ಜಿಲ್ಲಾ ಸುದ್ದಿ

ಶ್ರೀ ಶ್ರೀಧರ ಸ್ವಾಮಿಗಳ ಚರಿತ್ರಾಮೃತ ಗ್ರಂಥ ಲೋಕಾರ್ಪಣೆ | ಮನುಷ್ಯ ಧರ್ಮಕ್ಕೆ ಪ್ರಾಮುಖ್ಯತೆ ಕೊಡುವುದು ಶ್ರೀಧರರ ಆಶಯವಾಗಿತ್ತು:ಡಾ.ವಿಘ್ನೇಶ್‌

ಸಾಗರ:ಮನುಷ್ಯ ಧರ್ಮಕ್ಕೆ ಪ್ರಾಮುಖ್ಯತೆ ಕೊಡುವುದು ಶ್ರೀ ಶ್ರೀಧರ ಸ್ವಾಮಿಗಳವರ ಬದುಕಿನ ಆಶಯವಾಗಿತ್ತು. ಅವರು ಐಷಾ ರಾಮಿ ಬದುಕನ್ನು ಬಯಸಲಿಲ್ಲ. ಧನಕನಕದ ಬಗ್ಗೆ ಅವರು ಯಾವತ್ತೂ ಯೋಚಿಸಿರಲಿಲ್ಲ. ವ್ಯಾಮೋಹದಿಂದ ಪೂಜೆ ಮಾಡುವವರೆಗೆ ನಿನಗೆ ಶ್ರೇಯಸ್ಸು ಸಿಗುವುದಿಲ್ಲ ಎಂದಿದ್ದರು ಎಂದು ಕೃತಿಕಾರರ ಪುತ್ರ ಡಾ.ವಿಘ್ನೇಶ್‌ ಮಂಚಾಲೆ ಅಭಿಪ್ರಾಯಪಟ್ಟರು.

ಇಲ್ಲಿನ ದತ್ತಮಂದಿರಲ್ಲಿ ಭಗ ವಾನ್‌ ಶ್ರೀ ಶ್ರೀಧರ ಸ್ವಾಮಿಗಳವರ 50 ನೇ ಆರಾಧನಾ ಮಹೋ ತ್ಸವದ ಸಂದರ್ಭದಲ್ಲಿ ರವೀಂದ್ರ ಪುಸ್ತಕಾಲಯ ಪ್ರಕಟಿಸಿದ `ಶ್ರೀ ಶ್ರೀಧರ ಸ್ವಾಮಿಗಳ ಚರಿತ್ರಾಮೃತ? ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿ, ತಮ್ಮ ತಂದೆ ಬರೆದ ಕೃತಿಯನ್ನು ಸೈದ್ಧಾಂತಿಕ ಚೌಕಟ್ಟಿನಲ್ಲಿ ಪುನರ್ಮುದ್ರಣ ಮಾಡಲಾಗಿದೆ ಎಂದರು.

ಮನುಷ್ಯ ಪ್ರಯತ್ನವೇ ಮುಖ್ಯ ಎಂದು ಹೇಳುತ್ತಿದ್ದ ಶ್ರೀಧ ರರು, ಮೌನ, ಏಕಾಂತದ ಶಕ್ತಿ ಯನ್ನು ಸಿದ್ಧಿಸಿಕೊಂಡಿದ್ದರು. ಕೆ.ವಿ. ಸುಬ್ಬಣ್ಣನವರೂ ಅವರ ಕುರಿತು ಪವಾಡಸದೃಶ್ಯ ವ್ಯಕ್ತಿ ಎಂದಿದ್ದರು. ಶ್ರೀಧರರು ಭಸ್ಮ, ಲಿಂಗ ಸೃಷ್ಟಿ ಮಾಡಲಿಲ್ಲ. ಅವರು ಯುವ ಪ್ರವರ್ತಕರು. ಮನುಷ್ಯನ ಅಸ್ತಿತ್ವಕ್ಕೆ ಮತ್ತು ವ್ಯಕ್ತಿತ್ವಕ್ಕೆ ಒಂದು ಸೈದ್ಧಾಂತಿಕ ಆಯಾಮ ಕೊಡಲು ಯತ್ನಿಸಿದರು. ಮನುಷ್ಯನ ವ್ಯಕ್ತಿ ತ್ವಕ್ಕೆ ಆಧ್ಯಾತ್ಮದ ಸ್ಪರ್ಶ ನೀಡಿದರು ಎಂಬೆಲ್ಲ ಮಾಹಿತಿಗಳು ಈ ಪುಸ್ತಕದಲ್ಲಿವೆ ಎಂದು ವಿಶ್ಲೇಷಿ ಸಿದರು.

