ಜಿಲ್ಲಾ ಸುದ್ದಿ

ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಹಾಲಪ್ಪ ಮತ್ತು ಕಾಂಗ್ರೇಸ್‌ನಿಂದ ಸ್ಪರ್ಧೆ ಮಾಡಿರುವ ಗೋಪಾಲಕೃಷ್ಣ ಬೇಳೂರಿಗೆ ಸ್ವಪಕ್ಷದಲ್ಲೆ ವಿರೋಧವಿದೆ: ತೀನಶ್ರೀ

ಸಾಗರ : ಮೇ 13ರ ಗುರು ವಾರ ಪಕ್ಷೇತರ ಅಭ್ಯರ್ಥಿಯಾಗಿ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ. ನಿಲ್ಲಿಸಿ ಮತ್ತು ಗೆಲ್ಲಿಸಿ ಎನ್ನುವ ಘೋಷ ವಾಕ್ಯದಡಿ ಚುನಾವಣೆ ಎದುರಿಸು ತ್ತಿದ್ದೇನೆ ಎಂದು ಮಲೆನಾಡು ಭೂ ಹೋರಾಟ ಸಮಿತಿ ಜಿಲ್ಲಾ ಸಂಚಾ ಲಕ ತೀ.ನ.ಶ್ರೀನಿವಾಸ್‌ ತಿಳಿಸಿ ದ್ದಾರೆ.

ಸೋಮವಾರ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದ ಅವರು, ಅಪಾರ ಜನರನ್ನು ಕರೆದುಕೊಂಡು ಹೋಗದೆ ಸರಳವಾಗಿ, ನನ್ನ ಆಪ್ತ ವಲಯದ ನೇತೃತ್ವದಲ್ಲಿ ನಾಮ ಪತ್ರ ಸಲ್ಲಿಸಿ, ನಂತರ ಪ್ರಚಾರ ಕಾರ್ಯವನ್ನು ಇನ್ನಷ್ಟು ಚುರುಕು ಗೊಳಿ ಸುತ್ತೇನೆ ಎಂದು ಹೇಳಿದರು.

ನಗರ ಪ್ರದೇಶದಲ್ಲಿ ಶುದ್ದ ಕುಡಿಯುವ ನೀರು, ಆಶ್ರಯ ನಿವೇಶನ, ಗುಣಮಟ್ಟದ ರಸ್ತೆ, ಭ್ರಷ್ಟಾಚಾರರಹಿತ ಆಡಳಿತ, ಗ್ರಾಮೀಣ ಪ್ರದೇಶದ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕು ಪತ್ರ, ಅರಣ್ಯಹಕ್ಕು ಮತ್ತು ಬಗರ್‌ ಹುಕುಂ ಅಡಿ ಅರ್ಜಿ ಸಲ್ಲಿಸಿದ ವರಿಗೆ ಕಾಲಮಿತಿಯೊಳಗೆ ಹಕ್ಕು ಪತ್ರ ಕೊಡಿಸುವುದು, ವಿಶ್ವ ವಿಖ್ಯಾತ ಜೋಗ ಜಲಪಾತವನ್ನು ಪರಿಸರ ಉಳಿಸಿಕೊಳ್ಳುವ ಮೂಲಕ ಅಭಿ ವೃದ್ದಿಪಡಿಸುವುದು, ಕ್ಷೇತ್ರವ್ಯಾ ಪ್ತಿಯ ಪ್ರವಾಸಿ ತಾಣಗಳ ಅಭಿ ವೃದ್ದಿ, ಸರ್ಕಾರದ ಯೋಜನೆ ತಳ ಮಟ್ಟದ ವ್ಯಕ್ತಿಗಳಿಗೂ ತಲುಪಿಸು ವುದು ಚುನಾವಣಾ ಪ್ರಣಾಳಿಕೆ ಯಾಗಿದೆ. ಜೊತೆಗೆ ಪಕ್ಷಾತೀತ ಮತ್ತು ಜಾತ್ಯಾತೀತ ಆಡಳಿತ ನೀಡು ವುದು ನನ್ನ ಪ್ರಮುಖ ಧ್ಯೇಯ ವಾಗಿದೆ. ಕ್ಷೇತ್ರದ ಮತದಾರರು ಈತನಕದ ನನ್ನ ಸಾರ್ವಜನಿಕರ ಭ್ರಷ್ಟಾಚಾರರಹಿತ ಸೇವೆಗೆ ಮನ್ನಣೆ ನೀಡಿ ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.

