ಜಿಲ್ಲಾ ಸುದ್ದಿತಾಜಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಸ್ವದೇಶಿ ಸಂಸ್ಕೃತಿಯನ್ನು ನಿರಂತರವಾಗಿ ಕಾಪಾಡಿಕೊಂಡು ಹೋಗುವುದು ಭಾರತೀಯರ ಕರ್ತವ್ಯ: ಡಾ.ಶಿವಮೂರ್ತಿ ಶಿವಾಚಾರ್ಯ

ಶಿವಮೊಗ್ಗ,ಡಿ.07: ಸ್ವದೇಶಿ ಸಂಸ್ಕೃತಿಯನ್ನು ನಿರಂತರವಾಗಿ ಕಾಪಾಡಿಕೊಂಡು ಹೋಗುವುದು ಭಾರತೀಯರ ಕರ್ತವ್ಯ ಎಂದು ಸಿರಿಗಿರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ತಿಳಿಸಿದರು.

ಅವರು ನಗರದ ಫ್ರೀಡಂ ಪಾರ್ಕ್‌ನಲ್ಲಿ 5 ದಿನಗಳ ಕಾಲ ನಡೆಯುವ ಸ್ವದೇಶಿ ಮೇಳ ಉದ್ಘಾಟಿಸಿ ಮಾತನಾಡಿ, ಕೆಲವರಿಗೆ ನಮ್ಮ ದೇಶದ ಇತಿಹಾಸವೇ ತಿಳಿದಿಲ್ಲ.ರಾಣೇಬೆನ್ನೂರಿನ ಕೆಲ ಶಾಲಾ ಮಕ್ಕಳು ಚಿತ್ರದುರ್ಗದ ಕೋಟೆ ನೋಡಲು ಬಂದಾಗ ನಮ್ಮ ಮಠಕ್ಕೆ ಭೇಟಿ ನೀಡಿದ್ದರು. ಮದಕರಿ ನಾಯಕನಿಗೂ ಓಬವ್ವಳಿಗೂ ಏನು ಸಂಬಂಧ ಎಂದು ಶಾಲಾ ಮಕ್ಕಳಿಗೆ ಕೇಳಿದ್ದೆ. ಆಗ ಒಂದು ಮಗು  ಗಂಡಹೆಂಡತಿ ಸಂಬಂಧ ಎಂದಿತ್ತು. ಇದು ಮಕ್ಕಳ ತಪ್ಪಲ್ಲ ಇದು ನಮ್ಮ ಶಿಕ್ಷಣದ ವೈಫಲ್ಯವೆಂದು ದೂರಿದರು.

ನಮ್ಮ ವಸ್ತುವನ್ನ ಉತ್ಪಾದಿಸುವ ವಸ್ತುವನ್ನ ಭಾರತೀಯರೇ ಖರೀದಿಸುವಂತಾಗಬೇಕು. ಸ್ವದೇಶಿ ಕೇವಲ ವಸ್ತುವಲ್ಲ. ನಮ್ಮ ಧರ್ಮವನ್ನ ಪ್ರತಿನಿಧಿಸುವಂತಾಗಬೇಕು. ಸ್ವದೇಶಿ ಸಂಸ್ಕೃತಿಯನ್ನ ನಿರಂತರವಾಗಿ ಕಾಪಾಡಿಕೊಂಡು ಹೋಗುವುದು ಭಾರತೀಯನ ಕರ್ತವ್ಯ ಎಂದರು.

ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮಾತನಾಡಿ, ಸ್ವದೇಶದ ವಸ್ತುಗಳ ಉತ್ತೇಚಿಸುತ್ತಿರುವ ಉದ್ದೇಶ ಸ್ವದೇಶ್‌ ಮೇಳ ಹಿಂದಿದೆ ಸ್ವದೇಶಿ ಆಂದೋಲನ ಸ್ವಾವಲಂಭನೆಯ ಚಳುವಳಿಯಾಗಿದೆ. ಸ್ವದೇಶಿಯನ್ನ ಗಾಂಧಿಜಿ ಆತ್ಮ ಸ್ವರಾಜ್‌ ಎಂದು ಬಣ್ಣಿಸಿದ್ದರು. ಬಟ್ಟೆ ಉತ್ಪಾದಿಸಿ ಸ್ವಾಲಂಭನೆಯ ಗ್ರಾಮ ಎಂದು ಗುರುತಿಸಬೇಕೆಂದು ಎಂದರು.

