ಶಿವಮೊಗ್ಗಶಿವಮೊಗ್ಗ ನಗರ

ನೂರು ದಿನ ಸಾವಿರ ಹಳ್ಳಿ ಒಂದುಗುರಿಭಕ್ತರಿಂದ ಉತ್ತಮ ಸ್ಪಂದನೆ: ಶ್ರೀ ಶ್ರೀಈಶ್ವರಾನಂದಪುರಿ ಮಹಾ ಸ್ವಾಮೀಜಿ

ಶಿವಮೊಗ್ಗ : ಶ್ರೀಮದ್‌ ಜಗ ದ್ಗುರು ರೇವಣಸಿದ್ದೇಶ್ವರ ಸಿಂಹಾ ಸನ ಶ್ರೀ ಕಾಗಿನೆಲೆ ಮಹಾಸಂಸ್ಥಾನ  ಕನಕ ಗುರುಪೀಠ, ಹೊಸದುರ್ಗ ದಿಂದ ಏರ್ಪಡಿಸಿರುವ ನೂರು ದಿನ ಸಾವಿರ ಹಳ್ಳಿ ಒಂದುಗುರಿ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಭಕ್ತರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಪ:ಪೂ:ಶ್ರೀ ಶ್ರೀ ಈಶ್ವರಾ ನಂದಪುರಿ ಮಹಾಸ್ವಾಮೀಜಿ ಹೇಳಿದರು.

ಅವರು ನವುಲೆಯ ಎಂ. ಈಶ್ವರಪ್ಪ ನವುಲೆ ಕಾಂಪೌಂಡ್‌ನಲ್ಲಿ ಶ್ರೀ ಬೀರೇಶ್ವರ ವಿಕಾಸನ ಸಂಸ್ಥೆ, ನವುಲೆ,  ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಶ್ರೀ ಕನಕದಾಸರ ಅಧ್ಯಯನ ಕೇಂದ್ರ, ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿ ಕನಕನಗರ ಸಹಯೋಗದೊಂದಿಗೆ ಏರ್ಪಡಿಸಿದ ಭಕ್ತಾಗಳಿಂದ ಕಾಣಿಕೆ ಸಮರ್ಪಣಾ ಕಾರ್ಯ ಕ್ರಮದಲ್ಲಿಗುರುವಂದನೆ ಸ್ವೀಕರಿಸಿ ಮಾತನಾಡಿದರು.

ಹೊಸದುರ್ಗ ಶಾಖಾಮಠದ ಸರ್ವತೋಮುಖ ಅಭಿವೃದ್ಧಿ ಹಾಗೂ ಕನಕದಾಸರ ಏಕ ಶೀಲೆಯ ಪ್ರತಿಷ್ಠಾಪನೆ ಮಾಡುವ ಸಂಕಲ್ಪ ದೊಂದಿಗೆ ನೂರು ದಿನ ಸಾವಿರ ಹಳ್ಳಿ ಒಂದು ಗುರಿ ಕಾರ್ಯಕ್ರಮ ವನ್ನು ಕನಕ ಗುರುಪೀಠದಿಂದ ಆಯೋಜಿಸಲಾಗಿದೆ. ಹೀಗಾಗಲೇ 400 ಹಳ್ಳಿಗಳಿಗೆ ಭೇಟಿ ನೀಡಲಾ ಗಿದೆ. ಎಲ್ಲಾ ಹಳ್ಳಿಗಳಲ್ಲಿಯೂ ಭಕ್ತ ರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಸಮಾಜದ ಸಂಘಟನೆಯನ್ನು ಬಲವಾಗಿ ಮಾಡಿದಾಗ ಸಮಾಜ ದಲ್ಲಿ ಪರಿವರ್ತನೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.

ಪ್ರಾಸ್ಥಾವಿಕವಾಗಿ ಮಾತನಾ ಡಿದ ಕಾಳಿದಾಸ ಸೇವಾ ಸಂಸ್ಥೆಯ ಅಧ್ಯಕ್ಷ ಡಾ: ಪಿ.ಬಾಲಪ್ಪ ಮಾತ ನಾಡಿ ಸ್ವಾಮೀಜಿಗಳ ದರ್ಶನದಿಂದ ಭಕ್ತಾಗಳಲ್ಲಿ ಹೊಸ ಚೈತನ್ಯ ಬರಲು ಸಾಧ್ಯವಾಗುತ್ತದೆ. ಸಮಾ ಜದ ಅಂಕುಡೊಂಕುಗಳನ್ನು ಸ್ವಾಮಿ ೕಜಿಗಳ ನೇತೃತ್ವದಲ್ಲಿ ಸಮಾಜದ ಮುಖಂಡರೊಂದಿಗೆ ಮಾಡಿದಾಗ ಸಮಾಜದ ಸರ್ವತೋಮುಖ ಅಭಿವೃದ್ಧಿಯನ್ನು ಕಾಣಲು ಸಾಧ್ಯ ವಾಗುತ್ತದೆ ಎಂದರು.

