ಜಿಲ್ಲಾ ಸುದ್ದಿ

ಮಧು ಬಂಗಾರಪ್ಪ ಮಧ್ಯಸ್ತಿಕೆ : ಬೇಳೂರು ಬೆಂಬಲಿಸಲು ಹಕ್ರೆ ತಂಡ ನಿರ್ಧಾರ ಭಯಮುಕ್ತ, ಜನಸ್ನೇಹಿ ಆಡಳಿತಕ್ಕೆ ಕಾಂಗ್ರೆಸ್‌ ಬೆಂಬಲಿಸಬೇಕು- ಮಲ್ಲಿಕಾರ್ಜುನ ಹಕ್ರೆ

ಸಾಗರ: ಭಯಮುಕ್ತ, ಹೊಡಿ ಬಡಿ ಸಂಸ್ಕೃತಿ ರಹಿತ, ಜನಸ್ನೇಹಿ ಆಡಳಿತ ನಡೆಸಲು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸ ಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಲು ನಾನೂ ಒಬ್ಬ ಆಕಾಂಕ್ಷಿಯಾಗಿದ್ದೆ. ಆದರೆ ಟಿಕೇಟ್‌ ಸಿಗಲಿಲ್ಲ. ಟಿಕೇಟ್‌ ಸಿಕ್ಕ ಬೇಳೂರು ಉಮೇದುವಾರನಾಗಿದ್ದ ನನ್ನನ್ನು ಒಮ್ಮೆಯೂ ಮಾತ ನಾಡಿಸಲು ಬಂದಿರಲಿಲ್ಲ ಎಂದರು.

ನಾನು ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಅನೇಕ ಅಭಿಮಾನಿಗಳು ಒತ್ತಾಯಿಸಿದರು. ಜಾತಿರಹಿತವಾಗಿ ನಿರೀಕ್ಷೆ ಮಾಡದ ಸಮುದಾಯದವರು ನನ್ನ ಮೇಲೆ ಅಭಿಮಾನವಿಟ್ಟು ಹರಸಿದರು. ನಿಮ್ಮ ಜೊತೆ ಯಾವ ಸಂದರ್ಭದಲ್ಲೂ ಇರುತ್ತೇವೆ ಎಂದರು. ಇದು ನನಗೊಂದು ಪಾಠವಾಯಿತು. ಕರೂರು ಬಾರಂಗಿ ಹೋಬಳಿ ಜನತೆ ಬೆಂಬಲಿಸಿದರು. ಹೂ ವ್ಯಾಪಾರಿಯೊಬ್ಬರು ಚುನಾವಣಾ ವೆಚ್ಚಕ್ಕೆ 5 ಲಕ್ಷ ರೂ. ನೀಡು ವುದಾಗಿ ಹೇಳಿದರು. ಕೆಲವರು 100 ಬೂತ್‌ ಮಟ್ಟದ ವೆಚ್ಚವನ್ನು ನೋಡಿಕೊಳ್ಳುವುದಾಗಿ ಹೇಳಿದರು. ಜನರ ಜೊತೆಗಿದ್ದರೆ ಚುನಾವಣೆಗೆ ಹಣದ ಅಗತ್ಯವಿಲ್ಲ ಎಂದವರು ಪ್ರತಿಪಾದಿಸಿದರು.

ಈ ಸಂದರ್ಭದಲ್ಲಿ ನಮ್ಮ ಬೆಂಬಲಿಗರೊಂದಿಗೆ ವಿವಿಧೆಡೆ 25ಕ್ಕೂ ಹೆಚ್ಚು ಸಮಾಲೋಚನಾ ಸಭೆ ನಡೆಸಿದ್ದೇನೆ. ಸ್ವತಂತ್ರವಾಗಿ ಸ್ಪರ್ಧೆ ಮಾಡುವಂತೆ ಸಲಹೆಗಳು ಬಂದವು. ಜೆಡಿಎಸ್‌ ಮುಖಂಡ ಕುಮಾರಸ್ವಾಮಿ ತಮ್ಮ ಪಕ್ಷದಿಂದ ಟಿಕೇಟ್‌ ಕೊಡುವುದಾಗಿ ಹೇಳಿ ದರು. ಬಿಜೆಪಿಯಿಂದಲೂ ಹಾಲಪ್ಪ, ಮೇಘರಾಜ್‌ ಬಂದು ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದರು. ಕಾಂಗ್ರೆಸ್‌ ಪಕ್ಷ ಬಿಡುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಬೆಂಗಳೂರಿಗೆ ಹೋಗಿ ಮಾತನಾಡಿದೆ. ಪಕ್ಷದ ರಾಜ್ಯ ಉಸ್ತುವಾರಿ ಸುರ್ಜೇ ವಾಲಾ ಅವರೊಂದಿಗೂ ಮಾತನಾ ಡಿದಾಗ, ನೀವು ಪಕ್ಷ ಬಿಡುವುದರಿ ಂದ ಹಾನಿ ಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ನಂತರದ ಬೆಳವಣಿಗೆಯಲ್ಲಿ ಸ್ನೇಹಿತ ಅಶೋಕ್‌ ಬರದವಳ್ಳಿ ಯವರ ನೇತೃತ್ವದಲ್ಲಿ ಮಧು ಬಂಗಾರಪ್ಪ ಅವರ ಮಧ್ಯಸ್ತಿಕೆ ಯಲ್ಲಿ ಮಾತುಕತೆ ನಡೆದು ಕಾಂಗ್ರೆಸ್‌ ಪಕ್ಷದಲ್ಲೇ ಮುಂದುವರಿ ಯುವ ನಿರ್ಧಾರ ಮಾಡಿದ್ದೇನೆ ಎಂದವರು ನಡೆದ ಬೆಳವಣಿಗೆ ವಿವರಿಸಿದರು.

