ಶಿವಮೊಗ್ಗಶಿವಮೊಗ್ಗ ನಗರ

ಮಾ.24 : ಶಿವಮೊಗ್ಗದಲ್ಲಿ ರಾಷ್ಟ್ರೀಯ ರಕ್ಷಾ ವಿವಿ ಮೂರನೇ ಕ್ಯಾಂಪಸ್‌ ಉದ್ಘಾಟನೆ : ಬಿ.ವೈ. ರಾಘವೇಂದ್ರ

ಶಿವಮೊಗ್ಗದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕ್ಯಾಂಪಸ್‌ ಅನ್ನು ಸ್ಥಾಪನೆ ಮಾಡಲು ಮಂಜೂರಾತಿ ನೀಡಿದ ಕೇಂದ್ರ ಗೃಹ ಸಚಿವ  ಅಮಿತ್‌ ಷಾ ರವರಿಗೆ ಶಿವಮೊಗ್ಗ ಕ್ಷೇತ್ರದ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

ಈ ಒಂದು ಕ್ಯಾಂಪಸ್‌ ಸ್ಥಾಪಿಸಲು ವಿಶೇಷ ಆಸಕ್ತಿವಹಿಸಿ ರಾಜ್ಯ ಸರ್ಕಾರದ ಎಲ್ಲಾ ರೀತಿಯ ನೆರವು ನೀಡುತ್ತಿರುವ ರಾಜ್ಯ ಸರ್ಕಾರದ ಗೃಹ ಮಂತ್ರಿ ಅರಗ ಜ್ಞಾನೇಂದ್ರರವರಿಗೂ ಹಾಗೂ   ಮುಖ್ಯ ಮಂತ್ರಿ ಬಸವರಾಜ್‌ ಬೊಮ್ಮಾಯಿ ನೇತೃ ತ್ವದ ರಾಜ್ಯ ಸರ್ಕಾರಕ್ಕೂ ಅಭಿನಂದನೆ ಗಳು.

ಶಿವಮೊಗ್ಗ ನಗರದ ನವುಲೆ ಸರ್ವೆ ನಂ 112ರಲ್ಲಿ ಕಾಯ್ದಿರಿಸಲಾಗಿರುವ 8.00 ಎಕರೆ ಭೂಮಿಯಲ್ಲಿ ದೇಶದಲ್ಲಿಯೇ 3ನೇ ಕ್ಯಾಂಪಸ್‌ ಆನ್ನು ಶಿವಮೊಗ್ಗದಲ್ಲಿ ಪ್ರಾರಂ ಭಿಸಲಾಗುತ್ತಿದ್ದು, ಕೇಂದ್ರ ಗೃಹ ಸಚಿವ ರಾದ ಅಮಿತ ಷಾರವರು ಮಾ.24 ರ ಶುಕ್ರವಾರ ಶಿವಮೊಗ್ಗದ ನವುಲೆಯ ಲ್ಲಿರುವ ಹಳೆಯ ಕೇಂದ್ರೀಯ ವಿದ್ಯಾಲ ಯದ ಕಟ್ಟಡದಲ್ಲಿ ವರ್ಚುಯಲ್‌ ಮೂ ಲಕ ಉದ್ಘಾಟನೆಯನ್ನು ನೆರವೇರಿಸಲಿ ದ್ದಾರೆ.

ಉದ್ಯೋಗ ಅರಸುತ್ತಿರುವ ಸಾವಿ ರಾರು ಯುವಕರಿಗೆ ಉದ್ಯೋಗ ದೊರೆ ಯಲು ಸಹಾಯಕವಾಗುವಂತಹ ಮಹತ್ತ ರವಾದ ಈ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲ ಯದ ಕ್ಯಾಂಪಸ್‌ ನಲ್ಲಿ ಡಿಪ್ಲೊಮೋ ಇನ್‌ ಪೊಲೀಸ್‌ ಸೈನ್‌್ಸ, ಪಿ.ಜಿ. ಡಿಪ್ಲೋಮೋ ಸೈಬರ್‌ ಸೆಕ್ಯುರಿಟಿ ಆ್ಯಂಡ್‌ ಸೈಬರ್‌ ಲಾ, ಬೇಸಿಕ್‌ ಕೋರ್ಸ್‌ ಇನ್‌ ಕಾರ್ಪೋರೇಟ್‌ ಸೆಕ್ಯುರಿಟಿ ಮ್ಯಾನೇಜ್ಮೆಂಟ್‌, ಸರ್ಟಿಫಿಕೇಟ್‌ ಕೋರ್ಸ್‌ ಇನ್‌ ಕೋಸ್ಟಲ್‌ ಸೆಕ್ಯುರಿಟಿ  ಲಾ ಎನೋರ್ಸೆ್ಮಂಟ್‌, ಟೂ ವಿಕ್‌್ಸ ಸರ್ಟಿಫಿಕೇಟ್‌ ್ರೇಗ್ರಾಂ ಇನ್‌ ರೋಡ್‌ ಟ್ರಾಫಿಕ್‌ ಸೇಫ್ಟಿ ಮ್ಯಾನೇಜ್‌ ಮೆಂಟ್‌, ಮತ್ತು ಟೂ ವೀಕ್‌್ಸ  ಸರ್ಟಿಫಿಕೇಟ್‌ ್ರೇಗ್ರಾಂ ಇನ್‌ ಫಿಷಿಕಲ್‌ ಫಿಟ್ನೆಸ್‌ ಮ್ಯಾನೇಜ್ಮೆಂಟ್‌ ಕೋರ್ಸ್‌ ಗಳನ್ನು ಮೊದಲ ಹಂತದಲ್ಲಿ ಪ್ರಾರಂಭಿಸಲಾ ಗುತ್ತಿದ್ದು, ಇದೇ ವರ್ಷದ ಶೈಕ್ಷಣಿಕ ವರ್ಷದಿಂದ ಬರುವ ಅಗಸ್‌್ಟ ನಿಂದಲೇ ಪ್ರಾರಂಭಗೊಳ್ಳಲಿದೆ.

