ಶಿಕಾರಿಪುರಶಿವಮೊಗ್ಗ

ರಾಜಕಾರಣಿಗಳ ವಿರುದ್ದ ಕಠಿಣ ಕಾನೂನುಕ್ರಮ ಜರುಗಿಸಲು ಮನವಿ

ಶಿಕಾರಿಪುರ: ಚುನಾವಣೆ ಯಲ್ಲಿ ಜಯಗಳಿಸುವ ಏಕೈಕ ದುರುದ್ದೇಶದಿಂದ ಜಾತಿ ನಿಂದನೆ, ದೈವ ನಿಂದನೆಯ ಹೊಸ ಸಂಪ್ರ ದಾಯ ಇದೀಗ ಚಾಲ್ತಿಯಲ್ಲಿದ್ದು, ಇಂತಹ ವಿಕೃತ ಹೇಳಿಕೆ ಮೂಲಕ ಪರಸ್ಪರ ಧರ್ಮದಲ್ಲಿ ವಿಷಬೀಜ ಭಿತ್ತಿ ಸಮಾಜದಲ್ಲಿ ಕೋಮು ಸಂಘರ್ಷಕ್ಕೆ ನಾಂದಿ ಹಾಡುತ್ತಿರುವ ರಾಜ ಕಾರಣಿಗಳ ವಿರುದ್ದ ಕಠಿಣ ಕಾನೂ ನುಕ್ರಮ ಜರುಗಿಸಲು ನೂತನ ಕಾನೂನು ಜಾರಿಗೊಳಿಸ ಬೇಕಾಗಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯ ದರ್ಶಿ ಕೃಷ್ಣ ಹುಲಗಿ ಆಗ್ರಹಿಸಿದರು.

ಪಟ್ಟಣದ ತಾಲೂಕು ಕಚೇರಿ ಮುಂಭಾಗ ಜಯಕರ್ನಾಟಕ ಜನಪರ ವೇದಿಕೆ ಹಾಗೂ ಮಸ್ಜಿದೆ ಮುಸ್ತಾ ರಜಾ ಕಮಿಟಿ ವತಿ ಯಿಂದ ನಡೆದ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ  ಮಾತ ನಾಡಿದ ಅವರು ರಾಜಕೀಯ ಲಾಭಕ್ಕಾಗಿ ಎಲ್ಲ ರಾಜಕೀಯ ಪಕ್ಷ ಗಳ ಅಭ್ಯರ್ಥಿ ಗಳು, ಮುಖಂ ಡರು ಧರ್ಮ ದೈವವನ್ನು ನಿಂದಿ ಸುವ ಹೊಸ ಟ್ರೆಂಡ್‌ ಇತ್ತೀಚಿನ ವರ್ಷದಲ್ಲಿ ಹೆಚ್ಚಾಗಿದ್ದು ಕೇವಲ ಮತಗಳಿಕೆಯ ದುರುದ್ದೇಶದಿಂದ ಧರ್ಮ ದೈವದ ನಿಂದನೆ ಹೆಚ್ಚಾ ಗುತ್ತಿದೆ ಎಂದು ಆತಂಕ ವ್ಯಕತಿಪಡಿ ಸಿದ ಅವರು, ಮಂಗಳೂರಿನ ಕಾವೂರಿನಲ್ಲಿ ಮಾಜಿ ಸಚಿವ ಈಶ್ವರಪ್ಪ ಬಿಜೆಪಿ ರಥಯಾತ್ರೆ ಸಂದರ್ಭದಲ್ಲಿ ಧರ್ಮ ಹಾಗೂ ದೇವರ ನಿಂದನೆ ಮೂಲಕ ಕೋಮು ಸೌಹಾರ್ಧಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋ ಪಿಸಿದರು.

ರಾಜಕೀಯದಲ್ಲಿ ಧರ್ಮ ಬೆರೆಸುವವರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು, ಇದರಿಂದ ಕೋಮು ಸಂಘರ್ಷಕ್ಕೆ ಆಸ್ಪದವಾ ಗಲಿದೆ. ಮತಗಳಿಕೆಗಾಗಿ ಧರ್ಮ ದೈವ ನಿಂದನೆ ತೀರಾ ಕೀಳುಮಟ್ಟ ದ್ದಾಗಿದ್ದು ಜಯಗಳಿಸುವ ಏಕೈಕ ಉದ್ದೇಶಕ್ಕೆ ಸಮಾಜದಲ್ಲಿ ಪರಸ್ಪರ ಸಮುದಾಯದ ವಿರುದ್ದ ದ್ವೇಷದ ವಾತಾವರಣ ನಿರ್ಮಾಣವಾಗು ತ್ತಿದೆ ಸಹೋದರರ ರೀತಿ ಬದುಕುತ್ತಿ ದ್ದವರು ಏಕಾಏಕಿ ಕಟ್ಟಾ ವಿರೋಽಯಾಗಿ ಹೊಡೆದಾಟ ಗಲಭೆ ದೊಂ ಬಿ ಪರಿಸ್ಥಿತಿ ಹಲವೆಡೆ ಉದ್ಭವಿಸಿದೆ ಈ ದಿಸೆಯಲ್ಲಿ ಧರ್ಮ ದೈವದ ವಿರುದ್ದದ ಹೇಳಿಕೆಯನ್ನು ನೀಡ ದಂತೆ ಕಠಿಣ ಕಾನೂನು ರೂಪಿಸ ಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.

