ಜಿಲ್ಲಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಉಪನ್ಯಾಸ, ಸಂವಾದ ಹಾಗೂ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮ

ಶಾಂತವೇರಿ: ಶಾಂತವೇರಿ ಗೋಪಾಲ ಗೌಡರು ಹಚ್ಚಿಟ್ಟ ಹಣತೆ. ಅವರ ಸಮ ಸಮಾಜದ ಬೆಳಕು ಚರಿತ್ರೆಯಲ್ಲಿ ಸದಾ ಬೆಳಗುತ್ತಿರುತ್ತದೆ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಇತಿಹಾಸ ವಿಭಾ ಗದ ಸಹ ಪ್ರಾಧ್ಯಾಪಕ ಡಾ. ಕೆ. ಎನ್‌. ಮಂಜುನಾಥ್‌ ಹೇಳಿದರು.

ಅವರು ಶುಕ್ರವಾರ ಸಂಜೆ ತೀರ್ಥಹಳ್ಳಿಯ ಆರಗದ ಶಾಂತ ವೇರಿ ಗೋಪಾಲ ಗೌಡ ಟ್ರಸ್‌್ಟ ವತಿಯಿಂದ ಶಾಂತವೇರಿಯ ಲ್ಲಿರುವ ಶಾಂತವೇರಿ ಗೋಪಾಲ ಗೌಡ ಸ್ಮಾರಕ ಸಭಾ ಭವನದಲ್ಲಿ ಆಯೋಜಿಸಿದ್ದ ಗೋಪಾಲಗೌಡರ ಬದುಕು ಬವಣೆ ಕುರಿತ ಉಪ ನ್ಯಾಸ, ಸಂವಾದ ಹಾಗೂ ಅಂಬೇ ಡ್ಕರ್‌ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿ ದರು.

ಶಾಂತವೇರಿ ಗೋಪಾಲ ಗೌಡರು ವರ್ತಮಾನದಲ್ಲಿ ಸದಾ ಉಸಿರಾಡುತ್ತಿರುತ್ತಾರೆ. ಪ್ರಸ್ತುತ ಎಲ್ಲಾ ರಾಜಕೀಯ ದಾಳಿಗಳ ನಡುವೆ ಇವರು ಶಾಂತವಾಗಿ, ಪರಿಶುದ್ಧವಾಗಿ ಕಾಣುತ್ತಾರೆ. ರಾಜಕಾರಣಕ್ಕೆ ಆತ್ಮ ಪರಿಶುದ್ಧತೆ ಯನ್ನು ತಂದುಕೊಟ್ಟವರು. ಸಮ ಸಮಾಜದ ಕನಸು ಕಂಡವರು. ಕಾಗೋಡು ಸತ್ಯಾಗ್ರಹಕ್ಕೆ ತನ್ನದೇ ಅದ ಸ್ಥಾನಮಾನ ನೀಡಿದವರು. ಶುದ್ಧ ಚಾರಿತ್ರ್ಯ ಮನುಷ್ಯರಾ ಗಿದ್ದರು ಎಂದರು.

ಅವರ ರಾಜಕೀಯ ಜೀವನ ಕೂಡ ಶುದ್ಧವಾಗಿತ್ತು. ನಾಲ್ಕು ಬಾರಿ ಚುನಾವಣೆಗೆ ನಿಂತಾಗಲೂ ಕೂಡ ಠೇವಣಿ ಹಣವನ್ನು ಅವರ ಅಭಿಮಾನಿಗಳೇ ನೀಡಿದ್ದರು. ಚುನಾವಣಾ ಪ್ರಚಾರ ಕೂಡ ಕಾಲು ನಡಿಗೆಯಲ್ಲೇ ಮಾಡುತ್ತಿ ದ್ದರು. ಅಕಸ್ಮಾತ್‌ ಅಭಿಮಾನಿಗಳು ಒಂದೆರಡು ವಾಹನ ಕೊಟ್ಟರೆ ಅದಕ್ಕೂ ಇಂಧನವನ್ನು ಅವರ ಅಭಿಮಾನಿಗಳೇ ತುಂಬಿಸುತ್ತಿ ದ್ದರು. ಒಮ್ಮೆ ಅವರು ಬದರೀ ನಾರಾಯಣ್‌ ವಿರುದ್ಧ ರ್ಸ್ಪಸಿ ದ್ದರು. ಅವರ ಪ್ರಚಾರದ ಕಾರೊಂದು ಪೆಟ್ರೋಲ್‌ ಇಲ್ಲದೆ ನಿಂತಿತ್ತು. ಆಕಸ್ಮಿಕವಾಗಿ ಅವರ ವಿರುದ್ಧವೇ ರ್ಸ್ಪಸಿದ್ದ ಬದರೀ ನಾರಾಯಣರು ನಿಂತಿದ್ದ ಕಾರು ನೋಡಿ ಕಾರಣ ತಿಳಿದು ಪೆಟ್ರೋ ಲ್‌ ತುಂಬಿಸಿಕಳಿಸಿದ್ದರು. ಒಬ್ಬ ಎದುರಾಳಿಯೂ ಕೂಡ ಮೆಚ್ಚು ವಂತಹ ಗುಣವನ್ನು ಗೋಪಾ ಗೌಡರು ಹೊಂದಿದ್ದರು ಎಂದರು.

