ಜಿಲ್ಲಾ ಸುದ್ದಿ

ಈ ಬಾರಿ ನನ್ನ ಗೆಲುವು ಖಚಿತ : ಶಾರದಾ ಪೂರ್ಯ್ನಾಯ್ಕ

ಶಿವಮೊಗ್ಗ: ರಾಷ್ಟ್ರೀಯ ಪಕ್ಷಗಳುದಿಕ್ಕು ತಪ್ಪುತ್ತಿರುವ ಇಂತಹ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ತುರ್ತಾಗಿದೆ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಶಾರದಾ ಪೂರ್ಯ್ ನಾಯ್ಕ ಅಭಿಪ್ರಾಯ ಪಟ್ಟಿದ್ದಾರೆ.

ಅವರು  ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪ್ರಸ್ತುತ ರಾಷ್ಟ್ರೀಯ ಪಕ್ಷಗಳು ತಮ್ಮ ಜವಾಬ್ದಾರಿಗಳನ್ನು ಮರೆತಿವೆ. ಜನರನ್ನು ತಲುಪುವಲ್ಲಿ ವಿಲವಾಗಿವೆ. ಸಮಸ್ಯೆಗಳು ಹೆಚ್ಚಾಗುತ್ತಿವೆ. ಇಂತಹ ಸಂದಿಗ್ಧ ಸಮಯದಲ್ಲಿ ಪ್ರಾದೇಶಿಕ ಪಕ್ಷಗಳು ಗಟ್ಟಿಗೊಳ್ಳಬೇಕಾಗಿದೆ ಈ ನಿಟ್ಟಿನಲ್ಲಿ ಜೆಡಿಎಸ್‌ ಪಕ್ಷ ಜನರ ಬಳಿ ಹೋಗಿದ್ದು, ನಮ್ಮ ನಾಯಕ ಹೆಚ್‌.ಡಿ. ಕುಮಾರಸ್ವಾಮಿ, ಸಿಎಂ ಆಗಿಯೇ ಆಗುತ್ತಾರೆ ಎಂದರು.

ತಮ್ಮ ಪತಿ ಪೂರ್ಯ್ ನಾಯ್ಕರ ಆದರ್ಶಗಳು ನನ್ನ ಮುಂದಿವೆ. ಅವರ ಜನಪ್ರಿಯತೆ ನನ್ನ ರಾಜಕಾ ರಣಕ್ಕೆ ತಂದಿದೆ. ಜನರು ನನ್ನನ್ನು ಪ್ರೀತಿಯಿಂದ ಜಿ.ಪಂ ಸದಸ್ಯ ರಾಗಿ, ಅಧ್ಯಕ್ಷರನ್ನಾಗಿ, ಶಾಸಕಿಯ ನ್ನಾಗಿ ಮಾಡಿದ್ದಾರೆ. ಈ ಎಲ್ಲಾ ಅವಗಳಲ್ಲಿ ನನ್ನ ಕ್ಷೇತ್ರದ ಜನತೆಗೆ ನ್ಯಾಯ ಕೊಟ್ಟಿದ್ದೇನೆ ಎಂಬ ಭರವಸೆ ನನ್ನದು. ತಮ್ಮ ಕಾಲದಲ್ಲಿ ಮತ್ತು ಹೆಚ್‌.ಡಿ.ಕುಮಾರಸ್ವಾಮಿ ಯವರು ಮುಖ್ಯಮಂತ್ರಿಯಾಗಿದ್ದಾಗ ಆದ ಅಭಿವೃದ್ಧಿಗಳನ್ನು ಕ್ಷೇತ್ರದ ಜನತೆ ಮರೆತಿಲ್ಲ. ಹೀಗಾಗಿ ಈ ಬಾರಿ ನನ್ನ ಗೆಲುವು ಖಚಿತ ಎಂದರು.

