ಜಿಲ್ಲಾ ಸುದ್ದಿ

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗ್ರಾಮಾಂತರ ವಿಧಾನ ಸಭಾ ಚುನಾವಣೆ ನಿರ್ವಹಣೆ ಸಮಿತಿ ಕಾರ್ಯಗಾರಕ್ಕೆ ಚಾಲನೆ

ಶಿವಮೊಗ್ಗ : ಶಿವಮೊಗ್ಗದ ಬಿಜೆಪಿಯ ಕಾರ್ಯ್ಲಯದಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಚುನಾವಣ ನಿರ್ವಹಣಾ ಸಮಿತಿಯ ಕಾರ್ಯ ಗಾರ ನಡೆಯಿತು.

ಕಾರ್ಯ್ಗಾರವನ್ನ ಉದ್ಘಾಟಿ ಸಿದ ಮಾಜಿ ಎಂಎಲ್‌ ಎಸಿ ಆರ್‌.ಕೆ. ಸಿದ್ದರಾಮಣ್ಣ ಮಾತ ನಾಡಿ, ಚುನಾವಣೆ ಆಯೋಗದ ಪ್ರಯತ್ನವೂ ಸಹ ಹೆಚ್ಚು ಮತ ದಾನದ ಗುರಿ ಹೊಂದಿದೆ. ಆ ನಿಟ್ಟಿನಲ್ಲಿ ಬಿಜೆಪಿಯ ಪ್ರಯತ್ನವೂ ಹೌದು. ಆದರೆ ನಮ್ಮದು ಸ್ವಾರ್ಥಿದೆ. ಬಿಜೆಪಿ ಚಿಹ್ನೆಗೆ ಮತಹಾಕಿ ಎಂ ಬುದು ಸ್ವಾರ್ಥವಾಗಿದೆ ಎಂದರು.

ಹಣ, ಜಾತಿ ಆಧಾರದ ಮೇರೆ ಗೆ ಚುನಾವಣೆ ನಡೆಯಲಿದೆ ಎಂಬುದು ನಮ್ಮಗಳ ಆರೋಪ ವಾಗಿದೆ. ಆದರೆ ಇವುಗಳು ಚುನಾವಣೆಯಲ್ಲಿ ಸೀಮಿತವಾದ ಪ್ರಭಾವ ಇರುತ್ತೆದೆ ವಿನಃ ಅದರ ಆಧಾರದಮೇರೆಗೆ ಎಲ್ಲ ಚುನಾ ವಣೆ ನಡೆಯಲಿದೆ ಎಂಬುದು ಆಧಾರ ರಹಿತ ವಾದ ವಾಗುತ್ತದೆ ಎಂದು ಹೇಳಿದರು.

ಚುನಾವಣೆಗಾಗಿ ರಾಜಕೀಯ ಚಟುವಟಿಕೆ ನಡೆಸುವ ಪಕ್ಷನ ಮ್ಮದು ಅಲ್ಲ. ಇದು ನಿರಂತರವಾಗಿ ನಡೆಸುವ ರಾಜಕೀಯ ಚಟುವ ಟಿಕೆ ಆಗಿದೆ. ನಾಳೆ ಅಭ್ಯರ್ಥಿ ಘೋಷಣೆ ಆಗಲಿದೆ. ಅವರಿಗೆ ಅವರದ್ದೇ ಆದ ಟೆನ್ಷನ್‌ ಲೆಕ್ಕಾ ಚಾರವಿರುತ್ತದೆ. ಹಾಗಾಗಿ ವಿಭಾಗದ ಕಾರ್ಯಕರ್ತರು ತಮ್ಮ ಜವಬ್ದಾರಿಯನ್ನ ಸರಿಯಾಗಿ ನಿಭಾಯಿಸುವಂತೆ ಕರೆ ನೀಡಿದರು.

