ಶಿವಮೊಗ್ಗಸಾಗರ

ನನಗೆ ಬದುಕಿನಲ್ಲಿ ಏನೂ ಆಸೆ ಇಲ್ಲ ; ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ: ಬಿ.ಎಸ್‌.ಯಡಿಯೂರಪ್ಪ

ಸಾಗರ : ನನಗೆ ಬದುಕಿನಲ್ಲಿ ಏನೂ ಆಸೆ ಇಲ್ಲ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಽ ಕಾರಕ್ಕೆ ತರಬೇಕು. ಕಾಂಗ್ರೇಸ್‌ ಪಕ್ಷವನ್ನು ರಾಜ್ಯದಲ್ಲಿ ಸಂಪೂರ್ಣ ನೆಲಸಮ ಮಾಡಬೇಕು ಎನ್ನು ವುದು ನನ್ನ ಬಯಕೆಯಾಗಿದೆ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.
ಇಲ್ಲಿನ ನೆಹರೂ ಮೈದಾನ ದಲ್ಲಿ ಶುಕ್ರವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ದಲ್ಲಿ ನರೇಂದ್ರ ಮೋದಿಯವರು, ರಾಜ್ಯದಲ್ಲಿ ಬಸವರಾಜ ಬೊಮ್ಮಾ ಯಿಯವರು ಯಾರೂ ಬೊಟ್ಟು ಮಾಡಿ ತೋರಿಸದಂತೆ ಆಡಳಿತ ನಡೆಸುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಽ ಕಾರಕ್ಕೆ ತರ ಬೇಕು ಎಂದು ಎರಡೂವರೆ ತಿಂಗ ಳಿನಿಂದ ಪ್ರವಾಸ ಮಾಡುತ್ತಿದ್ದೇನೆ. ವಿಜಯ ಸಂಕಲ್ಪ ಯಾತ್ರೆ ನಡೆದ ಎಲ್ಲ ಕಡೆಯೂ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಹಣ, ಹೆಂಡ, ತೋಳ್ಬಲದಿಂದ, ಜಾತಿ ವಿಷಬೀಜ ಬಿತ್ತಿ ಅಽ ಕಾರ ಹಿಡಿಯುತ್ತಿದ್ದ ಕಾಂಗ್ರೇಸ್‌ ಕನಸು ನನಸಾಗುವುದಿಲ್ಲ. ಕಾಂಗ್ರೆಸ್‌ ಮುಕ್ತ ಭಾರತವಾಗುವ ದಿನ ದೂರ ಇಲ್ಲ. ಈ ಬಾರಿ ರಾಜ್ಯದಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನದಲ್ಲಿ ಜಯ ಗಳಿಸಿ ಮತ್ತೊಮ್ಮೆ ಅಽ ಕಾರಕ್ಕೇ ರಲಿದೆ. ಸಾಗರ ಕ್ಷೇತ್ರದಲ್ಲಿ ಶಾಸಕ ಹರತಾಳು ಹಾಲಪ್ಪ ಸುಮಾರು 2051ಕೋಟಿ ರೂ. ಅನುದಾನ ತಂದು ಸಮಗ್ರ ಅಭಿವೃದ್ದಿ ಮಾಡಿ ದ್ದಾರೆ. ಮುಂದಿನ ಚುನಾವಣೆ ಯಲ್ಲಿ ಬಿಜೆಪಿಯನ್ನು ಬೆಂಬಲಿ ಸುವ ಮೂಲಕ ಅಭಿವೃದ್ದಿಪರ ಆಡಳಿತಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ದೇಶದ ಪ್ರಧಾನಿ ಬಗ್ಗೆ ಹಗುರ ವಾಗಿ ಮಾತನಾಡುವ ಕಾಂಗ್ರೇಸ್‌ ಪಕ್ಷಕ್ಕೆ ಮತದಾರರು ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸ ಬೇಕು. ಕಾಂಗ್ರೇಸ್‌ ಪಕ್ಷದವರು ಶೇ. 