ಕಳೆದ ಬಾರಿ ತಮ್ಮ ಸೋಲಿಗೆ ಕಾರಣ ಏನಿರಬಹುದು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಬಾರಿ ಬಿಎಸ್‌. ಯಡಿಯೂರಪ್ಪನವರು ಸಿಎಂ ಎಂದು ಬಿಜೆಪಿಯಲ್ಲಿ ಬಿಂಬಿಸಲಾ ಗಿತ್ತು. ಹಾಗಾಗಿ ಬಿಜೆಪಿಗೆ ಬಿಎಸ್‌ ವೈ ಕಾರಣದಿಂದ ಮತ ಹಾಕಿದರು. ಆದರೆ ಈ ಬಾರಿ ಪರಿಸ್ಥಿತಿ ಹಾಗೇ ನೂ ಇಲ್ಲ. ಜನರಿಗೆ ಸ್ಪಷ್ಟತೆಯ ಅರಿವಾಗಿದೆ. ಅಷ್ಟಾದರೂ ಕಳೆದ ಬಾರಿ ತಾವು 65 ಸಾವಿರಕ್ಕೂ ಹೆಚ್ಚು ಮತಗಳನ್ನು  ಪಡೆದಿದ್ದೇನೆ. ಈ ಬಾರಿ ಆಡಳಿತ ಪಕ್ಷದ ವಿರೋಧದ ಅಲೆಯೂ ನನ್ನ ಸಹಾಯಕ್ಕೆ ಬರ ಲಿದೆ ನನ್ನ ಗೆಲುವು ಖಚಿತ ಎಂದರು.

ಶರಾವತಿ ಮುಳುಗಡೆ ಸಂತ್ರ ಸ್ತರ ಸಮಸ್ಯೆಹಾಗೆಯೇ ಇದೆ. ರೈತರು ತುಂಬಾ ಸಂಕಷ್ಟದಲ್ಲಿ ದ್ದಾರೆ. ನಾನು ಶಾಸಕಿಯಾದ ಕ್ಷಣದಿಂದಲೂ ಈ ಸಮಸ್ಯೆ ಹಾಗೇ ಇದೆ. ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರ ನೆರವಿ ನಿಂದ ನಮ್ಮ ಭಾಗದಲ್ಲಿ ಕಂದಾಯ ಭೂಮಿಯಲ್ಲಿ ಸಾಗುವಳಿ ಮಾಡು ತ್ತಿದ್ದ ಅನೇಕರಿಗೆ ಹಕ್ಕುಪತ್ರ ನೀಡಿ ದ್ದೇನೆ. ಈಗ ತಾಂತ್ರಿಕ ತೊಂದರೆ ಇದೆ. ತಾವು ಗೆದ್ದು ಬಂದರೆ ಶರಾವತಿ ಮುಳುಗಡೆ ಸಂತ್ರಸ್ತ ರೈತರ ಸವಸ್ಯೆ ಬಗೆಹರಿಸುತ್ತೇನೆ ಎಂದರು.

ಜನಸ್ಪಂದನೆಯೇ ರಾಜಕಾ ರಣ, ಜನರ ಪ್ರೀತಿಯ ಮುಂದೆ ಹಣ,ಜಾತಿಯ ನಂಟು ಸಾಧ್ಯ ವಾಗುವುದಿಲ್ಲ . ಆದರೆ ಹಣವಂ ತರ ಮುಂದೆ ಗೆಲ್ಲುವುದು ಕೂಡ ಅಷ್ಟು ಸುಲಭವಲ್ಲ. ನನ್ನ ಕ್ಷೇತ್ರ ದಲ್ಲಿ ಜಾತಿ, ಹಣ ಪ್ರಭಾವ ಬೀರು ತ್ತದೆ ಎಂಬ ನಂಬಿಕೆ ನನಗಿಲ್ಲ. ಜನರ ಪ್ರೀತಿಯಂತೂ ನನ್ನ ಮೇಲಿ ದೆ. ಅವರ ಪ್ರೀತಿಯೇ ನನ್ನನ್ನು ಈ ಬಾರಿ ಗೆಲ್ಲಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಪ್ರೆಸ್‌ ಟ್ರಸ್ಟ್ ಅಧ್ಯಕ್ಷ, ಎನ್‌.ಮಂಜು ನಾಥ್‌, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್‌ ಯಡಗೆರೆ, ನಾಗರಾಜ್‌ ನೇರಿಗೆ, ಹೊನ್ನಾಳಿ ಚಂದ್ರಶೇಖರ್‌, ಸಂತೋಷ್‌ ಕಾಚಿನಕಟ್ಟೆ ಇದ್ದರು.