ಸಂಘಟಿತ ಪಕ್ಷವಾಗಿ ಕಾರ್ಯ ಕರ್ತರು ಏನು ಮಾಡಬೇಕು ಎಂದು 30 ಪಟ್ಟಿ ಮಾಡಲಾಗಿದೆ ಹೊಸದಾಗಿ ನಾಲ್ಕು ಹೊಸ ಜವಬ್ದಾರಿ ಹಚ್ಚಿಸಲಾಗಿದೆ. ಹೈಟೆ ಕ್‌ ಪ್ರಚಾರ,ರ್ಯ್ಲಿ, ವಸತಿಗಳು ಹೊಸ ಜವಬ್ದಾರಿಯಾಗಿದೆ. ಅಭ್ಯ ರ್ಥಿಗಳು ಕೀವೋಟರ್‌ ಗಳ ಸಂಪರ್ಕ, ವಾರ್ಡ್‌ ಗೆ ಭೇಟಿ ಮಾಡುವುದು ಜವಬ್ದಾರಿ ಆಗಿದೆ. 29 ದಿನ ಮಾತ್ರ ಚುನಾವಣೆ ಪ್ರಕ್ರಿಯೆಗೆ ಕಾಲಾವಕಾಶ ದೊರೆ ಯುತ್ತಿದೆ. ಅಷ್ಟರೊಳಗೆ ತಮ್ಮ ಜವ ಬ್ದಾರಿಯನ್ನ ಮಾಡಿ ಮುಗಿಸಲು ಸೂಚಿಸಲಾಗಿದೆ ಎಂದರು.

ನಮ್ಮ ಶಕ್ತಿ ಕೃಢೀಕರಣಗೊಳಿಸಿ ಮತವನ್ಬಾಗಿ ಪರಿವರ್ತಿಸಬೇಕು. ನಮ್ಮನಮ್ಮ ವಿಭಾಗದಲ್ಲಿ ಏನು ಕೆಲಸ ಮಾಡಬೇಕು ಅದನ್ನ ಕಾರ್ಯಕರ್ತರು ಕೈಗೊಳ್ಳಬೇಕು ಎಂದರು. ಗೃಹ ಮಂತ್ರಿ, ಮಾಜಿ ಸಿಎಂಗಳನ್ನ ಹೇಗೆ ಬಳಸಿಕೊಂಡು ಚುನಾವಣೆ ಎದುರಿಸಬೇಕು ಎಂದು ವಿಭಾಗಗಳು ಯೋಚಿಸ ಬೇಕು. ಪ್ರತಿ ವಿಭಾಗಕ್ಕೆ ಬಹಳ ಜವಬ್ದಾರಿ ಇರುತ್ತದೆ. ಅದನ್ನಸರಿ ಯಾಗಿ ನಿಭಾಯಿಸಿದಲ್ಲಿ ಚುನಾ ವಣೆ ಯಶಸ್ವಿಯಾಗಿ. ಸ್ವಂತ ಬಲದ ಮೇಲೆ ಬಿಜೆಪಿ ಅಕಾರಕ್ಕೆ ತರಬೇಕಿದೆ.

150 ಸ್ಥಾನದ ಗುರಿ ಇದೆ. ಈಗಿರುವ 104ಜನ ಶಾಸಕರಿದ್ದಾರೆ 46 ಸ್ಥಾನ ಹೆಚ್ಚು ಗೆಲ್ಲಬೇಕಿದೆ. ಆಡಳಿತ ವಿರೋ ಸಂಗತಿ ಇರು ತ್ತದೆ. ಇದಕ್ಕೆ ಪರಿಹಾರ ಹುಡ ಕಬೇಕಾಗಿದ್ದು ಎಲ್ಲರ ಸಹಕಾರ ಪಡೆದು ಸೂಕ್ಷ್ಮ ಮಾಡಿ ಗುರುತು ಮಾಡಿಕೊಂಡು ಕೆಲಸಮಾಡ ಬೇಕಿದೆ. ಅದು ಕಾರ್ಯಕರ್ತರು ತಮ್ಮ ಜವಬ್ದಾರಿ ಅರಿತು ಕೆಲಸ ಮಾಡಬೇಕು ಎಂದರು.