ಧರ್ಮ ದೈವ ನಿಂದಿಸಿ ಅಪ ಮಾನಿಸಿದವರನ್ನು ಕೂಡಲೇ ಬಂಽಸಿ ಕಠಿಣ ಕ್ರಮ ಜರುಗಿಸ ಬೇಕಾಗಿದೆ. ಈ ಮೂಲಕ ಸಮಾಜ ದಲ್ಲಿ ಶಾಂತಿ ನೆಮ್ಮದಿಯ ವಾತಾ ವರಣ ನಿರ್ಮಾಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಅವರು ಮಾಜಿ ಸಚಿವ ಈಶ್ವರಪ್ಪ ಕೂಡಲೇ ಹೇಳಿಕೆಯನ್ನು ವಾಪಾಸು ಪಡೆದು ಬಹಿರಂಗ ವಾಗಿ ಕ್ಷಮೆ ಯಾಚಿಸಬೇಕು ತಪ್ಪಿ ದಲ್ಲಿ ರಾಜ್ಯಪಾಲರು ಕಾನೂನು ಕ್ರಮ ಕೈಗೊಳ್ಳಬೇಕು ರಾಜ್ಯಾ ದ್ಯಂತ ಧರ್ಮ ಹಾಗೂ ದೈವ ನಿಂದನೆ ಮೂಲಕ ಕೋಮು ಸೌಹಾರ್ಧತೆಗೆ ಧಕ್ಕೆ ತರುವ ಯಾವುದೇ ಸಮು ದಾಯದ ಮುಖಂಡ, ವ್ಯಕ್ತಿ ವಿರುದ್ದ ನಿರ್ದಾಕ್ಷಿಣ್ಯ ಕ್ರಮಕ್ಕೆ ಸ್ವಯಂ ಪ್ರೇರಿತ ದೂರು ದಾಖ ಲಿಸಲು ರಾಷ್ಟ್ರಪತಿ,ರಾಜ್ಯಪಾಲರು ಖುದ್ದು ಆಸಕ್ತಿ ವಹಿಸುವಂತೆ ತಿಳಿಸಿದರು.

ನಂತರದಲ್ಲಿ ತಹಸೀಲ್ದಾರ್‌ ಮೂಲಕ ರಾಷ್ಟ್ರಪತಿ, ರಾಜ್ಯಪಾಲ ರಿಗೆ ಧರ್ಮ ಹಾಗೂ ದೈವ ನಿಂದಿಸುವವರ ವಿರುದ್ದ ಕಠಿಣ ಕಾನೂನು ರೂಪಿಸುವಂತೆ ಆಗ್ರ ಹಿಸಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷ ಮಹಮದ್‌ ಸಾಽ ಕ್‌, ಸದಸ್ಯ ರೋಷನ್‌, ಸಂಘಟನೆಯ ಶಿವಯ್ಯ ಶಾಸ್ತ್ರಿ, ಇಮ್ರಾನ್‌, ಯೋಗೀಶ್‌, ಸುರೇಶ್‌, ಯಮುನಪ್ಪ, ಪುನೀತ್‌, ನವೀನ್‌, ಜ್ಞಾನೇಶ್‌, ಇಮ್ರಾನ್‌ಖಾನ್‌ ಮುಸ್ತಾ ರಜಾ ಕಮಿಟಿಯ ಶಬ್ಬೀರ್‌ಅಹ್ಮದ್‌, ತನ್ವೀರ್‌ ಅಹ್ಮದ್‌, ಇಸ್ಮಾಯಿಲ್‌ ಸಾಬ್‌, ನೌಷಾಧ್‌ ಅಹ್ಮದ್‌,ಸಮೀವುಲ್ಲಾ, ಆರೀ್‌‍, ತನ್ವೀರ್‌, ಹಬೀಬುಲ್ಲಾ ಮತ್ತಿತರರು ಹಾಜರಿದ್ದರು.