ಶಿವಮೊಗ್ಗಸೊರಬ

ಹಿಂದಿನ ಕಾಲದಲ್ಲಿ ಜಾತಿ ತಾರತಮ್ಯದಿಂದ ದೇಶ ನಲುಗಿದಂತೆ ಇಂದು ದುಬಾರಿ ಶಿಕ್ಷಣ ವ್ಯವಸ್ಥೆಯಿಂದ ಬಡವರು ನಲುಗುವಂತಾಗಿದೆ : ಡಾ.ಎಚ್‌.ಇ.ಜ್ಞಾನೇಶ್‌

ಸೊರಬ: ಹಿಂದಿನ ಕಾಲದಲ್ಲಿ ಜಾತಿ ತಾರತಮ್ಯದಿಂದ ದೇಶ ನಲುಗಿದಂತೆ ಇಂದು ದುಬಾರಿ ಶಿಕ್ಷಣ ವ್ಯವಸ್ಥೆಯಿಂದ ಬಡವರು ನಲುಗುವಂತಾಗಿದೆ ಎಂದು ವೈದ್ಯ, ರೋಟರಿ ಕ್ಲಬ್‌ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್‌.ಇ.ಜ್ಞಾನೇಶ್‌ ಹೇಳಿದರು.
ತಾಲೂಕಿನ ಶಿಗ್ಗಾ ಗ್ರಾಮದಲ್ಲಿ ರೋಟರಿ ಕ್ಲಬ್‌ ವತಿಯಿಂದ ಸೋ ಮವಾರ ಹಮ್ಮಿಕೊಂಡ ಉಚಿತ ಕ್ರೀಡಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದುಬಾರಿ ಶಿಕ್ಷಣದಿಂದ ಸಾಮಾನ್ಯ ಜನರು ಉತ್ತಮ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಸರಕಾರಿ ಶಾಲೆಗಳನ್ನು ಸರ್ವ ತೋಮುಖವಾಗಿ ಅಭಿವೃದ್ಧಿಗೊಳಿ ಸಲು ಸರಕಾರ ಹಾಗೂ ಸಾರ್ವ ಜನಿಕರು ಮುಂದಾಗಬೇಕಿದೆ. ಶಿಕ್ಷಣ ವ್ಯಾಪರಿಕರಣವಾಗಬಾ ರದು. ಬಡವರು ಉತ್ತಮ ಶಾಲೆ ಗಳಲ್ಲಿ ಶಿಕ್ಷಣ ಪಡೆಯುವಂತಾ ಗಬೇಕು ಎಂದ ಅವರು ಶಿಗ್ಗಾ ಶಾಲೆ ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲ. ಶಿಗ್ಗ ದೊಡ್ಡ ಗ್ರಾಮವಾಗಿದ್ದು ಇಲ್ಲಿನ ಜನರು ಅಭಿವೃದ್ಧಿ ಬಗ್ಗೆ ಒಲವು ಹೊಂದಿದವರು ಎಂದರು.
ರೋಟರಿ ಕ್ಲಬ್‌ ಅಧ್ಯಕ್ಷ ಮಂಜು ಹೆಚ್‌.ತವನಂದಿ, ಮಾತ ನಾಡಿ ಉತ್ತಮ ಶಾಲಾ ನಿರ್ಮಾ ಣಕ್ಕೆ ಶಿಕ್ಷಕರು, ಅಭಿವೃದ್ಧಿ ಸಮಿತಿ, ಗ್ರಾಮ ಹಾಗೂ ಸಂಘ-ಸಂಸ್ಥೆಗಳ ಪಾತ್ರ ಹಿರಿದು ಎಂದರು.
ಮುಖ್ಯ ಶಿಕ್ಷಕಿ ಶಕುಂತಲಾ, ಎಸ್‌ ಡಿಎಂಸಿ ಅಧ್ಯಕ್ಷ ವೀರೇಶ್‌ ಮಾತನಾಡಿದರು.
ಎಸ್‌ ಡಿಎಂಸಿ ಉಪಾಧ್ಯಕ್ಷೆ ಸಂಗೀತಾ, ನಾಗರತ್ನ, ತಮ್ಮಣಪ್ಪ, ಸಂತೋಷ್‌, ನಿತಿನ್‌, ಜೋಸೆ್‌‍, ಶಿಕ್ಷಕರಾದ ಅಂಜನಪ್ಪ, ಪರಶುರಾಮ್‌ ಮತ್ತಿತರರಿದ್ದರು.
ಶಾಲಾ ಮಕ್ಕಳ ಪ್ರಾರ್ಥಿಸಿ, ಶಿಕ್ಷಕರಾದ ಮೇರಿ ಸ್ವಾಗತಿಸಿ, ಪರಮೇಶ್ವರಪ್ಪ ನಿರೂಪಿಸಿದರು.