ಶಿವಮೊಗ್ಗಸೊರಬ

ತಾಲ್ಲೂಕಿನಲ್ಲಿ ನಮೋ ವೇದಿಕೆ ಸಂಘಟನೆ ಸ್ಥಿರ; ಅಭ್ಯರ್ಥಿ  ಬದಲಾವಣೆ ಮಾಡುವುದೆ ನಮ್ಮ ಮೂಲ ಉದ್ದೇಶ

ಸೊರಬ: ತಾಲ್ಲೂಕಿನಲ್ಲಿ ನಮೋ ವೇದಿಕೆ ಸಂಘಟನೆ ಸ್ಥಿರ ವಾಗಿದ್ದು, ಅಭ್ಯರ್ಥಿ  ಬದಲಾವಣೆ ಮಾಡುವುದೆ ನಮ್ಮ ಮೂಲ ಉದ್ದೇಶವಾಗಿದ್ದು ಕುಮಾರ್‌ ಬಂಗಾರಪ್ಪ ಅವರೊಂದಿಗೆ ಸಂಧಾನದ ಪ್ರಶ್ನೆಯೇ ಇಲ್ಲ ಎಂದು ನಮೋ ವೇದಿಕೆ ಅಧ್ಯಕ್ಷ ಪಾಣಿ ರಾಜಪ್ಪ ಸ್ಪಷ್ಟಪಡಿಸಿದರು.

ಮಂಗಳವಾರ ಪಟ್ಟಣದ ನಮೋ ವೇದಿಕೆ ಕಾರ್ಯ್ಲ ಯದಲ್ಲಿ ಮಾ.25ರಂದು ಆನವಟ್ಟಿ ಯಲ್ಲಿ ನಡೆಯುವ ಬೃಹತ್‌   ರಾಲಿ ಪ್ರಯಕ್ತ ಹಮ್ಮಿಕೊಂಡಿದ್ದ ಪೂರ್ವ ಭಾವಿ ಸಭೆಯಲ್ಲಿ ಕರಪತ್ರ ಬಿಡು ಗಡೆಗೊಳಿಸಿ  ಮಾತನಾಡಿದ ಅವ ರು ಚುನಾವಣೆ ಸಮೀಪಿಸುತ್ತಿ ದ್ದಂತೆ ಶಾಸಕ ಕುಮಾರ್‌ ಬಂಗಾ ರಪ್ಪ ಅವರು ನಮೋ ವೇದಿಕೆ ಮುಖಂಡರು ನಮ್ಮ ಸಹೋ ದರರು, ನಾವೆಲ್ಲರೂ ಒಗ್ಗಟ್ಟಾಗಿ ಚುನಾವಣೆ ಮಾಡಲಿದ್ದೇವೆ ಎಂದು ಹೇಳುವ ಮೂಲಕ ಜನರ ನ್ನು ದಿಕ್ಕು ತಪ್ಪಿಸಲು ಮುಂದಾಗಿ ದ್ದಾರೆ. ಶಾಸಕರ ದುರಾಡಳಿತದ ಬಗ್ಗೆ ಜನರಿಗೆ ಈಗಾಗಲೇ ಹಲ ವಾರು ಬಾರಿ ಬಹಿರಂಗಪಡಿಸ ಲಾಗಿದೆ. ಶಾಸಕರನ್ನು ಕಿತ್ತೆಸೆಯಲು ಮೂಲ ಬಿಜೆಪಿ ಮುಖಂಡರು ನಮೋ ವೇದಿಕೆ  ಮೂಲಕ ಕಾರ್ಯಕರ್ತರಿಗೆ  ಭರವಸೆ ನೀಡಿದ್ದು,  ಯಾವುದೇ ಕಾರಣಕ್ಕೂ ನೀಡಿದ ಭರವಸೆಗೆ ಮೋಸ ಮಾಡುವುದಿಲ್ಲ.  ಅಭ್ಯರ್ಥಿ ಬದಲಾವಣೆ ಮಾಡಿದರೆ ಮಾತ್ರ ಬಿಜೆಪಿ ಪರವಾಗಿ ಚುನಾವಣೆ ಮಾಡುತ್ತೇವೆ ಎಂದು ತಿಳಿಸಿದರು.