ಗೌರಾವಾಧ್ಯಕ್ಷಎಂ.ಈಶ್ವರಪ್ಪ ನವುಲೆ ಮಾತನಾಡಿ ಸಮಾಜ ನಮಗೆ ಹೆತ್ತತಾಯಿಇದ್ದ ಹಾಗೇ, ಸಮಾಜದ ಆಶೀರ್ವಾದವಿಲ್ಲದೆ ಯಾವುದೇ ವ್ಯಕ್ತಿಯಾವುದೇ ಕ್ಷೇತ್ರ ದಲ್ಲಿ ಸಾಧನೆ ಮಾಡಲು ಸಾಧ್ಯ ಇಲ್ಲ. ಸಮಾಜದ ಅಭಿವೃದ್ಧಿಗೆ ಮಠ ಮಂದಿರಗಳ ಸರ್ವತೋ ಮುಖ ಅಭಿವೃದ್ಧಿಗೆ ಪ್ರತಿಯೊ ಬ್ಬರು ತನು ಮನ ಧನ ಸಹಕಾರ ನೀಡಿದಾಗ ಸಮಾಜದ ಮಠ ಮಂದಿರಗಳು ಅಭಿವೃದ್ಧಿಯಾಗ ಲು ಸಾಧ್ಯವಾಗುತ್ತದೆ ಎಂದರು.

ಶ್ರೀ ಬೀರೇಶ್ವರ ವಿಕಾಸನ ಸಂಸ್ಥೆಯ ಅಧ್ಯಕ್ಷ ಮಂಜುನಾಥ್‌ ಮಾತನಾಡಿ ಸಮಾಜದ ಮಠದ ಅಭಿವೃದ್ಧಿಗೆ ಭಕ್ತಾಗಳು ಹೆಚ್ಚಿನ ಸಹಕಾರ ಬೆಂಬಲವನ್ನು ನೀಡಿ ದಾಗ ಮಠದ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು. ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿ ಸಂಚಾಲಕ ದೊ ಡ್ಡಪ್ಪ, ಹಾಲುಮತ ಮಹಾ ಸಭಾ ದ ರಾಜ್ಯ ಉಪಾಧ್ಯಕ್ಷ ಡಾ: ಪ್ರಶಾಂ ತ್‌, ಕರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷೆ ಡಾ:ಸೌಮ್ಯ ಪ್ರಶಾಂತ್‌, ಬೀರಪ್ಪ, ಕಾರ್ಪೋ ರೇಟರ್‌ ಮೋಹನ್‌, ರವೀಂದ್ರ, ರಘು, ರವಿ, ಮತ್ತಿತ್ತರು ಇದ್ದರು.

ಪತಂಜಲಿ ಸಂಸ್ಥೆ ಆಡಳಿತಾಕಾರಿ ಕನಕದಾಸರ ಪಾತ್ರದಲ್ಲಿ ಸಾವಿರ ಹಾಡುಗಳ ಸರದಾರ ಕಲಾವಿದ ಎಂ.ಪೂರ್ವಯ್ಯ, ಜ್ಯೂನಿಯರ್‌ ಅಶ್ವಥ್‌ ಸದ್ಭಾವನಾ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಭವಾನಿ ಶಂಕರ್‌ರಾವ್‌, ಬೀರಪ್ಪನ ಪಾತ್ರದಲ್ಲಿಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಯೋಗಾಚಾರ್ಯ ಪತಂಜಲಿ ಜೆ.ನಾಗರಾಜ್‌ನಡೆಸಿಕೊಟ್ಟ ಹಾಲುಮತ ಸಂಸ್ಕ್ಕೃತಿ ಕನಕ ಕಲಾ ವೈಭವ ಕನಕದಾಸರ ಗೀತಾ ಗಾಯನ ನೃತ್ಯರೂಪಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.