ಶಿವಮೊಗ್ಗಸೊರಬ

ಪತ್ರಿಕೆಗಳು ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಜನಮನ್ನಣೆ ಪಡೆಯುತ್ತವೆ: ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ

ಸೊರಬ: ಪತ್ರಿಕೆಗಳು ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಅವುಗಳು ಜನಮನ್ನಣೆ ಪಡೆಯುತ್ತವೆ. ಪ್ರಸ್ತುತ ಪತ್ರಿಕೆಗಳಲ್ಲಿ ಧಾರ್ಮಿಕ ಚಿಂತನೆಯ ಮೂಲಕ ಸಮಾಜವನ್ನು ಜಾಗೃಗೊಳಿಸುತ್ತಿರುವುದು ಉತ್ತಮ ಬೆಳವಣಿಯಾಗಿದ್ದು, ಉತ್ತಮ ಕೆಲಸ ಕಾರ್ಯಗಳಿಂದ ಬದುಕು ಸಾರ್ಥಕ ಪಡಿಸಿಕೊಳ್ಳ್ಳಬೇಕು ಎಂದು ಹೊನ್ನಾವರದ ಕರ್ಕಿ ಜ್ಞಾನೇಶ್ವರಿ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ರಂಗಮಂದಿರದಲ್ಲಿ ಶ್ರೀ ಸುರಭಿ ಸೇವಾ ಚಾರಿಟೇಬಲ್‌ ಟ್ರಸ್‌್ಟ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಸುರಭಿಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಸುರಭಿವಾಣಿ ಪತ್ರಿಕೆಯ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನಲ್ಲಿ ಎಲ್ಲವೂ ಇದ್ದು ಶಾಂತಿ ಇಲ್ಲದ ಬದುಕಿಗೆ ಅರ್ಥವಿಲ್ಲ. ನನಗಾಗಿ ಬದುಕುವ ಯೋಚನೆ ಮಾಡದೆ ಎಲ್ಲರಿಗಾಗಿ ನನ್ನ ಬದುಕು ಎಂಬುದನ್ನು ತಿಳಿದು ನಡೆದರೆ ಜೀವನ ಸಾರ್ಥಕತೆ ಹೊಂದುವುದರ ಜತೆಗೆ ದೇಶ ಅಭಿವೃದ್ದಿ ಹಾಗೂ ಸುಭಿಕ್ಷೆಯಿಂದ ಇರಲು ಸಾಧ್ಯ. ಸಮಾಜ ಪರಿವರ್ತನ ಶೀಲಗುಣವನ್ನು ಹೊಂದಿದ್ದು, ಅದಕ್ಕೆ ತಕ್ಕತೆ ಶಾಂತಿ ಸಮಾಧಾನದಿಂದ ನಡೆದುಕೊಂಡರೆ ಎಲ್ಲವನ್ನು ಪಡೆದುಕೊಳ್ಳವ ಮೂಲಕ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.
ದುಗ್ಲಿ ಕಡೇನಂದಿಹಳ್ಳಿ ಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿ, ಆತ್ಮಕ್ಕೆ ಎಂದಿಗೂ ಸಾವಿಲ್ಲ. ಹಾಗಾಗಿ ಪ್ರತಿಯೊಬ್ಬ ಮನುಷ್ಯನು ಸಮಾಜದ ಒಳಿತಿಗಾಗಿ ದುಡಿದಾಗ ಮೋಕ್ಷ ಪ್ರಾಪ್ತಿಯಾಗುತ್ತದೆ. ಕ್ಷಣಿಕ ಜೀವನದಲ್ಲಿ ಸಾರ್ಥಕ ಬದುಕಿನೆಡೆದ ನಡೆಯಲು ಗುರುವಿನ ಆಶೀರ್ವಾದವೂ ಲಭ್ಯವಾಗಬೇಕು. ಆಗ ಮಾತ್ರ ಬದುಕನ್ನು ಸರಿದಾರಿಗೆ ತರಲು ಸಾಧ್ಯ. ಇದಕ್ಕೆ ಧಾರ್ಮಿಕ ಚಿಂತನೆ ಬೆಳೆಸಿಕೊಂಡು ಆತ್ಮವನ್ನು ಭವನಂತನ ಪಾದಕ್ಕೆ ಅರ್ಪಿಸಿದಾಗ ಮನುಷ್ಯ ಜನ್ಮ ಸಾರ್ಥಕತೆ ಪಡೆಯುತ್ತದೆ ಎಂದರು.
ಜಡೆ ಸಂಸ್ಥಾನ ಮಠ-ಸೊರಬ ಮುರುಘಾ ಮಠದ ಶ್ರೀ ಡಾ.ಮಹಾಂತ ಸ್ವಾಮೀಜಿ ಆಶೀರ್ವಚನ ಮಾತನಾಡಿ ಜ್ಷಾನದ ಸಂಪತ್ತು ಮತ್ತು ಉತ್ತಮ ಕಾರ್ಯಚಟುವಟಿಕೆಗಳಿಂದ ಪ್ರತಿಯೊಬ್ಬರೂ ಗುರಿಮುಟ್ಟಲು ಸಾದ್ಯ. ಅಧ್ಯಾತ್ಮಕತೆ ಶಿಕ್ಷಣ ಮತ್ತು ಧಾರ್ಮಿಕ ವಿಚಾರದಾರೆಗಳು ಜನತೆಯಲ್ಲಿ ಸದಾ ಇದ್ದಾಗ ಸಮಾಜದಲ್ಲಿ ಉತ್ತಮ ವಾತವರಣ ಇದ್ದು ಜಾಗೃತ ಸಮಾಜ ನಿರ್ಮಾಣವಾಗುತ್ತದೆ. ತಾಲೂಕಿನಲ್ಲಿ ಮಾದ್ಯಮಗಳು ಮೌಡ್ಯಗಳನ್ನು ಅಳಿಸಿ ಮೌಲ್ಯಗಳನ್ನು ಬಿತ್ತವ ಕೆಲಸ ಮಾಡುತ್ತಿರುವುದು ಸ್ಲಾಘಿನೀಯವಗಿದೆ. ಸಾಮಾಜಿಕ ಕಾರ್ಯಗಳ ಮೂಲಕ ಮನಷ್ಯ ತನ್ನ ಅಳಿವಿನ ನಂತರವು ಹೆಸರು ಉಳಿಸಿಕೊಳ್ಳಲು ಸಾದ್ಯ ಎಂದರು.
