ಸರ್ಕಾರದ ಸೌಲಭ್ಯ ನೇರವಾಗಿ ಅರ್ಹ ಲಾನುಭವಿಗಳಿಗೆ ತಲುಪಲಿ: ಬಿವೈಆರ್
ಶಿಕಾರಿಪುರ: ಸರ್ಕಾರದ ಸೌಲಭ್ಯ ನೇರವಾಗಿ ಅರ್ಹ ಲಾ ನುಭವಿಗಳಿಗೆ ತಲುಪಬೇಕು ಅಕಾರಿಗಳು, ಮದ್ಯವರ್ತಿಗಳು ಈ ಬಗ್ಗೆ ಮುಗ್ದ ಲಾನುಭವಿ ಗಳಿಂದ ಹಣ ದೋಚಿದ ಬಗ್ಗೆ ಸೂಕ್ತ ಮಾಹಿತಿ ನೀಡಿದಲ್ಲಿ ಅಂತಹ ಹಣವನ್ನು ವಾಪಾಸ್ ಕೊಡಿಸಿ ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣ ದಲ್ಲಿ ಡಾ. ಅಂಬೇಡ್ಕರ್ ಅಭಿವೃದ್ದಿ ನಿಗಮ,ಆದಿ ಜಾಂಬವ ಅಭಿವೃದ್ದಿ ನಿಗಮ, ತಾಂಡಾ ಅಭಿವೃದ್ದಿ ನಿಗಮದ ವತಿಯಿಂದ ನಡೆದ ಬಾಬು ಜಗಜೀವನರಾಂ ದ್ವಿಚಕ್ರ ವಾಹನ ಯೋಜನೆ ಮತ್ತು ಸಾಲ ಸೌಲಭ್ಯ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಡವರು ದೀನದಲಿತರು ಶೋಷಿತರ ಕಲ್ಯಾಣಕ್ಕಾಗಿ ಹಾಗೂ ಸ್ವಾವಲಂಭನೆಯ ಬದುಕು ಕಟ್ಟಿ ಕೊಳ್ಳುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಗೊಳಿಸಿದೆ ಎಂದು ತಿಳಿಸಿದರು.
ವಿವಿಧ ನಿಗಮದಡಿಯಲ್ಲಿ ನೀಡಲಾಗುತ್ತಿರುವ ಸಾಲ ಸೌಲಭ್ಯ ವನ್ನು ಲಾನುಭವಿಗಳು ಪಡೆದ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳು ವಂತೆ ತಿಳಿಸಿದರು. ಸಾಲ ಸೌಲಭ್ಯ ಕ್ಕಾಗಿ ಮದ್ಯವರ್ತಿಗಳು ಅಕಾರಿ ಗಳು ಲಂಚ ಪಡೆದು ಲಾನುಭವಿ ಗಳನ್ನು ವಂಚಿಸಿದ್ದಲ್ಲಿ ಅಂತಹವರ ಬಗ್ಗೆ ಸೂಕ್ತತಿ ಮಾಹಿತಿ ನೀಡಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾ ಗುವುದು ಎಂದರು.
ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ವಿತರಿಸು ತ್ತಿರುವ ಗ್ಯಾರೆಂಟಿ ಕಾರ್ಡ್ ಬಗ್ಗೆ ಮೋಸ ಹೋಗದಂತೆ ಎಚ್ಚರಿಸಿದ ಅವರು, ಈಗಾಗಲೇ ಬಿಎಸ್ವೈ ವರು ಸಿಎಂ ಆದ ಅವಯಲ್ಲಿ ವಿವಿಧ ನಿಗಮದ ಮೂಲಕ ಸರ್ಕಾರದ ಸೌಲಭ್ಯವನ್ನು ಎಲ್ಲ ವರ್ಗಕ್ಕೆ ದೊರಕಿಸಿಕೊಟ್ಟು ಆರ್ಥಿಕ ಭದ್ರತೆಯನ್ನು ಕಲ್ಪಿಸಿಕೊಟ್ಟಿದ್ದಾರೆ ಸ್ವಾತಂತ್ರ ದೊರಕಿದ 70 ವರ್ಷ ದೇಶದ ಆಡಳಿತ ಚುಕ್ಕಾಣಿ ಹಿಡಿದು ಜನತೆಗೆ ಯಾವುದೇ ಸೌಲಭ್ಯ ದೊರಕಿಸಿಕೊಡದ ಕಾಂಗ್ರೆಸ್ ಪಕ್ಷ ಇದೀಗ ಗ್ಯಾರೆಂಟಿ ಕಾರ್ಡ್ ಎಂದು ಹೇಳಿ ಜನತೆಯನ್ನು ದಿಕ್ಕು ತಪ್ಪಿಸು ತ್ತಿದೆ ಎಂದು ಆರೋಪಿಸಿದ ಅವರು ಈ ಬಗ್ಗೆ ಮತದಾರರು ಜಾಗೃತ ರಾಗಬೇಕು ಇದೀಗ ಸರ್ಕಾರ ನೀಡುತ್ತಿರುವ ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಅರ್ಹ ಲಾನುಭವಿಗಳಿಗೆ ಸಾಲದ ಚೆಕ್ ಹಾಗೂ ಬೈಕ್ ವಿತರಿಸಲಾಯಿತು. ಎಂಎಡಿಬಿ ಅಧ್ಯಕ್ಷ ಕೆ.ಎಸ್ ಗುರು ಮೂರ್ತಿ, ರಾಜ್ಯ ಅರಣ್ಯ ಅಭಿ ವೃದ್ದಿ ನಿಗಮದ ಉಪಾಧ್ಯಕ್ಷ ರೇವಣಪ್ಪ ಕೊಳಗಿ, ಪುರಸಭಾಧ್ಯಕ್ಷೆ ರೇಖಾಬಾಯಿ, ತಾ.ಪಂ ಇಒ ಪರಮೇಶ್, ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಕಾರಿಗಳು ಉಪಸ್ಥಿತರಿದ್ದರು.