ಶಿವಮೊಗ್ಗಶಿವಮೊಗ್ಗ ನಗರ

ರಾಗಿಗುಡ್ಡ ಉಳಿಸುವಂತೆ ಮಾ.25 ರ ಇಂದು ಕಾಲ್ನಡಿಗೆ ಮತ್ತು ಸೈಕಲ್‌ ಜಾಥಾ

ಶಿವಮೊಗ್ಗ: ನಗರದ ಏಕೈಕ ದಟ್ಟ ಹಸಿರಿನ ತಾಣವಾದ ರಾಗಿಗುಡ್ಡ ಉಳಿಸಲು ಆಗ್ರಹಿಸಿ ಮಾ.25ರ ಇಂದು ಬೆಳಿಗ್ಗೆ 9-30ಕ್ಕೆ ರಾಗಿಗುಡ್ಡದ ಉತ್ತರ ಭಾಗದಿಂದ ಜಿಲ್ಲಾಕಾರಿಗಳ ಕಚೇರಿವರೆಗೆ ಕಾಲ್ನಡಿಗೆ ಹಾಗೂ ಸೈಕಲ್‌ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ರಾಗಿಗುಡ್ಡ ಉಳಿಸಿ ಅಭಿಯಾನದ ಸಂಚಾಲಕ ಕೆ.ವಿ. ವಸಂತ ಕುಮಾರ್‌ ಹೇಳಿದರು.

ಅವರು ಶುಕ್ರವಾರ ನವ್ಯಶ್ರೀ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ನಗರಕ್ಕೆ ರಾಗಿಗುಡ್ಡ ಒಂದು ಕಳಸಪ್ರಾಯದಂತೆ ಇದೆ. ನೀರಿನ ಸೆಲೆಯಾಗಿದೆ. ಹಸಿರಿನ ತಾಣವಾಗಿದೆ. ಧಾರ್ಮಿಕ ಪವಿತ್ರ ಕ್ಷೇತ್ರವೂ ಆಗಿದೆ. ಆದರೆ ಈಗ ಅದರ ನಾಶ ಆರಂಭವಾಗಿದೆ. ಶಿವಮೊಗ್ಗದ ಪರಿಸರಕ್ಕೆ ರಾಗಿಗುಡ್ಡ ನಾಶ ಘೋರ ಶಾಶ್ವತ ಅನ್ಯಾಯ ಮಾಡುತ್ತಿದೆ. ಇದನ್ನು ಉಳಿಸಲು ಪರಿಸರಾಸಕ್ತರು ಒಂದು ಅಭಿ ಯಾನವನ್ನೇ ಆರಂಭ ಮಾಡಿ ದ್ದೇವೆ. ಅಭಿಯಾನದ ಮುಂದು ವರಿದ ಭಾಗವಾಗಿ ಈ ಜಾಥಾ ಹಮ್ಮಿಕೊಂಡಿದ್ದೇವೆ ಎಂದರು.

ರಾಗಿಗುಡ್ಡ 108 ಎಕರೆ ವಿಸ್ತೀರ್ಣ ಪ್ರದೇಶವಾಗಿದೆ. ಆದರೆ ಈಗಾಗಲೇ ವಿವಿಧ ಯೋಜನೆ ಗಳಿಗಾಗಿ ಸುಮಾರು 74 ಎಕರೆ ಜಾಗವನ್ನು ಪರಭಾರೆ ಮಾಡಲಾ ಗಿದೆ. ಇದರಲ್ಲಿ 5 ಎಕರೆ ಇಎಸ್‌ಐ ಆಸ್ಪತ್ರೆಗೆ ಬಳಸಿಕೊಂಡಿದ್ದು, 50 ಅಡಿಯವರೆಗೆ ಗುಡ್ಡ ಕಡಿಯ ಲಾಗಿದೆ. ಲಕ್ಷಾಂತರ ರೂ. ಮೌಲ್ಯದ ಲವತ್ತಾದ ಮಣ್ಣು, ಕಲ್ಲು ಲೂಟಿಯಾಗಿದೆ. ಉಳಿದ 69 ಎಕರೆ ಗುಡ್ಡವೂ ಸಹ ನೆಲ ಸಮವಾಗಲಿದೆ. ಒಟ್ಟಾರೆ ಇಡೀ ರಾಗಿಗುಡ್ಡವೇ ನಾಶವಾಗಲಿದೆ. ಹಾಗಾಗಿ ಈಗಲೇ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ವಿವಿಧ ಯೋಜನೆಗಳಿಗೆ ನೀಡಿ ರುವ ಜಾಗದ ಮಂಜೂರಾತಿ ಪತ್ರ ಕೂಡಲೇ ರದ್ದುಮಾಡಬೇಕು. ರಾಗಿಗುಡ್ಡ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಸಂರಕ್ಷಿತ ಅರಣ್ಯವಾಗಿ ಘೋಷಿಸಬೇಕು. ರಾಗಿಗುಡ್ಡವನ್ನು ಗುಡ್ಡದ ಕಾಡಾ ಗಿಯೇ ಉಳಿಸಬೇಕು ಎಂಬುದು ನಮ್ಮ ಆಗ್ರಹ ಎಂದರು.

