ಜಿಲ್ಲಾ ಸುದ್ದಿ

ನನ್ನ ಮೊದಲ ಆದ್ಯತೆ ಅಭಿವೃದ್ದಿಗೆ : ಹಾಲಪ್ಪ ಹರತಾಳು

ಸಾಗರ : ಮಲೆನಾಡು ಭಾಗದ ರೈತರ ಭೂಮಿ ಸಮಸ್ಯೆ ಗಂಭೀರವಾಗಿದ್ದು, ಸದನದ ಒಳಗೆ ಮತ್ತು ಹೊರಗೆ ರೈತರ ಧ್ವನಿಯಾಗಿ ಕೆಲಸ ಮಾಡಲು ತಮ್ಮನ್ನು ಗೆಲ್ಲಿಸುವಂತೆ ಶಾಸಕ ಹಾಲಪ್ಪ ಹರತಾಳು ಮನವಿ ಮಾಡಿದ್ದಾರೆ.

ತಾಲ್ಲೂಕಿನ ಆನಂದಪುರಂ ಹೋಬಳಿಯ ನರಸೀಪುರ, ಭೈರಾ ಪುರ, ಹಿರೇಹಾರಕ, ಗೌರಿಹಳ್ಳ, ಉದ್ದೂರು, ಇರುವಕ್ಕಿ ಇನ್ನಿತರೆ ಗ್ರಾಮದಲ್ಲಿ ವಿವಿಧ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಗೊಂಡವರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡುತ್ತಿದ್ದರು.

ನನ್ನ ಮೊದಲ ಆದ್ಯತೆ ಅಭಿವೃದ್ದಿ, 2ನೇ ಆದ್ಯತೆ ಮಲೆನಾಡು ರೈತರ ಜಮೀನಿನ ಸಮಸ್ಯೆ ಬಗೆಹರಿಸುವುದು. ಮಲೆನಾಡು ರೈತರ ಪರವಾಗಿ ಎರಡು ಸಲ ಗೆದ್ದಾಗಲೂ ಒಂದೂ ಮಾತನಾಡದವರು ಈಗ ಕಾಂಗ್ರೇಸ್‌ ಅಭ್ಯರ್ಥಿ. ಹಾಲಿ ಕಾಂಗ್ರೇಸ್‌ ಅಭ್ಯರ್ಥಿ ಶಾಸಕರಾಗಿದ್ದಾಗ ಮಾತನಾಡಿದ್ದು ಗೋವಾ, ಹೈದರಾಬಾದ್‌ ರೆಸಾರ್ಟ್‌ಗಳಲ್ಲಿ ಮಾತ್ರ. ಜನಪರ ಕೆಲಸಗಳಿಗೆ ವಿಧಾನಸೌಧದ ಒಳಗೆ ಕಾಂಗ್ರೇಸ್‌ ಅಭ್ಯರ್ಥಿ ಮಾತನಾಡಿದ್ದು ನಾವ್ಯಾರೂ ಒಂದು ಬಾರಿಯೂ ನೋಡಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಮಾಪತಿ ಪಿ.ಆರ್‌., ನಾಗರಾಜ್‌ ಎನ್‌.ಡಿ., ಮಂಜುನಾಥ್‌, ವೀರೇಶ್‌, ಸುಂದ ರೇಶ್‌, ದೇವೇಂದ್ರ, ನಾಗರಾಜ್‌, ದರ್ಶನ್‌, ಚೌಡಪ್ಪ, ಮಲ್ಲೇಶಪ್ಪ ಸೇರಿದಂತೆ 150ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂ ಡರು. ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು, ಪ್ರಮುಖರಾದ ಶಾಂತಕುಮಾರ್‌, ಭರ್ಮಪ್ಪ  ಗಂಗಮ್ಮ, ರೇವಪ್ಪ ಇನ್ನಿತರರು ಹಾಜರಿದ್ದರು.