ಈ ರೀತಿಯ ಕೋರ್ಸ್‌ ಗಳನ್ನು ಮಾಡಿ ಕೊಳ್ಳುವ ಯುವಕ/ಯುವತಿಯರಿಗೆ ಪೊಲೀಸ್‌ ಸೇವೆ, ಶಸಸಜ್ಜಿತ ಸೇವೆಗಳಿಗೆ ಸೇರಲು ಬೇಕಾಗಿರುವಂತಹ ತರಬೇತಿ ಸಿಗುವುದರ ಜೊತೆಗೆ ಹಾಲಿ ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಸೇವೆಯ ಲ್ಲಿರುವ ಅಕಾರಿ ಮತ್ತು ಸಿಬ್ಬಂದಿಗಳಿಗೆ ಬೇಕಾಗಿರುವಂತಹ ತರಬೇತಿ ಮತ್ತು ಸಂಶೋಧನೆಗಳನ್ನು ನಡೆಸಲು ಸಹ ಇದು ಸಹಕಾರಿಯಾಗಲಿದೆ.

ಗುಜರಾತಿನ ಗಾಂನಗರದಲ್ಲಿ  ಕೇಂದ್ರ ಸ್ಥಾನವನ್ನು ಹೊಂದಿರುವ ಈ ವಿಶ್ವವಿದ್ಯಾಲಯವು ಅರುಣಾಚಲ ಪ್ರದೇಶದಲ್ಲಿ 2ನೇ ಕ್ಯಾಂಪಸ್‌ ಅನ್ನು ಹೊಂದಿದ್ದು, ಶಿವಮೊಗ್ಗದಲ್ಲಿ ಸ್ಥಾಪನೆಗೊಳ್ಳು ತ್ತಿರುವುದು 3ನೇ ಕ್ಯಾಂಪಸ್‌ ಆಗಿದೆ.

ಈಗಾಗಲೇ ಶಿವಮೊಗ್ಗದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕ್ಯಾಂಪಸ್‌ ಸ್ಥಾಪನೆಗೆ ಸಂಬಂಸಿದಂತೆ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾ ಲಯದ  ಪ್ರೋ ಉಪ ಕುಲಪತಿಗಳಾದ ಡಾ. ಆನಂದ ಕುಮಾರ್‌ ತ್ರಿಪಾಠಿರವರ ನೇತೃತ್ವದಲ್ಲಿ ಡಾ. ಧನುಷ್‌ ಕುಮಾರ್‌ ಪ್ರಜಾಪತಿ, ಸಹಾಯಕ ಕುಲಸಚಿವರು, ಶ್ರೀ ವಿಶ್ವ ಪ್ರತಾಪ್‌ ಸಿಂಗ್‌ ಶೇಕಾವತ್‌, ಕ್ಯಾಂಪಸ್‌ ನಿರ್ದೇಶಕರು ಹಾಗೂ ಶ್ರೀ ಆತೀಷ್‌ ಬಾರೋಟ್‌, ಆಡಳಿತಾ ಕಾರಿಗಳ ನಾಲ್ಕು ಜನರ ತಂಡವು ಮಾ.20 ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಮಾ.24 ಕಾರ್ಯಕ್ರಮದ ಎಲ್ಲಾ ಪೂರ್ವ ಸಿದ್ದತೆಗಳನ್ನು ನಡೆಯುತ್ತಿವೆ.