ಕುಮಾರ್‌ಬಂಗಾರಪ್ಪ ಅವರೊಂದಿಗೆ ಸಂಧಾನದ ಪ್ರಶ್ನೆಯೇ ಇಲ್ಲ : ಪಾಣಿ ರಾಜಪ್ಪ

ಕಳೆದ 5 ವರ್ಷಗಳಿಂದ ಶಾಸಕರ ಸರ್ವಾಕಾರಿ ಧೋರಣೆ ವಿರುದ್ಧ ಜನರು ಬೇಸತ್ತಿದ್ದು ನಾಯ ಕತ್ವ ಬದಲಾವಣೆಗೆ ಒಕ್ಕೊರಲಿನ ಕೂಗು ಕೇಳಿ ಬರುತ್ತಿದೆ. ಹಲವು ವರ್ಷಗಳಿಂದ ಬಿಜೆಪಿ ಕಟ್ಟಿ ಬೆಳೆಸಿದ ಹಿರಿಯರನ್ನು ಕಡಗಣಿಸಿ ಅಗೌರವ ತೋರಿದ ಶಾಸಕರನ್ನು ಮನೆಗೆ ಕಳಿಸುವುದೇ ನಮ್ಮ ಉದ್ದೇಶವಾಗಿದೆ ಎಂದ ನಮೋ ವೇದಿಕೆ ಹಿರಿಯ ಮುಖಂಡ ಗಜಾ ನನರಾವ್‌ ಉಳವಿ ತಿಳಿಸಿದರು.

ವಿಸ್ತಾರ್‌ ಯೋಜನೆ ಹೆಸರಿ ನಲ್ಲಿ ಹಣ ಮಾಡಲು ಉದ್ದೇಶಿಸಿ  ಜಂಗಿನಕೊಪ್ಪ,ಹಳೇಸೊರಬ ಗ್ರಾಮಸ್ಥರಿಗೆ ತೊಂದರೆ ಕೊಟ್ಟು ಸೊರಬ ಹಾಳಗೆಡವಲು ಮುಂದಾ ಗಿರುವುದು ಅವೈಜ್ಞಾನಿಕ ಅಭಿವೃದ್ಧಿ ಕಾರ್ಯಕ್ಕೆ ಹಿಡಿದ  ಕನ್ನಡಿಯಾ ಗಿದೆ. ತಾಲ್ಲೂಕಿನ ತಾಳಗುಪ್ಪ ಗ್ರಾಮದ ಬಗರ್‌ ಹುಕುಂ ರೈತರ ಜಮೀನು ತೆರವುಗೊಳಿಸಲು ಕುಮಾರ್‌ ಬಂಗಾರಪ್ಪ ಪರೋಕ್ಷ ವಾಗಿ ಕುಮ್ಮಕ್ಕು ನೀಡಿದ್ದಾರೆ. ವೇದಿಕೆಯಲ್ಲಿ ಬಗರ್‌ ಹುಕುಂ ಸಾಗುವಳಿದಾರರ ಪರವಾಗಿ ಮಾತ ನಾಡಿ ಹಿಂದಿನಿಂದ ಒಕ್ಕಲೆಬ್ಬಿಸಲು ಹುನ್ನಾರ ನಡೆಸಿದ್ದಾರೆ. ಬೇರೆ ಕ್ಷೇತ್ರದ ಶಾಸಕರು ಭೂಮಿ ಹಕ್ಕು ಕೊಡಿಸಲು ಪ್ರಯತ್ನಿಸುತ್ತಿದ್ದರೆ ಇಲ್ಲಿನ ಶಾಸಕ ಬಡವರ ಮನೆ ನೆಲಸಮಗೊಳಿಸುವುದು. ಭೂ ಹಕ್ಕು ವಜಾಗೊಳಿಸುವುದೇ ನಿಜ ವಾದ ಅಭಿವೃದ್ಧಿ ಎಂದು ಭಾವಿಸಿ ದ್ದಾರೆ. ಇಂತಹವರಿಗೆ ಜನ ಬೆಂಬ ಲಿಸುವುದಿಲ್ಲ ಎಂದು ಆರೋಪಿಸಿ ದರು.ತಾಲ್ಲೂಕು ಸಂಘಟನಾ ಕಾರ್ಯದರ್ಶಿ ದಿವಾಕರಭಾವೆ, ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ್‌, ಡಿ.ಶಿವಯೋಗಿ,  ಪುಟ್ಟನಹಳ್ಳಿ, ಬರಗಿ ಚಂದ್ರಪ್ಪ, ಚಂದ್ರಪ್ಪ ಅಂಗಡಿ, ಗುರುವಪ್ಪ ಬಿಳವಾಣಿ ಇದ್ದರು.