ಜಿಲ್ಲಾ ಸುದ್ದಿತಾಜಾ ಸುದ್ದಿ

ಹೊಸ ತಲೆಮಾರಿನ ಮತದಾರರು ಎಲ್ಲರನ್ನೂ ಮತಗಟ್ಟೆಗೆ ಬರುವಂತೆ ಪ್ರೇರೇಪಿಸಿ:ಡಿ.ಮಂಜುನಾಥ್‌

ಶಿವಮೊಗ್ಗ : ಮತದಾನ ಪವಿತ್ರ ವಾದದ್ದು. ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ. ಸಮರ್ಥ ವ್ಯಕ್ತಿ, ವ್ಯಕ್ತಿತ್ವ ನಮ್ಮ ಪ್ರತಿನಿ ಆಗಬೇಕು. ಅಂತಹ ವ್ಯಕ್ತಿ ಆಯ್ಕೆಗೆ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಲಾಗಿದೆ. ಅದನ್ನು ಮಾರಿಕೊಳ್ಳದೇ ಪ್ರಾಮಾಣಿಕ ವಾಗಿ ಚಲಾಯಿಸಲು ಸಂಕಲ್ಪ ಮಾಡುವಂತೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಕರೆ ನೀಡಿದರು.

 ಏ.19 ರ (ಬುಧವಾರ) ಬೆಳಿಗ್ಗೆ ನಗರದ ಗಾರ್ಡನ್‌ ಏರಿಯಾದಲ್ಲಿರುವ ಸೂರ್ಯ ನರ್ಸಿಂಗ್‌ ಕಾಲೇಜು ಸಭಾಂಗಣ ದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮತದಾರರಿಗೆ ಮತದಾನದ ಜಾಗೃತಿ ಮತ್ತು ಅರಿವು ಕಾರ್ಯಕ್ರಮವನ್ನು ಚುನಾ ವಣಾ ಭಿತ್ತಿ ಪತ್ರ ಅನಾವರಣ ಮಾಡಿ ಉದ್ಘಾಟಿಸಿ ಮಾತನಾಡಿ ದರು.

ಚುನಾವಣೆ ಉದ್ಯಮವಲ್ಲ, ಸೇವೆ ಮಾಡುವ ಕನಸುಹೊತ್ತ ವರಿಗೆ ಅವಕಾಶ ನೀಡುವ ವ್ಯವಸ್ಥೆ ಯಾಗಬೇಕು. ನಮ್ಮ ಪೂರ್ವಿಕರು ರಾಜರು, ಮಹಾರಾಜರು, ಸಾಮಂತರು, ವಿದೇಶಿಯರು, ನವಾಬರು, ಸುಲ್ತಾನರ ಆಡಳಿತಕ್ಕೆ ಒಳಪಟ್ಟು ಸಂಕೋಲೆಗಳಿಂದ ಹೊರಬಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ನಿರ್ಧಾ ರ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದು ಸಾಕು. ಇನ್ನಾ ದರೂ ಪ್ರಭಾವಕ್ಕೆ ಒಳಗಾಗದೆ, ಮೋಸಕ್ಕೆ ಬಲಿಯಾಗದೆ, ಗರ್ಭ ಗುಡಿಯ ಗುಮ್ಮನಿಗೆ ಮಾರು ಹೋಗದಂತೆ ಮತಗಟ್ಟೆಗೆ ಬಂದು ಮತದಾನ ಮಾಡುವಂತೆ ಮನವಿ ಮಾಡಿದರು.

ಲಾವಣಿ ಹಾಡಿದ ಜಾನಪದ ಕಲಾವಿದರಾದ ಆಂಜನೇಯ ಜೋಗಿ ಅವರು ಆಸೆ ತೋರಿಸಿ ಮೋಸಮಾಡುತ್ತಾರೆ ಎನ್ನುವ ಮತದಾರ ಜಾಗೃತಿ ಸಂದೇಶ ಸಾರಿದರು.

ಸ್ವೀಪ್‌ ಜಿಲ್ಲಾ ಉಪ ನೋಡಲ್‌ ಅಕಾರಿ ನವೀದ್‌ ಅಹ್ಮದ್‌ ರ್ವೀಜ್‌ ಅವರು ಯುವ ಮತದಾರರು ನಿಮ್ಮ ಮೊಬೈಲ್‌ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು, ವಿಳಾಸ ಬದಲಾವಣೆ, ಮೃತರ ಹೆಸರು ತೆಗೆಯುವುದು. ಚುನಾ ವಣಾ ಅಕ್ರಮಗಳನ್ನು ತಡೆಯಲು ಯಾಪ್‌ ಗಳ ಮಾಹಿತಿ ತಿಳಿಸಿದರು. ಕವಿಗಳಾದ ಡಿ. ಗಣೇಶ್‌, ಭದ್ರಾವತಿಯ ನಾಗೋಜಿರಾವ್‌ ಕವನ ವಾಚಿಸಿದರು. ಭಾರತಿ ರಾಮಕೃಷ್ಣ, ಕಾಲೇಜು ಉಪ ನ್ಯಾಸಕರಾದ ಜಿತೇಂದ್ರ ಭಾಗವಹಿ ದ್ದರು. ಕು. ಪಲ್ಲವಿ ಸ್ವಾಗತಿಸಿದರು. ಶಿವಪ್ಪ ಮೇಷ್ಟ್ರು ವಂದಿಸಿದರು.