ಜಿಲ್ಲಾ ಸುದ್ದಿ

ಬಿಜೆಪಿ ಅಕಾರಕ್ಕೆ ಬರುವುದು ನಿಶ್ಚಿತ ; ಬಿ.ಎಸ್‌ ಯಡಿಯೂರಪ್ಪ

ಶಿವಮೊಗ್ಗ: 130ರಿಂದ 140ರವರೆಗೆ ಸೀಟು ಪಡೆದು ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಾಜಿ ಸಿಎಂ ಬಿ. ಎಸ್‌ ಯಡಿಯೂರಪ್ಪ ಹೇಳಿದರು.

ಅವರು  ಶಿವಮೊಗ್ಗದ ತಮ್ಮ ನಿವಾಸದಲ್ಲಿ ವೀರಶೈವ ಮುಖಂಡರ ಸಭೆಗೂಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, 100ಕ್ಕೆ 90 ಭಾಗ ವೀರಶೈವರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಹಾಗೆಯೇ 100ಕ್ಕೆ 100ರಷ್ಟು ಶಿವಮೊಗ್ಗದಲ್ಲಿ ಬಿಜೆಪಿ ಗೆಲ್ಲುತ್ತದೆ. ಚುನಾವಣಾ ಪ್ರಚಾರ ಈಗಾಗಲೇ ಆರಂಭವಾಗಿದೆ. ಇಡೀ ರಾಜ್ಯ ದಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣವಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅಮಿತ್‌ ಶಾ ಸೇರಿದಂತೆ ಕೇಂದ್ರದ ಮತ್ತು ವಿವಿಧ ರಾಜ್ಯಗಳ ಬಿಜೆಪಿ ಮುಖಂಡರು ರಾಜ್ಯಕ್ಕೆ ಚುನಾ ವಣಾ ಪ್ರಚಾರಕ್ಕಾಗಿ ಬರಲಿದ್ದಾರೆ. ನಾನು ಕೂಡ ಈಗಾಗಲೇ ಪ್ರಚಾರ ಆರಂಭಿಸಿದ್ದೇನೆ. ಕೊನೆಯ ಎರಡು ದಿನಗಳು ಇರುವಾಗ ಶಿವಮೊಗ್ಗದಲ್ಲಿ ಪ್ರಚಾರ ಕೈಗೊಳ್ಳುವೆ ಎಂದರು.

ವೀರಶೈವರ ಬಗ್ಗೆ ಸಿದ್ದರಾ ಮಯ್ಯ ಮತ್ತು ರಾಹುಲ್‌ ಗಾಂಯವರು ತುಂಬಾ ಹಗುರವಾಗಿ ಮಾತನಾಡಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ವೀರಶೈವರ ಕುರಿತು ಹೇಳಿಕೆಗಳನ್ನು ನೀಡಬಾರದು. ಹಾಗೆಯೇ ರಾಹುಲ್‌ ಗಾಂಧಿಯವರು ಬಿಜೆಪಿಯವರು ಬಸವಣ್ಣನವರ ತತ್ವವನ್ನು ಅನುಸರಿಸುತ್ತಾರೆಯೇ ಎಂದು ಹಗುರವಾಗಿ ಮಾತನಾಡಿದ್ದಾರೆ. ವೀರಶೈವರ ಬಗ್ಗೆ ರಾಹುಲ್‌ ಗಾಂಧಿಯವರಿಗೆ ಏನು ಗೊತ್ತಿದೆ ಎಂದು ಪ್ರಶ್ನೆ ಮಾಡಿದರು.

