ಜಿಲ್ಲಾ ಸುದ್ದಿ

ವೃತ್ತಿಯ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿಘಿ: ಅರವಿಂದ್‌ ಶರ್ಮಾ ಕರೆ

ಶಿವಮೊಗ್ಗ; ಪ್ರತಿನಿತ್ಯ ನಮ್ಮ ವೃತ್ತಿಯ ಜತೆಯಲ್ಲಿ ಸಮಾಜ ಮುಖಿ ಕಾರ್ಯಗಳಲ್ಲಿ ನಿರಂತರ ವಾಗಿ ತೊಡಗಿಸಿಕೊಳ್ಳಲು ಮುಂ ದಾಗಬೇಕು. ಪ್ರತಿಯೊಬ್ಬರು ಸೇವಾ ಮನೋಭಾವ ಬೆಳೆಸಿಕೊ ಳ್ಳಬೇಕು ಎಂದು ಪಂಜಾಬ್‌ ನ್ಯಾಷ ನಲ್‌ ಬ್ಯಾಂಕ್‌ ಮ್ಯಾನೇಜರ್‌ ಅರವಿಂದ ಶರ್ಮಾ ಹೇಳಿದರು.

ನಗರದ ಸವಾರ್‌ ಲೈನ್‌ ರಸ್ತೆಯ  ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನಲ್ಲಿ ಬ್ಯಾಂಕ್‌ನ 129ನೇ ಸಂಸ್ಥಾಪಕರ ದಿನಾಚರಣೆ ಪ್ರಯು ಕ್ತ ರೆಡ್‌ಕ್ರಾಸ್‌ ಬ್ಲಡ್‌ ಬ್ಯಾಂಕ್‌ ಸಹಕಾರದೊಂದಿಗೆ ಬ್ಯಾಂಕ್‌ ನೌಕರರು ಮತ್ತು ಗ್ರಾಹಕರು ರಕ್ತದಾನ ಮಾಡಿದರು.

ಬ್ಯಾಂಕ್‌ ವತಿಯಿಂದ ನಿರಂ ತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿ ಕೊಂಡು ಬಂದಿದ್ದು, ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ರಕ್ತದಾನ ದಂತಹ ಸೇವಾ ಕಾರ್ಯ ಆಯೋ ಜಿಸಲಾಗಿದೆ. ಬ್ಯಾಂಕ್‌ ಸಿಬ್ಬಂದಿ ಸೇರಿದಂತೆ ಅನೇಕರು ರಕ್ತದಾನ ಮಾಡುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ ಮಾಜಿ ಅಧ್ಯಕ್ಷ ಜಿ.ವಿಜಯ್‌ ಕುಮಾರ್‌ ಮಾತನಾಡಿ, ರಕ್ತದಾನ ಅತ್ಯಂತ ಶ್ರೇಷ್ಠದಾನ. ಆರೋಗ್ಯ ವಂತ ಯುವಜನರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡ ಬಹುದು. ಅಮೂಲ್ಯ ಜೀವ ಉಳಿಸುವ ಮಹಾತ್ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು.

110 ಬಾರಿ ರಕ್ತದಾನ ಮಾಡಿ ರುವ ಧರಣೇಂದ್ರ ದಿನಕರ್‌ ಮಾತ ನಾಡಿದರು. ಡಾ. ದಿನಕರ್‌ ರಕ್ತದಾ ನದಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.

ಅಜಯ್‌ಕುಮಾರ್‌ ಸಿಂಗ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.