40 ಕಮೀಷನ್‌ ಎಂದು ಭಾಷಣ ಹೊಡೆಯುತ್ತಾರೆ. ಕಮೀ ಷನ್‌ ಪಡೆದಿದ್ದಕ್ಕೆ ಒಂದು ದಾಖಲೆ ಒದಗಿಸಲು ಅವರ ಕೈನಿಂದ ಸಾಧ್ಯವಾಗಿಲ್ಲ. ಅರ್ಕಾವತಿಯಲ್ಲಿ 800 ಎಕರೆ ಡಿನೋಟಿೈ ಮಾಡಿ 8000 ಕೋಟಿ ರೂ. ಲೂಟಿ ಮಾಡಿದ್ದು ಕಾಂಗ್ರೇಸ್‌ ಪಕ್ಷ ಎಂದು ವರದಿಯಲ್ಲಿ ಸಾಬೀತಾಗಿದೆ. ಡಿ.ಕೆ.ಶಿವಕುಮಾರ್‌ ತಿಹಾರ್‌ ಜೈಲಿನಲ್ಲಿದ್ದು ಬಂದದ್ದು ಜನರಿಗೆ ಗೊತ್ತಿದೆ. ಕಾಂಗ್ರೇಸ್‌ ಪಕ್ಷವನ್ನು ರಾಜ್ಯದ ಜನರು ನಂಬುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಸಹ ಬಿಜೆಪಿ ಅಽ ಕಾರಕ್ಕೆ ಬರುವುದನ್ನು ತಪ್ಪಿಸಲು ಕಾಂಗ್ರೇಸ್‌ನಿಂದ ಸಾಧ್ಯ ವಿಲ್ಲ ಎಂದು ಹೇಳಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕಳೆದ ಆರೇಳು ದಶಕಗಳಿಂದ ಶರಾವತಿ ಮುಳು ಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡಲು ವಿಲವಾಗಿರುವ ಕಾಂಗ್ರೇಸ್‌ ಪಕ್ಷ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡು ತ್ತಿದೆ. ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡಿಸುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ. ಲೋಕಸಭೆಯಲ್ಲಿ ಕನಿಷ್ಟ ವಿರೋಧ ಪಕ್ಷ ಪಡೆಯುವ ಸ್ಥಾನವನ್ನು ಹೊಂದಿರದ ಕಾಂಗ್ರೇಸ್‌ ಪಕ್ಷ ಮನೆಮನೆಗೆ ತೆರಳಿ ಗ್ಯಾರೆಂಟಿ ಕಾರ್ಡ್‌ ಕೊಡುತ್ತಿದೆ. ಕಾಂಗ್ರೇಸ್‌ ಪಕ್ಷದ ವಾರೆಂಟಿ ಮುಗಿದಿದೆ. ಇನ್ನು ಅವರು ಕೊಡುವ ಗ್ಯಾರೆಂಟಿ ಕಾರ್ಡ್‌ಗೆ ಯಾವ ಬೆಲೆ ಇದೆ. ವಾರೆಂಟಿ ಎಕ್‌್ಸಪೈರ್‌ ಆಗಿರುವ ಕಾಂಗ್ರೇಸ್‌ ಪಕ್ಷಕ್ಕೆ ಮತದಾರರು ಮನೆಗೆ ಕಳಿಸುತ್ತಾರೆ ಎಂದು ಹೇಳಿದರು.

