಿತ್ಯಕ್ಕೆ ಬದು ಕನ್ನು ಸಧೃಡವಾಗಿ ಮುನ್ನಡೆಸುವ ಶಕ್ತಿಯಿದೆ.

ಬರಹದ ಗುಣಮಟ್ಟವು ಬರಹಗಾರನ ಸಾಹಿತ್ಯ ಪ್ರಜ್ಞೆಯ ಆಧಾರದ ಮೇಲಿದೆ. ಕಲ್ಪನೆ ಯಾಧಾರಿತ ಅನ್ವೇಷಣೆಗಳಿಂದ ಅನೇಕ ಅದ್ಭುತ ಪ್ರಯೋಜನಗ ಳನ್ನು ನಾವು ಪಡೆಯುತ್ತಿದ್ದೇವೆ. ಕವಿ, ವಿಜ್ಞಾನಿಗಳಿಂದ ಒಡಮೂ ಡುವ ಕಲ್ಪನಾಧಾರಿತ ಅನ್ವೇಷಣೆ ಗಳು ವಿಶ್ವದ ಸಧೃಡತೆಯ ಶಕ್ತಿಯಾಗಿದೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲಾ ಪೋಲಿಸ್‌ ವರಿಷ್ಠಾಕಾರಿ ಮಿಥುನ್‌ ಕುಮಾರ್‌ ಮಾತನಾಡಿ, ಶ್ರೀಮಠ ನನ್ನಂತಹ ಅನೇಕ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರೌಢಶಾಲಾ ಹಂತದ ಲ್ಲಿಯೇ ತಯಾರಿಗಳು ನಡೆಯ ಬೇಕಿದೆ. ಅದಕ್ಕೆ ಪೂರಕವಾಗುವ ಎಲ್ಲಾ ತರಬೇತಿಗಳಿಗೆ ಸಹಕಾರ ವನ್ನು ನಮ್ಮಿಂದ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಆದಿಚುಂಚ ನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ, ನಿವೃತ್ತ ಅಕಾರಿ ಎನ್‌.ಹರಿಕುಮಾರ್‌, ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ ಸೇರಿದಂತೆ ಮತ್ತಿತರರು ಉಪಸ್ಥಿತ ರಿದ್ದರು. ಎನ್‌ಇಎಸ್‌ ಸಾರ್ವಜ ನಿಕ ಸಂಪರ್ಕಾಕಾರಿ ಸಿ.ಎಂ. ನೃಪತುಂಗ ಕಥಾ ವಾಚನ ಮಾಡಿ ದರು. ಎನ್‌.ಜೆ ಮೆಲೊಡೀಸ್‌ ನವಜ್ಯೋತಿ ಅಂಧರ ಸಂಸ್ಥೆಯ ಗಾಯಕರಿಂದ ಹಾಡು, ಕವಿಗಳಾದ ಮಾನಸ ಶಿವರಾಮಕೃಷ್ಣ, ಕುಪ್ಪೇ ರಾವ್‌, ಎಸ್‌.ರುದ್ರೇಶ್‌ ಆಚಾರ್‌ ಕವನ ವಾಚನ ಮಾಡಿದರು.