ಆಧ್ಯಾತ್ಮಿಕ ತಳಹದಿಯೇ ಭಾರತೀಯ ಸಂಸ್ಕತಿಯ ಹೆಚ್ಚು ಗಾರಿಕೆ. ಸರಕಾರಗಳು, ಸಮಾಜ ವ್ಯವಸ್ಥಿತವಾಗಿ ಬಾಳಿ ಬದುಕಲು ಆಧ್ಯಾತ್ಮಿಕ ತಳಹದಿ ಬೇಕು. ಸರಳತೆ, ಸಂವೇದನಾಶೀಲತೆ, ಸಹಬಾಳ್ವೆ ಇವೇ ಆಧ್ಯಾತ್ಮಿಕತೆಯ ಲಕ್ಷಣಗಳು. ಕೊರೊನಾ ಕಾಲದಲ್ಲಿ ಸನಾತನ ಸಂಸ್ಕತಿಯ ಪರಿಚಯವಾ ಗಿದೆ. ಆಗ ಉಳಿಸಿದ್ದು ನಮ್ಮ ಆಧ್ಯಾ ತ್ಮಿಕತೆ. ಯಾವಾಗ ನಾವು ಆಧ್ಯಾತ್ಮಿ ಕವಾಗಿ ದಿವಾಳಿಯಾಗುತ್ತೇವೋ ಆಗ ಈ ದೇಶ ತನ್ನ ಅಸ್ತಿತ್ವ ಮತ್ತು ವ್ಯಕ್ತಿತ್ವ ಕಳೆದುಕೊಳ್ಳುತ್ತದೆ ಎಂದರು.  

ನಾನು ಹತ್ತನೇ ತರಗತಿಯಲ್ಲಿ ಫೇಲ್‌ ಆಗಿದ್ದು, ಇಂಗ್ಲೀಷ್‌ನಲ್ಲಿ ಕೇವಲ 5 ಅಂಕ ಪಡೆದಿದ್ದೆ. ನಂತರ ಒಮ್ಮೆ ತಂದೆಯವರು ಶ್ರೀಧರರಲ್ಲಿ ನನ್ನನ್ನು ಕರೆದೊಯ್ದಾಗ, ಈ ವಿಷಯ ಪ್ರಸ್ತಾಪಿಸಿದಾಗ ಅವರು ಮಂತ್ರಾಕ್ಷತೆ ಕೊಟ್ಟು ಶ್ರದ್ಧೆಯಿಂದ ಓದು ಎಂದು ಹರಸಿದರು. ಮುಂದೆ ಇಂಗ್ಲೀಷ್‌ ನಲ್ಲಿ ರ್ಯ್ಂಕ್‌ ಗಳಿಸಿದ್ದಲ್ಲದೇ ಉತ್ತಮ ಪ್ರಾಧ್ಯಾ ಪಕನಾಗಿ ಯಶಸ್ಸು ಸಂಪಾದಿಸಿದೆ ಎಂದವರು ಶ್ರೀಧರರ ಸಂಪರ್ಕ ಹೇಗೆ ತಮ್ಮ ಬದುಕಿಗೆ ತಿರುವು ಕೊಟ್ಟಿತು ಎಂಬುದನ್ನು ವಿವರಿಸಿ ದರು.