ಅವರೆಂದೂ ಭ್ರಷ್ಟಾಚಾರ ಸಹಿಸುತ್ತಿರಲಿಲ್ಲ. ಬಡತನದಲ್ಲೇ ಬೆಳೆದರು. ಶಾಸಕರಾಗಿ ಆಯ್ಕೆಯಾ ದಾಗ ಬೆಂಗಲೂರಿನಲ್ಲಿ ಮನೆ ಇಲ್ಲದೆ ಶಾಸಕರ ಭವನದಲ್ಲಿಯೇ ಸಂಸಾರ ನಡೆಸಿದರು. ಇವರು ಸದನದಲ್ಲಿ ಮಾತನಾಡಿದ ಮಾತು ಗಳು ಇಂದಿಗೂ ಮಹತ್ವದ ಸ್ಥಾನ ಪಡೆದಿವೆ.ತೆರಿಗೆ, ಸಂಸ್ಕತಿ ಪ್ರಸಾರ, ಕೈಗಾರಿಕೆ ವಿಕೇಂದ್ರೀಕರಣ, ಭೂ ಸುಧಾರಣೆ, ವಿಧಾನ ಪರಿಷತ್‌, ಜೈಲು ಧರ್ಮ, ಭೂಮಿ, ಕರ್ನಾಟಕ ಏಕೀಕರಣ ಹೀಗೆ ಹಲವು ವಿಷಯ ಕುರಿತು ಇವರು ಚರ್ಚಿಸುತ್ತಿದ್ದರು ಎಂದರು.

ಮುಖ್ಯ ಅತಿಥಿಯಾಗಿ ಮಾತ ನಾಡಿದ ಗೋಪಾಲ ಗೌಡರ ಪುತ್ರ ರಾಮಮನೋಹರ ಶಾಂತವೇರಿ ತಂದೆಯ ಬಗ್ಗೆ ನಮಗೆ ಹೆಮ್ಮೆ ಅನಿಸುತ್ತಿದೆ. ಅವರ ಆದರ್ಶ ಗಳನ್ನುಪಾಲಿಸುವುದೇ ನಾವು ಅವರಿಗೆ ಕೊಡುವ ಗೌರವವಾ ಗಿದೆ. ಅವರ ನೆನಪಿನಲ್ಲಿ ಶಾಂತ ವೇರಿಯಲ್ಲಿ ಸ್ಮಾರಕ ಸಭಾಭವನ ಆಗಿರುವುದು ಅತ್ಯಂತ ಸಂತೋ ಷದ ವಿಷಯ. ಇದನ್ನು ಟ್ರಸ್‌್ಟ ನಿರ್ವಹಿಸುತ್ತಿದೆ. ಮತ್ತಷ್ಟು ಕಾರ್ಯಕ್ರಗಳನ್ನು ಈ ಟ್ರಸ್‌್ಟ ರೂಪಿಸಲಿ ಎಂದರು.

