ತಾಜಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ತಿಂಗಳ ಕೊನೆಯೊಳಗೆ ಅಧಿಕೃತವಾಗಿ ವಿಮಾನ ಹಾರಾಟ ಪ್ರಾರಂಭ : ಬಿ.ವೈ. ರಾಘವೇಂದ್ರ

ಶಿವಮೊಗ್ಗ: ಮಾ.24 ರಂದು  ನಗರದ ರಾಗಿಗುಡ್ಡದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲ ಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ವರ್ಚು ಯಲ್‌ ಮೂಲಕ ಉದ್ಘಾಟಿಸಲಿ ದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಅವರು ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗಾಗಿ ಮಾನವ ಸಂಪನ್ಮೂಲ ಕೊಡಲು ಶಿವಮೊಗ್ಗದಲ್ಲಿ ದೇಶದಲ್ಲೇ ಎರಡನೇ ರಾಷ್ಟ್ರೀಯ ರಕ್ಷಾ ಮಹಾ ವಿದ್ಯಾಲಯ ಆಗುತ್ತಿ ರುವುದು ಹೆಮ್ಮೆಯ ವಿಷಯ. ಇದರಲ್ಲಿ ಅನೇಕ ವಿಭಾಗಗಳಿದ್ದು, ಡಿಪ್ಲೊಮಾ, ಪಿಜಿ ಹಾಗೂ ಒಂದು ವಾರದ ಕೋರ್ಸ್‌ ಸೇರಿದಂತೆ ರಕ್ಷಣಾಲಯಕ್ಕೆ ಮತ್ತು ಭದ್ರತೆಗೆ ಸಂಬಂಸಿದಂತೆ ಅನೇಕ ಕೋರ್ಸ್‌ ಗಳನ್ನು ಪ್ರಾರಂಭಿಸುತ್ತಿದ್ದು, ಜೂನ್‌ ಅಥವಾ ಜುಲೈನಿಂದಲೇ ಮೊದಲ ಬ್ಯಾಚ್‌ ಪ್ರಾರಂಭವಾ ಗಲಿದೆ. 2000 ದಿಂದ 55 ಸಾವಿರದ ವರೆಗೆ ಶುಲ್ಕ ಕೂಡ ಈ ತರಬೇತಿಗೆ ಇದ್ದು, ನವುಲೆಯ ರಾಗಿಗುಡ್ಡದ 8 ಎಕರೆ ಜಾಗದಲ್ಲಿ ಅತ್ಯಾಧುನಿಕ ಸುಸಜ್ಜಿತ ಕ್ಯಾಂಪಸ್‌ ನಿರ್ಮಾಣವಾಗಲಿದೆ ಎಂದರು.

ಸೈಬರ್‌ ಭದ್ರತೆ, ಅಪರಾಧ ಶಾಸ, ಮಾಹಿತಿ ತಂತ್ರಜ್ಞಾನ, ವಿಜ್ಞಾನ, ಕಾನೂನು, ರಕ್ಷಣಾ ವಿಷಯಗಳ ಬಗ್ಗೆ ತರಬೇತಿ ಬೇಸಿಕ್‌ ಕೋರ್ಸ್‌ ಕೂಡ ಇಲ್ಲಿ ಪಡೆಯಬಹುದು. ಯುವಕರಲ್ಲಿ ರಾಷ್ಟ್ರ ನಿರ್ಮಾಣದ ಶಕ್ತಿ ತುಂಬುವ ಉದ್ದೇಶದಿಂದ ಈ ರಕ್ಷಾ ವಿವಿ ಪ್ರಾರಂಭವಾಗಲಿದ್ದು, ದೀರ್ಘಾ ವ ಕೋರ್ಸ್‌ ಮತ್ತು ತರಬೇತಿ ಕೂಡ ಇಲ್ಲಿ ಇರುತ್ತದೆ. ಈ ಸ್ಥಳ ವನ್ನು ಹಿಂದೆ ಮೊರಾರ್ಜಿ ಶಾಲೆಗೆ ನೀಡಲಾಗಿತ್ತು. ಈಗ ಮೊರಾರ್ಜಿ ಶಾಲೆ ಬೇರೆಡೆಗೆ ಸ್ಥಳಾಂತರ ವಾಗಿದ್ದರಿಂದ ಅದೇ ಜಾಗದಲ್ಲಿ ಈ ವಿವಿ ಪ್ರಾರಂಭ ವಾಗಲಿದೆ. ಪರಿ ಸರ ಪ್ರೇಮಿಗಳು ಆತಂಕ ಪಡು ವುದು ಬೇಡ ಎಂದು ಪ್ರಶ್ನೆಯೊಂ ದಕ್ಕೆ ಉತ್ತರಿಸಿದರು.

ವಿಮಾನ ಹಾರಾಟಕ್ಕೆ ಸಂಬಂ ಸಿದಂತೆ ಪ್ರತಿಕ್ರಿಯಿಸಿದ ಅವರು, 6 ಕೋಟಿ ರೂ. ವೆಚ್ಚದ 3 ಅಗ್ನಿಶಾಮಕ ವಾಹನಗಳು ಬರು ವವರೆಗೆ ಕ್ಲಿಯರೆನ್‌್ಸ ನೀಡುವುದಿಲ್ಲ ಎಂದು ವಿಮಾನಯಾನ ಸಚಿವಾಲ ಯ ಸೂಚನೆ ನೀಡಿತ್ತು. ಈಗ ಅದು ಕೂಡ ವಾರದೊಳಗೆ ಬರುತ್ತಿದ್ದು, ಈ ತಿಂಗಳ ಕೊನೆಯೊಳಗೆ ಅಕೃತವಾಗಿ ವಿಮಾನ ಹಾರಾಟ ಪ್ರಾರಂಭವಾಗಲಿದೆ. ಪ್ರತಿ ಟಿಕೆಟ್‌ ಗೆ ರಾಜ್ಯ ಸರ್ಕಾರ 500 ರೂ. ಅನುದಾನವನ್ನು ಇಂಡಿಗೋ ಏರ್‌ ಲೈನ್‌್ಸ ಗೆ ನೀಡುತ್ತಿದ್ದು, ಬೆಂಗ ಳೂರು-ಶಿವಮೊಗ್ಗ ಹಾರಾಟಕ್ಕೆ ಇಂಡಿಗೋ ವಿಮಾನಯಾನ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿ ಕೊಳ್ಳಲಾಗಿದೆ ಎಂದರು.

ಮಾ. 25 ರಂದು ರಾಜ್ಯಕ್ಕೆ ಆಗಮಿಸುವ ಪ್ರಧಾನಿ ಮೋದಿ ದಾವಣಗೆರೆ ಕಾರ್ಯಕ್ರಮ ಮುಗಿಸಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಇಲ್ಲಿಂದ ದೆಹ ಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇದು ವಿಮಾನ ನಿಲ್ದಾಣದ ಪ್ರಾ ಮುಖ್ಯತೆ ಸೂಚಿಸುತ್ತದೆ ಎಂದರು.