ಕೃತಿಯನ್ನು ಶ್ರೀಧರ ಸ್ವಾಮೀಜಿಯವರ ಒಡನಾಡಿ, ಗುರುಸೇವಕ ಮಂಜಣ್ಣ ಕೈತೋಟ ಲೋಕಾರ್ಪಣೆ ಮಾಡಿದರು.

ನಿವೃತ್ತ ಪ್ರಾಧ್ಯಾಪಕ ಜಿ.ಟಿ. ಶ್ರೀಧರ ಶರ್ಮಾ ಮಾತನಾಡಿ, ಶ್ರೀಧರ ಸ್ವಾಮಿಗಳವರ ಬದುಕು ವರ್ಣನಾತೀತ. ಎಷ್ಟು ಓದಿದರೂ ಅರ್ಥವಾಗದ ವ್ಯಕ್ತಿತ್ವ ಅವರದು. ಭಿಕ್ಷುಕರನ್ನು ಶ್ರೀಧರ ಸ್ವಾಮಿಗಳು ತಿರಸ್ಕರಿಸದೇ ಅವರ ಹಸಿವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕುಗ್ವೆ ನಾರಾಯಣಪ್ಪ ನವರು ಗುರುಭಕ್ತರಾಗಿದ್ದು, ಶ್ರೀಧರರ ಶಿಷ್ಯ ವಾತ್ಸಲ್ಯ ಹೇಗಿತ್ತು ಎಂಬುದು ಗುರು ಪರಂಪರೆಗೆ ಸಾಕ್ಷಿಯಾಗಿ ನಡೆದ ಘಟನೆಯನ್ನು ಅವರು ತಿಳಿಸಿದರು. ಶ್ರೀಧರರ ಸಂಪರ್ಕಕ್ಕೆ ಬಂದವರಿಗೆ ವಿವಿಧ ರೀತಿಯ ಅನನ್ಯ ಅನುಭವಗಳಾ ಗಿದ್ದು, ಅವರ ಸಮಕಾಲೀನರು ಈ ಭಾಗದಲ್ಲಿದ್ದಾರೆ ಎಂದರು.

ಕೃತಿಯ ಪ್ರಕಟಣೆಗೆ ಸಹ ಯೋಗ ನೀಡಿದ ರೇಣುಕಾ ಬಲಿ ಮಾತನಾಡಿ, ಶ್ರೀಧರರ ಚರಿತ್ರೆಯ ಮೂಲ ಗ್ರಂಥವನ್ನು ಓದಿ ನಾನು ರೋಮಾಂಚನಗೊಂಡೆ. ಅವರು ವಿಶ್ವಾತ್ಮಕ ಅಂತ:ಶಕ್ತಿ ಹೊಂದಿ ದ್ದರು. ಪುಸ್ತಕ ಪ್ರಕಟಣೆಗೆ ಹೆಚ್ಚು ಹಣವಿಲ್ಲ ಎಂದು ಮಾಂಗಲ್ಯ ಸರ ಮಾರಿ ಹಣ ನೀಡೋಣ ಎಂದು ಯೋಚಿಸಿದ್ದೆ. ಆದರೆ ನಾನು ಅಂದುಕೊಂಡಂತೆ ಆರಾಧನೆ ಹೊತ್ತಿಗೆ ಪುಸ್ತಕ ಮುದ್ರಣ ಗೊಂಡು ಬಂದಿರುವುದು ಶ್ರೀಧರರ ಮಹಿಮೆಗೆ ಸಾಕ್ಷಿ. ಶ್ರೀಧರರ ತೀರ್ಥ, ಮಂತ್ರ ಮತ್ತು ಮಂತ್ರಾಕ್ಷತೆಗೆ ಅಪಾರ ಶಕ್ತಿ ಇದೆ. ಶ್ರೀಧರ ಮಂದಿರಕ್ಕೆ ಹೋಗುವ ಪ್ರತಿಯೊಂದು ಮೆಟ್ಟಿಲಿಗೂ ಅವ್ಯಕ್ತ ಶಕ್ತಿ ಇದೆ. ನನ್ನ ಬದುಕಿಗೆ ದಾರಿ ತೋರಿದ ಮಹಾನ್‌ ಗುರುಗಳು ಅವರು ಎಂದು ತಮ್ಮ ಸ್ವಾನುಭವ ವಿವರಿಸಿದರು.