ಶಾಂತವೇರಿ ಗೋಪಾಲಗೌಡ ಟ್ರಸ್‌್ಟ ಅಧ್ಯಕ್ಷ ಡಾ. ಬಿ. ಗಣಪತಿ ಮಾತನಾಡಿ, ಶಾಂತನಗೌಡರಂ ತಹ ಸಜ್ಜನ ರಾಜಕಾರಣಿಗಳು ಇಂದು ಸಿಗಲು ಸಾಧ್ಯವೇ ಇಲ್ಲ. ಗೌಡರು ಟಾಲ್‌ಸ್ಟಾಯ್‌ರಿಂದ ಪ್ರಭಾವಿತರಾದವರು. ಲೋಹಿ ಯಾ ಮೂಲಕ ಸಮಾಜವಾದ ಅಪ್ಪಿಕೊಂಡವರು. ವಿದ್ಯಾರ್ಥಿ ದೆಸೆಯಲ್ಲಿಯೇ ಹೋರಾಡಿ ದವರು. ಸ್ವಾತಂತ್ರ್ಯ ಹೋರಾಟ ಗಾರರು. ಬಡತನದ ನಡುವೆಯೇ ಶಿಕ್ಷಣ ಕಲಿತವರು. ಜೀವನಕ್ಕಾಗಿ ಬೀಡಿ ಕಟ್ಟುವುದರಿಂದ ಹಿಡಿದು, ಹೊಲಿಗೆ, ಶಿಕ್ಷಕ, ಸಾಮಾಜಿಕ ಕಾರ್ಯಕ್ರಮಗಳು ಹೀಗೆ ಹಲವು ಕ್ಷೇತ್ರಗಲ್ಲಿ ಕೆಲಸ ಮಾಡುತ್ತಲೇ ವಿದ್ಯಾಭ್ಯಾಸ ಮಾಡಿದವರು. ಬೆಂಗಳೂರಿನ ಹೈಕೋರ್ಟ್‌ ವೃತ್ತಕ್ಕೆ ಇವರ ಹೆಸರಿಟ್ಟಿದ್ದಾರೆ ಎಂದರೆ ಇವರ ವ್ಯಕ್ತಿತ್ವದ ಪರಿಚಯವಾ ಗುತ್ತದೆ. ಇವರು ಕೇವಲ ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ ಎಂದರು.

ಗೋಪಾಲ ಗೌಡರ ಒಡನಾಡಿ ಕಡಿದಾಳ್‌ ದಯಾನಂದ ಮಾತ ನಾಡಿ, ಗೋಪಾಲ ಗೌಡರು ಸಮಾ ಜವಾದಿ ಸಮಾಜವನ್ನು ನಿರ್ಮಾ ಣ ಮಾಡುವಲ್ಲಿ ಯಶಸ್ವಿಯಾ ದರು. ಆ ಸಮಾಜವಾದಿ ಭೂಮಿಕೆ ಯಲ್ಲಿಯೇ ಕಾಗೋಡು ಸತ್ಯಾ ಗ್ರಹಕ್ಕೆ ಜಯ ಸಿಕ್ಕಿದ್ದು. ಈ ಚಳು ವಳಿಯ ನಂತರ ಇಡೀ ಕರ್ನಾಟಕ ದಲ್ಲಿಯೇ ಹೊಸ ರಾಜಕೀಯ ಬೆಳವಣಿಗೆ ಆರಂಭವಾಯಿತು. ಗೌಡರನ್ನು ರಾಮಮನೋಹರ ಲೋಹಿಯಾ ಅತ್ಯಂತ ಪ್ರೀತಿ ಯಿಂದ ಅಪ್ಪಿಕೊಂಡಿದ್ದರು. ನಿಷ್ಠೂ ರವಾದಿಯಾಗಿದ್ದರು. ಗೌಡರು ಎಲ್ಲರಿಗೂ ಇಷ್ಟವಾಗುತ್ತಿದ್ದರು ಎಂದರು.

ವೇದಿಕೆಯಲ್ಲಿ ಪ್ರಮುಖರಾದ ಸುರೇಶ್‌, ಎಸ್‌.ಎನ್‌. ಮಂಜು ನಾಥ್‌, ಹರೀಶ್‌, ರಾಮಸ್ವಾಮಿ, ನಾಗರಾಜ್‌, ಜಿ.ಎಸ್‌ ರಾಜೇಂದ್ರ, ರಾಮಪ್ಪ ಮೇಷ್ಟ್ರು, ಶಿವಣ್ಣ ಮಾಸ್ತರ್‌, ಹರೀಶ್‌, ಪ್ರೇಮಾ ಸೇರಿದಂತೆ ಹಲವರಿದ್ದರು.