ಜಿಲ್ಲಾ ಸುದ್ದಿ

ಮುಸ್ಲಿಂ ಸಮುದಾಯದ ಬೇಡಿಕೆ ಈಡೇರಿಸುವವರಿಗೆ ನಮ್ಮ ಬೆಂಬಲ ಮುಸ್ಲಿಮ್ಸೌ ಡೆವಲೆಪ್‌ಮೆಂಟ್‌ ಫೋರಂ ಸಂಚಾಲಕ ಮಹ್ಮದ್‌ ವಾಸಿಕ್‌

ಶಿವಮೊಗ್ಗ: ಮುಸ್ಲಿಂ ಸಮು ದಾಯದ ಬೇಡಿಕೆ ಈಡೇರಿಸುವು ದಾಗಿ ಒಪ್ಪಿ ಲಿಖಿತ ಭರವಸೆ ನೀಡುವ ಯಾವುದೇ ಪಕ್ಷದ ಅಭ್ಯರ್ಥಿಗೆ ಬೆಂಬಲಿಸುವುದಾಗಿ ಮುಸ್ಲಿಮ್ಸೌ ಡೆವಲೆಪ್‌ಮೆಂಟ್‌ ಫೋರಂ ಸಂಚಾಲಕ ಮಹ್ಮದ್‌ ವಾಸಿಕ್‌ ಹೇಳಿದರು.

ನಗರದ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮದು ರಾಜಕೀಯೇತರ ಸಂಘ ಟನೆಯಾಗಿದ್ದು, ಮುಸ್ಲಿಂ ಸಮು ದಾಯದ ಏಳಿಗೆಗಾಗಿ ಅಭ್ಯರ್ಥಿಗಳ ಮುಂದೆ ಕೆಲವು ಬೇಡಿಕೆಗಳನ್ನು ಇಡಲಾಗುವುದು. ಅದನ್ನು ಈಡೇ ರಿಸುವುದಾಗಿ ಭರವಸೆ ನೀಡುವ ಅಭ್ಯರ್ಥಿಗೆ ಬೆಂಬಲಿಸಲಾಗುವುದು ಎಂದರು.

ಶಿವಮೊಗ್ಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಬೇಕು. ಮುಸ್ಲಿಂ ಸಮುದಾ ಯದವರಿಗೆ ಆಗುತ್ತಿರುವ ಅನ್ಯಾ ಯದ ವಿರುದ್ಧ ಧ್ವನಿ ಎತ್ತಬೇಕು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ನ್ಯಾಯ ಒದಗಿಸಬೇಕು. ಅಲ್ಪ ಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಕೆಲಸ ಮಾಡಬೇಕು. ಅಲ್ಪಸಂಖ್ಯಾತರ ವಾರ್ಡುಗಳಲ್ಲಿ ಪಾಲಿಕೆ ಚುನಾವಣೆಯಲ್ಲಿ ಅಲ್ಪಸಂ ಖ್ಯಾತ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು. ನಿಗಮ ಮಂಡಳಿಗಳಲ್ಲಿ ನೇಮಕಾತಿ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇ ಡಿಕೆಗಳನ್ನು ಈಡೇರಿಸುವ ಭರವಸೆ ನೀಡುವ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ ಎಂದರು.

ಶಿವಮೊಗ್ಗದಲ್ಲಿ ಕೋಮು ಗಲಭೆಗೆ ಅವಕಾಶ ಕೊಡದೆ ಎಲ್ಲರೂ ಸೌಹಾರ್ದತೆಯಿಂದ ಬದುಕುವ ವಾತಾವರಣ ನಿರ್ಮಿ ಸಬೇಕು. ಇಷ್ಟು ವರ್ಷ ಮುಸ್ಲಿಂ ಸಮಾಜ ವೋಟ್‌ ಬ್ಯಾಂಕ್‌ ಆಗಿತ್ತು. ಕೆಲವು ಮುಖಂಡರು ತಾವೇ ಇಡೀ ಸಮುದಾಯವೆಂದು ಬಿಂಬಿಸಿಕೊಳ್ಳತ್ತಿದ್ದರು. ಈ ಬಾರಿ ಮುಸ್ಲಿಂ ಸಮಾಜದ ಬೇಡಿಕೆ ಈಡೇರಿ ಸುವವರನ್ನು ಬೆಂಬಲಿಸುತ್ತೇವೆ. ಯಾರೇ ಶಾಸಕರಾಗಲಿ, ಅಲ್ಪಸಂ ಖ್ಯಾತ ಎಸ್‌ಸಿ. ಎಸ್‌ಟಿ ಓಬಿಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಶೀಘ್ರವೇ ಯಾರಿಗೆ ಬೆಂಬಲ ಎಂದು ಘೋಷಣೆ ಮಾಡು ವುದಾಗಿ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಮೌ ಲಾನಾ ರ್ಇಾನ್‌ರಜ್ವಿ, ಮಹ್ಮದ್‌ ಲಿಯಾಖತ್‌, ಜ್ರಲ್ಲಾ, ಮುನಾವರ್‌, ಇಮ್ರಾನ್‌ಖಾನ್‌, ಸದ್ದಾಂ, ಶಾಬಾಜ್‌, ಶರೀ್‌‍ ಮೊದಲಾದವರಿದ್ದರು.