ಪಕ್ಷದ ಅಭ್ಯರ್ಥಿ ಬೇಳೂರು ನಮ್ಮ ಮನೆಗೂ ಬಂದು ವಿಶ್ವಾಸ ದಿಂದ ಹೋಗೋಣ ಎಂದರು. ಅವರ ಭಾವನೆಯನ್ನು ನಾನು ನಂಬುತ್ತೇನೆ. ಅಭಿಮಾನಿಗಳ ಒತ್ತಾಸೆಯಿಂದ ಕಾಂಗ್ರೆಸ್‌ನಲ್ಲೇ ಇದ್ದು, ಪಕ್ಷವನ್ನು ಗೆಲ್ಲಿಸುವ ನಿರ್ಧಾರ ಮಾಡಿದ್ದೇವೆ. ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿ ಯನ್ನು ಗೆಲ್ಲಿಸುತ್ತೇವೆ ಎಂದರು.

ಭ್ರಷ್ಟಾಚಾರರಹಿತ ಆಡಳಿತ ಬೇಕು. ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಒಂದೊಂದು ವೈನ್‌ಶಾಪ್‌ ತೆರೆ ಯುವ ಯೋಜನೆಗೆ ಬ್ರೇಕ್‌ ಹಾಕಬೇಕು. ಪೊಲೀಸ್‌ ಠಾಣೆಗಳು ಜನರಿಗೆ ನ್ಯಾಯ ಕೊಡುವಂತಾ ಗಬೇಕು ಎಂದರು.

ತಾಪಂ,ಮಾಜಿ ಉಪಾಧ್ಯಕ್ಷ ಅಶೋಕ್‌ ಬರದವಳ್ಳಿ ಮಾತ ನಾಡಿ,  ಪಕ್ಷದಲ್ಲಿ ಏಳು ಜನ ಟಿಕೇಟ್‌ ಆಕಾಂಕ್ಷಿ ಗಳಿದ್ದರೂ ಎರಡು ಗುಂಪು ನಮ್ಮನ್ನು ಕಡೆಗಣಿ ಸಿದ್ದರು. ಹಕೆಯವರೊಬ್ಬ ಸಮರ್ಥ ನಾಯಕರು. ಅವರಿಗೆ ಶಾಸಕ ಸ್ಥಾನ ನಿರ್ವಹಿಸುವ ಎಲ್ಲ ಅರ್ಹತೆಯೂ ಇದೆ. ಜನ ಅವ ರನ್ನು ಬೆಂಬಲಿ ಸುತ್ತಾರೆ ಎಂದರು.

ಡಾ.ರಾಜನಂದಿನಿ ಹೋಗಬಾರದಿತ್ತು : ಕಾಂಗ್ರೆಸ್‌ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಡಾ.ರಾಜನಂದಿನಿ ಯವರು ಬಿಜೆಪಿಗೆ ಹೋಗಬಾರದಿತ್ತು. ಅವರು ಪಕ್ಷವನ್ನು ಬಿಟ್ಟಿದ್ದರಿಂದ ಪಕ್ಷಕ್ಕೆ ನಷ್ಟವಾಗಿದೆ. ಪಕ್ಷಕ್ಕೆ ಪ್ರತಿಯೊಬ್ಬರೂ ಮುಖ್ಯ. ಕಾಗೋಡು ತಿಮ್ಮಪ್ಪನವರು ಸಮಾ ಜವಾದಿ ಚಿಂತನೆಯ ನಾಯಕರು. ಅವರ ಮಗಳು ಬಿಜೆಪಿಗೆ ಹೋಗಿರುವುದು ಸರಿಯಾದ ತೀರ್ಮಾನವಲ್ಲ. ಅವರನ್ನು ವಾಪಸು ಕರೆತರಲು ಪ್ರಯತ್ನಿಸುವುದಾಗಿ ಹೇಳಿ ದರು.

ತೀ.ನ.ಶ್ರೀನಿವಾಸ್‌ ಕೂಡ ಕಾಂಗ್ರೆಸ್‌ ಪಕ್ಷವನ್ನು ಬಿಟ್ಟಿರುವುದು ನಷ್ಟವೇ ಹೌದು. ಅವರೊಬ್ಬ ರೈತ ಹೋರಾಟಗಾರ. ಅವರ ಹಿರಿತನಕ್ಕೆ ಗೌರವ ಕೊಡಬೇಕಿತ್ತು. ಜಿಲ್ಲಾಧ್ಯಕ್ಷ ಸ್ಥಾನದಲ್ಲಿ ಕೆಲಸ ನಿರ್ವಹಿಸಿದ್ದರು. ಅವರಿಗೆ ಸರಿಯಾದ ಹುದ್ದೆ ನೀಡಿ ಗೌರವಿಸಬೇಕಿತ್ತು. ಆದರೆ ನಮ್ಮ ಕೆಲವು ಸ್ಥಳೀಯ ಮುಖಂಡರು ಅವರನ್ನು ಕಡೆಗಣಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪಕ್ಷದ ಪ್ರಮುಖರಾದ ಸ್ವಾಮಿ ಗೌಡ್ರು, ಮೋಹನ್‌, ನಾಗರಾಜ್‌, ಣಿ, ರಾಮಚಂದ್ರ ಮತ್ತಿತರರು ಹಾಜರಿದ್ದರು.