ತಾಜಾ ಸುದ್ದಿ

ತಮ್ಮ ನಾಲಿಗೆ ಹರಿ ಬಿಟ್ಟಿರುವ ಮಧು ಬಂಗಾರಪ್ಪ ನನ್ನನ್ನು ಸಹೋದರನೆ ಅಲ್ಲ ಎಂದು ಒಪ್ಪಿಕೊಳ್ಳದ ವಿಕೃತ ಮನಸ್ಥಿತಿ ತಲುಪಿದ್ದಾರೆ: ಕುಮಾರ್‌ ಬಂಗಾರಪ್ಪ

ಸೊರಬ: ಸಾಮಾಜಿಕ ಹಾಗೂ ರಾಜಕೀಯದ ಬಗ್ಗೆ ಕನಿಷ್ಠ ಸಂಸ್ಕೃತಿ ಅರಿಯದ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಎಸ್‌. ಬಂಗಾರಪ್ಪ ಅವರ ಆದರ್ಶಗಳನ್ನು ಮುನ್ನಡಿಸಿಕೊಂಡು ಹೋಗುವಲ್ಲಿ ವಿಲವಾಗಿದ್ದಾರೆ ಎಂದು ಶಾಸಕ ಕುಮಾರ್‌ ಬಂಗಾರಪ್ಪ ಕಿಡಿಕಾರಿ ದರು.

ಗುರುವಾರ ಪಟ್ಟಣದ ತಾಲ್ಲೂಕು ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ  ಮಾತನಾಡಿದ ಅವರು ಚುನಾವಣೆ ಸಮೀಪಿಸುತ್ತಿದ್ದಂತೆ ತಮ್ಮ ನಾಲಿಗೆ ಹರಿ ಬಿಟ್ಟಿರುವ ಮಧು ಬಂಗಾರಪ್ಪ ನನ್ನನ್ನು ಸಹೋದರನೆ ಅಲ್ಲ ಎಂದು ಒಪ್ಪಿಕೊಳ್ಳದ ವಿಕೃತ ಮನಸ್ಥಿತಿ ತಲುಪಿದ್ದಾರೆ. ತಮ್ಮ 5 ವರ್ಷದ ಶಾಸಕತ್ವದ ಅವಽಯಲ್ಲಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ನೀಡಿಲಿಲ್ಲ. ಚುನಾವಣೆ ಸಂದರ್ಭದಲ್ಲಿ ರಕ್ತ ಸಂಬಂಧದ ಬೆಲೆ ತಿಳಿಯದೆ ಏಕ ವಚನದಲ್ಲಿ ಸಂಭೋದಿಸುತ್ತ ಸುಳ್ಳು ಹೇಳುವ ಮೂಲಕ ಜನರನ್ನು ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್‌ ನಲ್ಲಿದ್ದಾಗ ಎಚ್‌. ಡಿ.ದೇವೇಗೌಡ ಅವರನ್ನು ಪಿತೃ ಸಮಾನ, ಕುಮಾರಸ್ವಾಮಿ ಅವರನ್ನು ಅಣ್ಣನ ಸಮಾನ ಎಂದು ಹೊಗಳುತ್ತಲೇ ಅವರಿಂದ ಎಲ್ಲ  ರೀತಿಯ ಲಾಭ ಪಡೆದು ಬೆನ್ನಿಗೆ ಚೂರಿ ಹಾಕಿದ್ದಾರೆ. ಜೆಡಿಎಸ್‌ ವರಿಷ್ಠರು ತಮ್ಮ ಪಕ್ಷದ ಅಭ್ಯರ್ಥಿ ಪರ ಚುನುವಣಾ ಪ್ರಚಾರಕ್ಕೆ ಆಗಮಿಸುವ ಸಂದರ್ಭದಲ್ಲಿ ಮಧು ಬಂಗಾರಪ್ಪ ಅವರಿಗೆ ಮಾಡಿದ ವ್ಯೆಯಕ್ತಿಕ ಉಪಕಾರ,  ಅವರು ಪಕ್ಷಕ್ಕೆ ಮಾಡಿದ  ದ್ರೋಹದ ಬಗ್ಗೆ ಜನರ ಮುಂದೆ ಬಿಚ್ಚಡಲಿದ್ದಾರೆ ಎಂದರು.

 ನಮೋ ವೇದಿಕೆ ಹಾಗೂ ಬಿಜೆಪಿ ಒಂದೆ ಆಗಿದ್ದು, ಭಿನ್ನಾ ಭಿಪ್ರಾಯವನ್ನು ಮರೆತು ಒಟ್ಟಾಗಿ ಚುನಾವಣೆ ಮಾಡುತ್ತೇವೆ. ಕಾಂಗ್ರೆಸ್‌ ಮುಳುಗುವ ಹಡಗು. ಅದರಲ್ಲಿ ಪ್ರಯಾಣಿಸುವ ಮಧು ಬಂಗಾರಪ್ಪ ಅವರು ಸಿದ್ದರಾ ಮಯ್ಯ ಹಾಗೂ ಡಿ.ಕೆ.ಶಿವಕು ಮಾರ್‌ ಅವರನ್ನು ಹಾಳು ಹೊಗ ಳುತ್ತಿದ್ದಾರೆ. ಕಳೆದ ಚುನಾವಣೆ ಯಲ್ಲಿ ಪ್ರಚಾರಕ್ಕೆ ಬಂದ ಸಿದ್ದ ರಾಮಯ್ಯ ಶಾಸಕರಾಗಿದ್ದ ಮಧು ಬಂಗಾರಪ್ಪ ಅವರು ಕ್ಷೇತ್ರದ ಅಭಿ ವೃದ್ಧಿಗೆ ಒಂದೇ ಒಂದು ಮನವಿ ಕೊಟ್ಟಿಲ್ಲ ಎಂದು ಹೇಳಿರುವುದನ್ನು ಜನರು ಮರೆತಿಲ್ಲ ಎಂದು ಟೀಕಿಸಿ ದರು.