ಲಕ್ಕವಳ್ಳಿ ಮೋಕ್ಷ ಮಂದಿರ ಜೈನಮಠದ ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು.
ಸುವರ್ಣ ವಾಹಿನಿಯ ಸಂಪಾದಕ ರವಿ ಹೆಗಡೆ ಮಾತನಾಡಿ ಸಮಾಜದಲ್ಲಿ ನಡೆಯುವ ಯಾವುದೇ ಕೆಲಸಗಳು ಒಳ್ಳೆಯದು ಎನಿಸಿಕೊಳ್ಳುವುದಿಲ್ಲ. ಅವು ಸಮಾಜಮುಖಿಯಾಗಿ ಇರಬೇಕು ಎನ್ನುವ ನಿಬಂಧನೆಗಳೂ ಇಲ್ಲ. ಆದರೆ ಸಮಾಜಮುಖಿ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಾಜ ತಿದ್ದುವ ಕೆಲಸದಲ್ಲಿ ನಿರತರಾಗುವಂತೆ ಪ್ರೇರಣೆ ನೀಡುವ ಕೆಲಸವನ್ನು ಪ್ರಶಸ್ತಿ, ಸನ್ಮಾನಗಳು ಮಾಡುತ್ತವೆ. ಅದರ ಜವಾಬ್ದಾರಿಯನ್ನು ಹೊತ್ತು ಸರಿ ದಾರಿಯಲ್ಲಿ ನಡೆದಾಗ ಪ್ರಶಸ್ತಿಗಳಿಗೆ ಅರ್ಥ ಮೂಡುತ್ತದೆ ಮತ್ತು ಅದರ ಆಶಯದಂತೆ ನಡೆದುಕೊಳ್ಳುವುದು ಪುರಸ್ಕೃತರ ಜವಾಬ್ದಾರಿಯೂ ಆಗಿದೆ ಎಂದ ಅವರು, ಗ್ರಾಮೀಣ ಮಟ್ಟದಿಂದ ಬೆಳೆದ ಒಂದು ಪತ್ರಿಕೆ ದಶಮಾನೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಸುರಭಿ ಸೇವಾ ಚಾರಿಟೇಬಲ್‌ ಟ್ರಸ್‌್ಟ ಅಧ್ಯಕ ಎಸ್‌.ಜಿ. ರಾಮಚಂದ್ರ ಅದ್ಯಕ್ಷತೆ ವಹಿಸಿದ್ದರು. ವಿದ್ವಾನ್‌ ನಾರಾಯಣ ಭಟ್‌ ಮರಾಠೆ, ವಾಣಿ, ಸಂದೀಪ ಯು.ಎಲ್‌., ರಾಜೇಶ್‌, ಗುರುಮೂರ್ತಿ, ಶ್ರೇಯಸ್‌, ಸಚಿನ್‌, ಅರುಣ, ದಿನೇಶ ಮತ್ತಿತರರು ಉಪಸ್ಥಿತರಿದ್ದರು. ಎನ್‌. ಷಣ್ಮುಖಾಚಾರ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಈ ಸಂದರ್ಭದಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ, ಶಿವಮೊಗ್ಗ ಟೈಮ್ಸೌ ದಿನಪತ್ರಿಕೆಯ ಸಂಪಾಧಕ ಎಸ್‌.ಚಂದ್ರಕಾಂತ ಅವರಿಗೆ ರಾಜ್ಯ ಸುರಭಿಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯೋಧ ಎನ್‌. ಜಗದೀಶ, ಡಾ| ಗಂಗಾಧರ ವ.ಮ. ಆತ್ರೇಯ ಸಾಗರ, ಅರುಣ್‌ ವಿನಾಯಕ ಶೇಟ್‌ ಹೊಸಾಡು (ಇಳಕಲ್‌), ಎನ್‌.ವಿ. ಈರೇಶ್‌ ಶಿಕಾರಿಪುರ, ಬಿ.ವಿ. ಗಣಪತಿ ಭಟ್‌ ಬೆಂಗಳೂರು, ರಾಜು ಎಂ. ರೇವಣಕರ್‌ ರಾಣೇಬೆನ್ನೂರು, ಮಹೇಂದ್ರಕುಮಾರ ಜೈನ್‌ ಶಿರಾಳಕೊಪ್ಪ, ಪ್ರದೀಪ್‌ ಎಲ್ಲನಕರ ಶಿರಸಿ, ಸತ್ಯನಾರಾಯಣ ರಾಯ್ಕರ್‌ ದಾವಣಗೆರೆ, ಸಂತೋಷ್‌ ಮಧುಕರ ಶೇಟ್‌ ಶಿರಸಿ, ಬಸವನಗೌಡ ಎಂ. ಮಲ್ಲಾಪುರ, ಗಜಾನನ ಎಸ್‌. ಅಣ್ವೇಕರ್‌ ಹುಬ್ಬಳ್ಳಿ ಅವರಿಗೆ ಸುರಭಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.