ಶಿವಮೊಗ್ಗಶಿವಮೊಗ್ಗ ನಗರ

ಮಾ. 25: ಬಿಜೆಪಿ ಮಹಾ ಸಂಗಮ ಸಮಾವೇಶ

ಶಿವಮೊಗ್ಗ: ದಾವಣಗೆರೆ ಯಲ್ಲಿ ಮಾ. 25 ರಂದು ಬಿಜೆಪಿ ಮಹಾ ಸಂಗಮ ಸಮಾವೇಶ ನಡೆಯಲಿದ್ದು, 10 ಲಕ್ಷಕ್ಕೂ ಅಕ ಜನ ಭಾಗವಹಿಸಲಿದ್ದು, ಪ್ರಧಾನಿ ಮೋದಿ ಅವರು ಕಾರ್ಯ ಕ್ರಮ ಉದ್ಘಾಟಿಸಲಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಸೇರಿದಂತೆ ಎಲ್ಲಾ ಸಂಘಟನಾತ್ಮಕ ಕಾರ್ಯ ಕ್ರಮಗಳಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ನಿರೀಕ್ಷೆಗೂ ಮೀರಿ ಜನ ಬೆಂಬಲಿಸಿದ್ದಾರೆ. ಪೂರ್ಣ ಬಹುಮತ ಪಡೆದು ಬಿಜೆಪಿ ಅಕಾರಕ್ಕೆ ಬರುವುದು ನಿಚ್ಚಳವಾಗಿದೆ ಎಂದರು.

ವಿಪಕ್ಷ ನಾಯಕ ಸಿದ್ಧರಾ ಮಯ್ಯ ವಿರುದ್ಧ ಮತ್ತೆ ಟೀಕಾಪ್ರ ಹಾರ ನಡೆಸಿದ ಈಶ್ವರಪ್ಪ, ವಿಪಕ್ಷ ನಾಯಕರಾಗಿ ಇರುವರೆಗೂ ರಾಜ್ಯದಲ್ಲಿ ಎಲ್ಲೂ ಅವರಿಗೆ ಚುನಾವಣೆಗೆ ನಿಲ್ಲಲು ಜಾಗ ದೊರೆತಿಲ್ಲ.224 ಕ್ಷೇತ್ರಗಳಲ್ಲೂ ನಿಂತರೂ ಸೋಲುವುದು ನಿಶ್ಚಿತ. ಕೋಲಾರ, ಬಾದಾಮಿ, ವರುಣಾ, ಕುಷ್ಟಗಿ ಎಲ್ಲಾ ಕ್ಷೇತ್ರ ಆಯ್ತು. ಈಗ ಮನೆಯವರನ್ನು ಕೇಳಿ ಹೇಳುತ್ತೇನೆ ಎನ್ನುತ್ತಿದ್ದಾರೆ. ಇನ್ನೊಂದೆಡೆ ಡಿಕೆಶಿ ಒಕ್ಕಲಿಗರು ಆಶೀರ್ವಾದ ಮಾಡಿ ದರೆ ನಾನೇ ಸಿಎಂ ಎನ್ನುತ್ತಿದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ಮುಳುಗಿ ದ್ದಾರೆ. ಜಾತಿ ಜಾತಿ ಎನ್ನುತ್ತಲೇ ಜಾತಿ ರಾಜಕಾರಣ ಮಾಡುತ್ತಿರುವ ಪಕ್ಷ ಕಾಂಗ್ರೆಸ್‌. ಬಿಜೆಪಿಯನ್ನು ಕೋಮುವಾದಿಗಳು ಎನ್ನುತ್ತಾರೆ. ಈಗ ಹಿಂದುಳಿದವರ ಪರವಾಗಿ ಹೊರಟಿದ್ದಾರೆ ಎಂದರು.

ಆಯನೂರು ಮಂಜುನಾಥ್‌ ಹೇಳಿಕೆಗಳಿಗೆ ನಾನು ಪ್ರತಿಕ್ರಿ ಯಿಸುವುದಿಲ್ಲ. ನಮ್ಮ ಪಕ್ಷದಲ್ಲಿ ಸ್ಪರ್ಧೆಯ ಬಗ್ಗೆ ಕೇಂದ್ರದ ನಾಯ ಕರು ತೀರ್ಮಾನಿಸುತ್ತಾರೆ. ಕೇಂದ್ರ ದ ನಾಯಕರ ಎಲ್ಲಾ ತೀರ್ಮಾನಕ್ಕೆ ಪಕ್ಷದ ಕಾರ್ಯಕರ್ತನಾಗಿ ನಾನು ಬದ್ಧನಾಗಿದ್ದೇನೆ. ವಿವಿಧ ಕಡೆಗಳಿ ಂದ ನೂರಾರು ಪ್ರತಿಕ್ರಿಯೆ ಬರು ವುದು ಸ್ವಾಭಾವಿಕ. ಅದಕ್ಕೆ ನಮ್ಮ ಅಧ್ಯಕ್ಷರು ಉತ್ತರಿಸುತ್ತಾರೆ ಎಂದರು.