ಅವರ ಆಡಳಿತದ ಅವಽಯಲ್ಲಿ ಮಾಡಿದ ಹೊಲಸನ್ನು ತೊಳೆಯುವುದೇ ನಮ್ಮ ಕೆಲಸ ವಾಗಿದೆ. ಬಗರ್‌ ಹುಕುಂ ಒಂದೇ ಕುಟುಂಬಕ್ಕೆ 70ಎಕರೆ ಜಮೀನು ಮಂಜೂರು ಮಾಡಿದ್ದಾರೆ.   ಬಂಗಾರಪ್ಪ ಅವರ ಸಮಾಽ  ಅಭಿವೃದ್ಧಿಪಡಿಸಲು ಇನ್ನೂ ಸಾಧ್ಯ ವಾಗದ ಅವರಿಗೆ ಇನ್ನೂ ಸಾಮಾ ಜಿಕವಾಗಿ ಜನ ಕಾಳಜಿ ಬರಲು ಹೇಗೆ ಸಾಧ್ಯ. ಹೆತ್ತವರನ್ನು ಮನೆ ಯಿಂದ ಹೊರಹಾಕಿದ್ದಾನೆ ಎಂದು ಅಪಪ್ರಚಾರ ಮಾಡುವ ಅವರು, ಸಾಲ ಮಾಡಿ 3ಬಾರಿ ಮನೆ ಬಿಟ್ಟು ಹೋಗಿದ್ದೇಕೆ ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಪ್ರಣಾಳಿಕೆ ಘೋಷಿಸುವುದು ಮತದಾರರಿಗೆ ನೀಡುವ ಭರವಸೆ ಅಷ್ಟೇ. ಕಾಂಗ್ರೆ ಸ್‌ ಗ್ಯಾರಂಟಿ ಕಾರ್ಡ್‌ ನೀಡುವ ಮೂಲಕ  ಪಕ್ಷದ ಅಧೋಗತಿ ಸಾಬೀತುಪಡಿಸಿಕೊಂಡಿದೆ.

ಕುಟುಂಬ ಮತ್ತು ಸಂಬಂ ಧಗಳ ಬೆಲೆ ತಿಳಿದಿಕೊಂಡಿದ್ದರೆ ನನ್ನ ಪುತ್ರಿ ವಿವಾಹಕ್ಕೆ ಆಗಮಿಸಿ ಹರಿ ಸುತ್ತಿದ್ದರು. ಕುಟುಂಬ ಮನಸ್ತಾಪ ದಿಂದ ಸಮಾಜವನ್ನು ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಸಂಬಂಧ ಗಳ ಅರಿವು ಇಲ್ಲದವರಿಂದ ನೀತಿ ಪಾಠ ಕಲಿಯುವ ಅವಶ್ಯಕತೆ ನನಗಿಲ್ಲ. ಚುನಾವಣೆ ಮುಗಿದ ಮೇಲೆ ವಿದೇಶ ಸುತ್ತುವ ಅವರನ್ನು ಮತದಾರರು ಶಾಶ್ವತವಾಗಿ ಮನೆಗೆ ಕಳುಹಿಸಲಿದ್ದಾರೆ ಎಂದು ಏಕವಚನದಲ್ಲಿ ದಾಳಿ ನಡೆಸಿದರು.

ಮಾ.10 ರಂದು ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವ ದಲ್ಲಿ ಆಗಮಿಸುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯು ಪಟ್ಟಣದ ಪ್ರಮುಖ ಬೀದಿಯಲ್ಲಿ ರೋಡ್‌ ಶೊ ನಡೆಸಲಿದ್ದು, ಸಚಿವರು, ಶಾಸಕರು ಆಗಮಿಸಲಿದ್ದಾರೆ. ಸುಮಾರು 15ಸಾವಿರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್‌ ತಲಕಾಲಕೊಪ್ಪ, ಪುರಸಭೆ ಅಧ್ಯಕ್ಷ ಈರೇಶ್‌ ಮೇಸಿ, ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್‌ ಕಡಸೂರು, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಮುಖಂಡರಾದ ಎಂ.ಡಿ. ಉಮೇಶ್‌,  ದೇವೇಂದ್ರಪ್ಪ, ಕೃಷ್ಣಮೂರ್ತಿ, ಕೆ.ಜಿ. ಬಸವ ರಾಜ್‌, ಶಿವು, ಕಿರಣಕುಮಾರ್‌, ಅಶೋಕ ಶೇಟ್‌, ಪರಶುರಾ ಮಪ್ಪ, ಭವಾನಿ, ಹಸೀನಾ ಬಾನು ಇದ್ದರು.