ಸಾಮಾಜಿಕ ಜಾಲತಾಣ ಬಹಳ ದೊಡ್ಡ ಕೆಲಸವಿದೆ. ಏ. 11 ಕ್ಕೆ ರಾಜ್ಯ ಚುಬಾವಣೆಯ ಸಹ ಉಸ್ತುವಾರಿ ಅಣ್ಣಮಲೈ ಆಗಮಿ ಸುತ್ತಿದ್ದಾರೆ. ಗ್ರಾಮಾಂತರದಲ್ಲಿ 40 ಜನರ ಪಟ್ಟಿ ಇದೆ ಇದನ್ನಹೆಚ್ಚಿ ಸಬೇಕಿದೆ. ನನ್ನ ಬೂತ್‌ ಎಂಬ ಅಭಿಯಾನದಲ್ಲಿ ನನ್ನ ತೊಡಗಿಸಿ ಈ ಎಲ್ಲಾ ಜವಬ್ದಾರಿ ನಿಭಾಯಿ ಸಬೇಕಿದೆ ಎಂದರು.

ಚುನಾವಣೆ ಯಾವುದೋ ದಿಕ್ಕಲ್ಲಿ ಸಾಗೊಲ್ಲ. ವಿವಿಧ ವಿಭಾಗ ಗಳಲ್ಲಿ ಕೆಲಸ ಮಾಡಲಾಗಿದೆ. 2023 ಚುನಾವಣೆ, ಕಾರ್ಯ ಗಾರ, ಎರಡು ಮಂಡಲ, ಶಿವ ಮೊಗ್ಗದ ಮೂರು ವಾರ್ಡ್‌ ಗಳು ಸೇರಿಕೊಂಡಿರುತ್ತದೆ. ಎಲ್ಲಾ ಕಾರ್ಯಕರ್ತರನ್ನ ಸಂಯೋಜನೆ ಮಾಡಿ 30 ವಿಭಾಗಗಳನ್ನ ಮಾಡಲಾಗಿದೆ ಅದರ ಪ್ರಕಾರವೇ ಚುನಾವಣೆ ನಡೆಯಲಿದೆಎಂದು ರತ್ನಾಕರ್‌ ಶೆಣೈ ತಿಳಿಸಿದರು.

ನಂತರ ದತ್ತಾತ್ರಿಯವರು ವಿಭಾಗಳನ್ನ ಘೋಷಣೆ ಮಾಡಿ ದರು. ಚುನಾವಣೆ ಪ್ರಭಾರಿಯಾಗಿ ಎನ್‌ ಜೆ ನಾಗರಾಜ್‌, ಹೃಷಿಕೇಶ್‌ ಪೈ, ಸಹಸಂಚಾಲಕರಾಗಿ ಸಿಂಗನ ಹಳ್ಳಿ ಸುರೇಶ್‌, ಚುನಾವಣೆಗಾಗಿ ಕುವೆಂಪರಸ್ತೆಯಲ್ಲಿ ಕಾರ್ಯ್ ಲಯ ಉದ್ಘಾಟನೆ ನಾಳೆ ಆಗಲಿದೆ. ಬೂತ್‌ ಅಧ್ಯಕ್ಷರುಎಂಎಲ್ಸಿ ರುದ್ರೇ ಗೌಡರು ಆಗಮಿಸಲಾಗುತ್ತಿದೆ. ಕುಂಸಿ ವೇದ, ಹಾರನಹಳ್ಳಿ ಅಭಿ ಲಾಷ್‌ ರಾಮಕೃಷ್ಣ ಮೆಸ್ತಾ ಇನ್‌ ಚಾರ್ಜ್‌ ಆಗಲಿದ್ದಾರೆ ಎಂದರು.

ಅತಿಥಿ ಶಿಷ್ಠಾಚಾರ ಹೊಳಲೂರುಮೇಘರಾಜ್‌, ವಾಹನ ಮೇಲುಸ್ತುವಾರಿ ಹೀಗೆ 34 ವಿಭಾಗ ರಚಿಸಿ ಅವರಿಗೆ ಜವಬ್ದಾರಿ ನೀಡಲಾಯಿತು.