ಪುಸ್ತಕ ಪ್ರಕಾಶನದ ವೈ.ಎ. ದಂತಿ ಮಾತನಾಡಿ, ಸ್ವಾಮೀಜಿ ಯವರ ಕುರಿತು ಅನೇಕ ಪುಸ್ತಕ ಗಳು ಬಂದಿವೆ. ಆದರೆ ಈ ಗುರುಕೃತಿಯೇ ವಿಭಿನ್ನ. ಗುರುಗಳ ನೆನೆದು ಯಾವುದೇ ವಿಷಯ ಸಂಕಲ್ಪ ಮಾಡಿದಾಗ ಅದು ಸಿದ್ಧಿಸುತ್ತದೆ. ಜೀವನಕ್ಕೆ ಬೇಕಾದ ಭಕ್ತಿ ಮಾರ್ಗ ತೋರಿರುವುದು ಈ ಪುಸ್ತಕದ ವಿಶೇಷತೆಯಾಗಿದೆ. ಪುಸ್ತಕ ಇದೆ ಎನ್ನುವುದು ಮುಖ್ಯ ವಲ್ಲ, ಅದನ್ನು ಓದಿ ಆ ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕು. ದೇಶಾದ್ಯಂತ ಇರುವ ತೀರ್ಥಕ್ಷೇತ್ರಗಳನ್ನು ದರ್ಶಿಸಿ ಬಂದವರು ಶ್ರೀಧರರು. ಗುರುಗಳ ಸಂಪರ್ಕದಿಂದ ಯಾರೆಲ್ಲ ಉದ್ಧಾರ ವಾಗಿದ್ದಾರೆ ಎಂಬ ಮಾಹಿತಿಯೂ ಈ ಪುಸ್ತಕದಲ್ಲಿದೆ. ಹಣ ಕೊಟ್ಟು ಕೊಂಡವರಿಗೆ ಸಾರ್ಥಕ ಭಾವ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು.

ಗುರುಭಕ್ತರಾದ ಉದ್ಯಮಿ ಗಿರೀಶ್‌ ಬಾಪಟ್‌ ಮಾತನಾಡಿ, ಶ್ರೀಧರರ ಶಕ್ತಿ ಅಪಾರವಾಗಿದ್ದು, ನಮ್ಮ ತಂದೆಯವರು ಇವರ ಕುರಿತ ಅನೇಕ ಪುಸ್ತಕ ಸಂಗ್ರಹಿಸಿದ್ದರು. ಈ ಪುಸ್ತಕ ವಜ್ರ ವೈಡೂರ್ಯಕ್ಕಿಂತ ಅಮೂಲ್ಯವಾದುದು. 13 ವರ್ಷ ಗಳ ಕಾಲ ಗುರುಗಳ ಶಿಷ್ಯರಾಗಿ ಮಂಜಣ್ಣನವರು ಅಖಂಡ ಸೇವೆ ಸಲ್ಲಿಸಿದ್ದಾರೆ. ಶ್ರೀಧರರ ಆವಾಹನೆ ಅವರಿಗಾಗಿದೆ. ಸ್ವಾಮೀಜಿ ಯವರೇ ಇಂದು ಆ ಪುಸ್ತಕ ಬಿಡುಗಡೆ ಮಾಡಿದ್ದಾರೆ ಎಂಬ ಭಾವ ವ್ಯಕ್ತವಾಗಿದೆ ಎಂದರು.  ಅಂಜನಾ ಸಂಗಡಿಗರು ಪ್ರಾ ರ್ಥಿಸಿದರು. ಮ.ಸ. ನಂಜುಂಡ ಸ್ವಾಮಿ ಸ್ವಾಗತಿಸಿದರು. ಗೋಪಿ ದೀಕ್ಷಿತ್‌ ವಂದಿಸಿದರು. ಐ.ವಿ.ಹೆಗಡೆ ನಿರೂಪಿಸಿದರು.