ಬಿಜೆಪಿಯಿಂದ ಸ್ಪರ್ಧೆ ಮಾಡಿ ರುವ ಹಾಲಪ್ಪ ಮತ್ತು ಕಾಂಗ್ರೇಸ್‌ ನಿಂದ ಸ್ಪರ್ಧೆ ಮಾಡಿರುವ ಗೋಪಾಲಕೃಷ್ಣ ಬೇಳೂರಿಗೆ ಸ್ವಪಕ್ಷದಲ್ಲೆ ವಿರೋಧವಿದೆ. ಸ್ವತಃ ಕಾಗೋಡು ತಿಮ್ಮಪ್ಪ ಅವರೇ ಬೇಳೂರಿಗೆ ಟಿಕೇಟ್‌ ಕೊಡಬೇಡಿ ಎಂದು ಬೆಂಗಳೂರಿಗೆ ನಿಯೋಗದ ಜೊತೆ ಹೋಗಿ ಒತ್ತಾಯಿಸಿದ್ದರು. ಆದರೆ ಅವರ ಮಾತಿಗೆ ಹೈಕ ಮಾಂಡ್‌ ಬೆಲೆ ಕೊಡದೆ ಬೇಳೂರಿಗೆ ಟಿಕೇಟ್‌ ನೀಡಿದೆ. ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಅವರಿಗೆ ಟಿಕೇಟ್‌ ನೀಡಬೇಡಿ ಎಂದು ಸಂಘ ಪರಿವಾರದ ಪ್ರಮುಖರು, ಪಕ್ಷದ ಕೆಲವರು ಪ್ರಧಾನಿವರೆಗೂ ದೂರು ನೀಡಿ ದ್ದಾರೆ. ರಾಷ್ಟ್ರೀಯ ಪಕ್ಷಗ ಳಿಂದ ಸ್ಪರ್ಧೆ ಮಾಡಿರುವ ಇಬ್ಬರೂ ಅಭ್ಯರ್ಥಿಗಳು ದೌರ್ಜ ನ್ಯ ದಬ್ಬಾ ಳಿಕೆ ನಡೆಸಿದವರು. ಮತದಾರರು ಇದನ್ನು ಅರಿತು ಕೊಂಡು ತಮ್ಮನ್ನು ಬೆಂಬಲಿಸಲು ಮನವಿ ಮಾಡಿ ದರು. ಕಳೆದ ನಾಲ್ಕು ದಶಕಗಳಿಂದ ನಾನು ಸಾರ್ವಜನಿಕ ಕ್ಷೇತ್ರದಲ್ಲಿ ಭ್ರಷ್ಟಾಚಾ ರಹಿತವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. 15 ವರ್ಷ ಪತ್ರಕರ್ತ ನಾಗಿ ಅನೇಕ ಸುಧಾರಣೆಗೆ ಕಾರಣ ವಾಗಿದ್ದು, ನನ್ನ ಮೇಲೆ ಮಾರಣಾ ಂತಿಕ ಹಲ್ಲೆ ಸಹ ನಡೆದಿತ್ತು. ನಾಲ್ಕು ಅವಗೆ ಪುರಸಭೆ ಸದಸ್ಯನಾಗಿ, ನಾಲ್ಕು ವರ್ಷ ಅಧ್ಯಕ್ಷನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಮಲೆನಾಡು ರೈತ ಹೋರಾಟ ಸಮಿತಿ ಮೂಲಕ ರೈತರ ಧ್ವನಿ ಯಾಗಿ ಕೆಲಸ ಮಾಡು ತ್ತಿದ್ದೇನೆ. ಈ ಬಾರಿ ಚುನಾವ ಣೆಯಲ್ಲಿ ಪಕ್ಷ, ಜಾತಿ, ಹಣಬಲ ವನ್ನು ನೋಡದೆ ಮತದಾರರು ನನ್ನಂತಹ ಪ್ರಾಮಾಣಿಕನನ್ನು ಬೆಂಬ ಲಿಸುತ್ತಾರೆ ಎಂದು ಹೇಳಿದರು.

ಗೋಷ್ಟಿಯಲ್ಲಿ ವಿಶ್ವನಾಥ ಗೌಡ ಅದರಂತೆ, ಎಲ್‌. ವಿ. ಸುಭಾಷ್‌, ಕೃಷ್ಣಮೂರ್ತಿ ಹೆಗ್ಗೋಡು, ದೇವಪ್ರಸಾದ್‌ ವಿಲೆಡ್‌, ಗೋಪಾಲಕೃಷ್ಣ ಇದ್ದರು.