ಈ ಬೃಹತ್‌ ಜಾಥಾಕ್ಕೆ ಈಗಾ ಗಲೇ ಸುಮಾರು 10ಸಾವಿರಕ್ಕೂ ಹೆಚ್ಚು ಪರಿಸರಾಸಕ್ತರು ಸಹಿ ಮಾಡಿ ದ್ದಾರೆ. ಶಿವಮೊಗ್ಗದ ಹಲವಾರು ಸಂಘ ಸಂಸ್ಥೆಗಳು ಯೋಗ ಕೇಂದ್ರಗಳು, ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಸಂಘ ಮುಂತಾದ ಹಲವು ಸಂಸ್ಥೆಗಳು ಬೆಂಬಲ ನೀಡಿವೆ. ಸುಮಾರು 10ಸಾವಿರ ಜನರು ಇದನ್ನು ವಿರೋಸಿ ಸಹಿ ಹಾಕಿದ್ದಾರೆ. ಸಂಘಸಂಸ್ಥೆಗಳು ಬೆಂಬಲ ನೀಡಿರುವ ಮನವಿ ಪತ್ರವನ್ನು ಜಾಥಾದ ನಂತರ ಜಿಲ್ಲಾಕಾರಿಗಳಿಗೆ ಸಲ್ಲಿಸುತ್ತೇವೆ ಎಂದರು.

ಜಾಥಾಕ್ಕೆ ಬರುವವರಿಗೆ ಸೂಚನೆ:  ಜಾಥಾಕ್ಕೆ ಬರುವವರಿಗೆ ಅನುಕೂಲವಾಗುವಂತೆ ನೆಹರೂ ಸ್ಟೇಡಿಯಂನಿಂದ ಬೆಳಿಗ್ಗೆ 9ಗಂಟೆಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ಒಂದುಪಕ್ಷ ರಾಗಿಗುಡ್ಡದಲ್ಲಿಯೇ ತಮ್ಮ ವಾಹನ ನಿಲ್ಲಿಸಿ ಜಾಥಾದಲ್ಲಿ ಭಾಗವಹಿಸುವವರಿಗೆ ಜಾಥಾದ ನಂತರ ವಾಪಾಸು ಹೋಗಲು ಸಹ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಜಾಥಾವು ಸುಮಾರು 4.5ಕಿಮೀ. ಉದ್ದದ ನಡಿಗೆಯಾಗಿದೆ. ಬಿಸಿಲೂ ಇರುತ್ತದೆ ಹಾಗಾಗಿ ತಲೆಗೆ ಕ್ಯಾಪ್‌ ಮತ್ತು ವಾಕಿಂಗ್‌ ಶೂ ಧರಿಸ ಬೇಕು. ಸೈಕಲ್‌ನಲ್ಲಿ ಕೂಡ ಭಾಗವಹಿಸಬಹುದು. ಅಕಸ್ಮಾತ್‌ ನಡೆಯಲು ಸಾಧ್ಯವಾಗದವರು ಬೆಳಿಗ್ಗೆ 10-30ಕ್ಕೆ ಉಷಾ ನರ್ಸಿಂಗ್‌ ಹೋಂ ಸರ್ಕಲ್‌ನಿಂದ ಜಾಥಾಕ್ಕೆ ಸೇರಿಕೊಳ್ಳಬಹುದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಭಿ ಯಾನದ ಪ್ರಮುಖರಾದ ನಾಗೇಶ್‌ ನವ್ಯಶ್ರೀ, ಶ್ರೀಪತಿ, ಪರಿಸರ ನಾಗರಾಜ್‌, ಶೇಖರಗೌಳೇರ್‌, ಜೋಯ್‌್ಸ., ಚನ್ನವೀರ ಗಾಮನಕಟ್ಟೆ ಇದ್ದರು.