ಬಿ.ಎಲ್‌. ಸಂತೋಷ್‌ ಬಗ್ಗೆಯೂ ಕೂಡ ಆರೋಪಗಳು ಕೇಳಿಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದೆ ಅವರು, ಬಿ.ಎಲ್‌. ಸಂತೋಷ್‌ ನಮ್ಮ ನಾಯಕರು. ಅವರ ಬಗ್ಗೆ ಹಗುರವಾಗಿ ಮಾತ ನಾಡಿದರೆ ಸಹಿಸಲು ಸಾಧ್ಯವಿಲ್ಲ. ಅವರನ್ನು ಟೀಕೆ ಮಾಡುವ ಯೋಗ್ಯತೆ ಕೂಡ ಯಾರಿಗೂ ಇಲ್ಲ. ಸಂಘಟನೆಗಾಗಿ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ರಾಹುಲ್‌ ಗಾಂಧಿಯವರು ಶಿವ ಮೊಗ್ಗಕ್ಕೆ ಬಂದರೆ ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರ ಮತ್ತಷ್ಟು ಹೆಚ್ಚಾಗುತ್ತದೆ. ಏಕೆಂದರೆ ಅವರು  ಹೋದ ಕಡೆಯಲ್ಲೆಲ್ಲಾ ಕಾಂಗ್ರೆಸ್‌ ಸೋತಿದೆ. ಅವರು ಶಿವಮೊಗ್ಗಕ್ಕೂ ಬರಲಿ ಎಂಬುದು ನಮ್ಮ ಆಸೆ ಎಂದು ವ್ಯಂಗ್ಯವಾಡಿ ದರು.

ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಪ್ರಚಾರ ಜೋರಾಗಿ ನಡೆಯುತ್ತಿದೆ ಎಂದು ಯಡಿಯೂರಪ್ಪ ನವರೇ ಹೇಳಿದ್ದಾರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೇನಿಲ್ಲ ಕಾಂಗ್ರೆಸ್‌ನ ವರಿಗೆ ಶಿವಮೊಗ್ಗದಲ್ಲಿ ಕಾರ್ಯಕತರ್ರೇ ಇಲ್ಲ. ಈಗ ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಿರುವ ವವರು ಅಭ್ಯರ್ಥಿಯ ನೆಂಟರೇ ಆಗಿದ್ದಾರೆ. ಬೇರೆ ಬೇರೆ ಕಡೆ ಯಿಂದ ಅವರು ಸಂಬಂಕರನ್ನೆಲ್ಲ ಕರೆಸಿ ಕರಪತ್ರ ಹಂಚುತ್ತಿದ್ದಾರೆ ಅಷ್ಟೆ ಎಂದರು.

ನಾಳೆಯಿಂದ ಮೇ 7 ರವರೆಗೆ ನಾನು ರಾಜ್ಯ ಪ್ರವಾಸ ಮಾಡುತ್ತೇನೆ. ನಡುನಡುವೆ ಶಿವಮೊಗ್ಗ ದಲ್ಲೂ ಇರುತ್ತೇನೆ. ರಾಜ್ಯಕ್ಕೆ ಪ್ರಧಾನಿ ನರೆಂದ್ರ ಮೋದಿ, ಅಮಿತ್‌ ಶಾ, ನಡ್ಡಾ ಸೇರಿದಂತೆ ಎಲ್ಲರೂ ಬರುತ್ತಾರೆ. ಕಳೆದ ಬಾರಿ 46ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇವೆ. ಈ ಬಾರಿ ಬಿಜೆಪಿ ಅಭ್ಯರ್ಥಿ 60 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದರು.

ರಾಹುಲ್‌ ಗಾಂಧಿಯವರು ಲಿಂಗಾಯತ ಸಮಾಜ ಕುರಿತಂತೆ ಹೇಳಿಕೆ ನೀಡಿರುವುದನ್ನು ಖಂಡಿಸಿದ ಈಶ್ವರಪ್ಪ, ಅವರಿಗೆ ಲಿಂಗಾಯತ ಸಮಾಜದ ಬಗ್ಗೆ ಅರಿವಿಲ್ಲ. ಆದರೆ ಅವರೇ ಹೇಳುವಂತೆ ಲಿಂಗಾಯತ ಸಮುದಾಯ ಬಿಜೆಪಿ ಜೊತೆಗಿದೆ ಎನ್ನುವುದು ಗೊತ್ತಾಗುತ್ತದೆ. ನಾನು ಹೇಳುವುದಿಲ್ಲ. ನಾನು ಹೇಳಿದ್ದಲ್ಲ. ಕೆಲವರು ಹೇಳುತ್ತಾರೆ, ರಾಹುಲ್‌ ಕಾಂಗ್ರೆಸ್‌ಗೆ ರಾಹು ಇದ್ದ ಹಾಗೆ ಎಂದು.  ಎಲ್ಲಾ ಏಳು ಸ್ಥಾನಗಳನ್ನು ಜಿಲ್ಲೆಯಲ್ಲಿ ನಾವು ಗೆಲ್ಲುತ್ತೇವೆ ಎಂದರು.