ಶಾಸಕ ಹಾಲಪ್ಪ ಹರತಾಳು ಮಾತನಾಡಿ, ಐದು ವರ್ಷದ ಹಿಂದೆ ನಾವು ಒಂದಷ್ಟು ಭರವಸೆ ಯೊಂದಿಗೆ ಚುನಾವಣೆ ಕಣಕ್ಕೆ ಇಳಿದಿದ್ದೇವು. ಕೊಟ್ಟ ಭರವಸೆ ಯಂತೆ ಗಣಪತಿ ಕೆರೆಯನ್ನು ಅಭಿವೃದ್ದಿ ಮಾಡಿದ್ದೇವೆ. ಸಂಸದರ ಸಹಕಾರದಿಂದ ಬಿ.ಎಚ್‌.ರಸ್ತೆ ಅಗಲೀಕರಣ ಕಾಮಗಾರಿ ನಡೆ ಯುತ್ತಿದೆ. ಸೊರಬ ರಸ್ತೆ ಅಗಲೀಕ ರಣಕ್ಕೆ ಚಾಲನೆ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ 888 ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. 423 ಕೋಟಿ ರೂ. ವೆಚ್ಚದಲ್ಲಿ ತುಮರಿ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗ ಳಲ್ಲಿ ಸುಂದರ ಸಾಗರ, ಆರೋಗ್ಯ ಸಾಗರ, ವಿದ್ಯಾಸಾಗರ ನಿರ್ಮಾ ಣದ ಉದ್ದೇಶ ಹೊಂದಲಾಗಿದೆ. ಇತಿಹಾಸ ಪ್ರಸಿದ್ದವಾದ ಮಹಾ ಗಣಪತಿ ದೇವಸ್ಥಾನವನ್ನು 25 ಕೋಟಿ ರೂ. ವೆಚ್ಚದಲ್ಲಿ ಅಭಿ ವೃದ್ದಿಪಡಿಸುವ ಸಂಕಲ್ಪ ಕೈಗೊಳ್ಳಲಾಗಿದೆ ಎಂದರು.

ಸಚಿವ ಕೋಟಾ ಶ್ರೀನಿವಾಸ್‌ ಪೂಜಾರಿ ಮಾತನಾಡಿದರು. ಎಂಎಡಿಬಿ ಅಧ್ಯಕ್ಷ ಕೆ.ಎಸ್‌. ಗುರುಮೂರ್ತಿ, ಮಡಿವಾಳ ಅಭಿವೃದ್ದಿ ನಿಗಮದ ಅಧ್ಯಕ್ಷ ಡಾ. ರಾಜು ತಲ್ಲೂರು, ಮಧುರಾ ಶಿವಾನಂದ್‌, ವಿ.ಮಹೇಶ್‌, ಅರ ವಿಂದ ರಾಯ್ಕರ್‌, ಎಂ. ಹರನಾಥ ರಾವ್‌, ಚೇತನರಾಜ್‌ ಕಣ್ಣೂರು, ಯು.ಎಚ್‌.ರಾಮಪ್ಪ, ಕೆ.ಎನ್‌. ಶ್ರೀಧರ್‌, ನಾಗರಾಜ ಪೈ, ಪ್ರಸನ್ನ ಕೆರೆಕೈ, ಎಸ್‌.ದತ್ತಾತ್ರಿ, ಬಿ.ಸ್ವಾಮಿ ರಾವ್‌, ಕುಪೇಂದ್ರ ರೆಡ್ಡಿ ಇನ್ನಿತ ರರು ಹಾಜರಿದ್ದರು. ದಿವ್ಯಾ ಶ್ಯಾನ ಭಾಗ್‌ ಪ್ರಾರ್ಥಿಸಿದರು. ಕೆ.ಆರ್‌. ಗಣೇಶಪ್ರಸಾದ್‌ ಸ್ವಾಗತಿ ಸಿದರು. ಟಿ.ಡಿ.ಮೇಘ ರಾಜ್‌ ಪ್ರಾಸ್ತಾವಿಕ ಮಾತನಾಡಿದರು. ಲೋಕನಾಥ್‌ ಬಿಳಿಸಿರಿ ವಂದಿಸಿದರು. ಸಂತೊ ೕಷ್‌ ಶೇಟ್‌ ಮತ್ತು ಹು.ಭಾ. ಅಶೋಕ್‌ ನಿರೂಪಿಸಿದರು.