ಸ್ವದೇಶಿ ಮೇಳದ ಸಂಚಾಲಕ ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ಸ್ವದೇಶಿ ಚಿಂತನೆ ಬ್ರಿಟಿಷರು ಬಂಗಾಳದ ವಿಭಜನೆಗೆ ಕೈಹಾಕಿದಾಗ ಸ್ವಾತಂತ್ರ್ಯ ಹೋರಾಟಗಾರರು ಇಂಗ್ಲೆಂಡ್‌ನ ಉತ್ಪನ್ನಗಳನ್ನು ಬಹಿಷ್ಕರಿಸಿ ವಂಗ ಬಂಗ ಚಳುವಳಿಯ ಮೂಲಕ ತಕ್ಕ ತಿರುಗೇಟು ನೀಡಿದರು.

ಸ್ವದೇಶಿ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸಿದರು. ಇದರಿಂದ ಬ್ರಿಟಿಷ್‌ ಸರ್ಕಾರ 1911ರಲ್ಲಿ  ಬಂಗಾಳ ಹೊಡೆಯುವ ಯತ್ನವನ್ನು ಕೈಬಿಟ್ಟರು. ಬಳಿಕ 1918ರಿಂದ 1947ರವರೆಗೆ ಮಹಾತ್ಮ ಗಾಂಧೀಜಿಯವರು ಆಹಿಂಸಾ ಸತ್ಯಾಗ್ರಹ ಮತ್ತು ಸ್ವದೇಶಿ ಚಳುವಳಿಯನ್ನು ವ್ಯಾಪಕವಾಗಿ ಪ್ರಾರಂಭಿಸಿದರು. ಎಲ್ಲಾ ವರ್ಗದವರು ಈ ಸ್ವದೇಶಿ ಚಳುವಳಿಯನ್ನು ಬೆಂಬಳಿಸಿದ್ದರಿಂದ ಅಂದಿನ ಆಡಳಿತಕ್ಕೆ ದೊಡ್ಡ ಮಟ್ಟದ ಹೊಡೆತ ಬಿದ್ದಿತ್ತು. ಮತ್ತು ಇದು ಭಾರತೀಯ ಸಂಸ್ಕೃತಿಗೆ ಮತ್ತು ಭಾರತೀಯರ ಒಗ್ಗಟ್ಟಿಗೆ ಕಾರಣವಾಯಿತು ಎಂದರು.

ಶಾಸಕ ಡಿ.ಎಸ್‌. ಅರುಣ್‌ ಮಾತನಾಡಿ ಮೋದಿ ಪ್ರಧಾನಿಯಾದ ಮೇಲೆ ದೇಶದ ಜನರಿಗೆ ಸ್ವಾವಲಂಬಿ ಭಾರತ ಎಂದರೇ ಏನು ಅನ್ನುವುದು ಅರಿವಾಯಿತು. ಈ ಮೇಳದಲ್ಲಿ ನೋಡಲ್‌್ಸ, ಫೀಜಾ, ಬರ್ಗರ್‌ ಇಲ್ಲ, ಸ್ವದೇಶಿ ಸ್ವಾದಗಳಿವೆ. 270ಕ್ಕೂ ಹೆಚ್ಚು ಸ್ಟಾಲ್‌ಗಳಿವೆ. ಮೇಕಿಂಗ್‌ ಇಂಡಿಯಾ, ಸ್ಕಿಲ್‌ ಇಂಡಿಲಾ ಮತ್ತು ಸರ್ಕಾರದ ಯೋಜನೆಗಳ ಅರಿವನ್ನು ಮೂಡಿಸಲಾಗುತ್ತಿದೆ ಸ್ವದೇಶಿ ತಳಿಗಳಿಗೆ ಗೋಪೂಜೆ ನಡೆಯುತ್ತಿದೆ. ಸುವರ್ಣ ಮತ್ತು ತಂಡದವರಿಂದ 60*60 ಬೃಹತ್‌ ಅತ್ಯಾಕರ್ಷಕ ರಂಗೋಲಿ ಹಾಕಲಾಗಿದೆ. ಸ್ವದೇಶಿ ಚಿಂತನೆಗೆ ಒತ್ತು ನೀಡಲಾಗಿದ್ದು, ಪ್ರಾರಂಭಿಕ ದಿನಂದಂದೆ 10 ಸಾವಿರಕ್ಕೂ ಹೆಚ್ಚು ನಾಗರಿಕರು ಭಾಗವಹಿಸಿದ್ದು ಸಂತೋಷ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ರಾಘವೇಂದ್ರ, ಸ್ವದೇಶಿ ಮೇಳದ ಆಯೋಜಕರಾದ ಡಾ.ಧನಂಜಯ ಸರ್ಜಿ, ಹರ್ಷ ಕಾಮತ್‌, ದತ್ತಾತ್ರಿ ಉಪಸ್ಥಿತರಿದ್ದರು.