ಜಿಲ್ಲಾ ಸುದ್ದಿ

ವಿಶೇಷವಾಗಿ ಸ್ಟೈಲ್‌ ಡ್ಯಾನ್ಸ್ ಮೂಲಕ ಸಾರ್ವಜನಿಕರಿಗೆ ಮತದಾನ ಜಾಗೃತಿ

ಶಿವಮೊಗ್ಗ: ಮತದಾನ ಜಾಗೃತಿಗಾಗಿ ಮಹಾನಗರ ಪಾಲಿಕೆ, ಜಿ ಲ್ಲಾಡಳಿತ, ಜಿ,ಪಂ, ಮತ್ತು ಸ್ವೀಪ್‌ ಕಮಿಟಿ ವತಿಯಿಂದ ಸಿಟಿ ಸೆಂಟರ್‌ ಮಾಲ್‌ನಲ್ಲಿ ವಿಶೇಷ ವಾಗಿ ಸ್ಟೈಲ್‌ ಡ್ಯಾನ್ಸ್ ಮೂಲಕ ಸಾರ್ವಜನಿ ಕರಿಗೆ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾ ಡಿದ ಸ್ವೀಪ್‌ ಸಮಿತಿಯ ಅನುಪಮ, ಈ ಬಾರಿಯ ಚುನಾವಣೆಯಲ್ಲಿ ಅತಿಹೆಚ್ಚು ಶೇಕಡವಾರು ಮತದಾನವಾಗಬೇಕು ಎಂಬ ಸಂಕಲ್ಪದಿಂದ ಜಿಲ್ಲಾಡಳಿತದೊಂ ದಿಗೆ ಸೇರಿಕೊಂಡು ಮತದಾನದ ಜಾಗೃತಿ ಮೂಡಿಸುತ್ತಿದ್ದೇವೆ. ಇದ ಕ್ಕಾಗಿ ವಿಶಿಷ್ಟ, ವಿಭಿನ್ನ ಕಾರ್ಯ ಕ್ರಮ ಗಳನ್ನು ನಡೆಸುತ್ತಿದ್ದೇವೆ. ಮತದಾರರು ಯಾವುದೇ ಕಾರಣ ಕ್ಕೂ ತಪ್ಪದೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು ಎಂದರು.ಸ್ಟೈಲ್‌ ಡ್ಯಾನ್ಸ್ ಕ್ರಿವ್‌ನಿಂದ ನೃತ್ಯ ಕಾರ್ಯಕ್ರಮ ಹಾಗೂ ಲಹರಿ ಸ್ವಸಹಾಯ ಸಂಘದ ಮಹಿಳೆಯರಿಂದ ಡೊಳ್ಳು ಕುಣಿತ ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ ಪ್ರಮು ಖರಾದ ಸುಪ್ರಿಯಾ, ಲೋಕೇ ಶಪ್ಪ, ರತ್ನಾಕರ್‌, ಗೀತಾ, ರೇಣು ಮತ್ತು ಸಿಬ್ಬಂದಿಗಳು ಇದ್ದರು.