ಶಿವಮೊಗ್ಗಶಿವಮೊಗ್ಗ ನಗರ

ಚುನಾವಣೆ: ಬಂದೂಕುಗಳ ಠೇವಣಿ ಸರಿಯಲ್ಲ ರಿಯಾಯಿತಿಗಾಗಿ ಆಗ್ರಹಿಸಿ ಬಂದೂಕು ಪರವಾನಿಗೆದಾರ ರೈತರ ಪತ್ರ

ಶಿವಮೊಗ್ಗ: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪಿ ಸುತ್ತಿದೆ ಎಂದು ಪೊಲೀಸ್‌ ಇಲಾಖೆಯವರು ಬಂದೂಕು ಗಳನ್ನು ಠಾಣೆಯಲ್ಲಿ ಇಡಬೇ ಕೆಂದು ಪರವಾನಗಿದಾರರಿಗೆ ಸೂಚಿಸುತ್ತಿರುವುದು ಸರಿಯಾದ ಕ್ರಮವಲ್ಲವೆಂದು  ಜಿಲ್ಲಾ ಮಲೆ ನಾಡು ಭಾಗದ ಬಂದೂಕು ಪರ ವಾನಿಗೆ ದಾರ ರೈತರು ಹೇಳಿದ್ದಾರೆ.

ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಕೋಡ್ಲು ವೆಂಕ ಟೇಶ್‌, ಮಲೆನಾಡಿನ ಬಹುತೇಕ ಊರುಗಳು, ವಾಸದ ಮನೆಗಳು ಅದರಲ್ಲೂ ರೈತರ ಮನೆಗಳು ಚದ ರಿದಂತೆ ಇದ್ದು ಒಂಟಿ ಮನೆಗಳು ಹೆಚ್ಚು, ಆಹಾರ ಧಾನ್ಯಗಳು, ಅಡಿಕೆ, ಕಾಳುಮೆಣಸು, ಕೋಕೋ ಮುಂತಾದ ಬೆಳೆಗಳ ಕೊಯ್ದು ಮುಗಿದು ಹೆಚ್ಚಿನ ಬೆಲೆಗಾಗಿ ಮನೆಯಲ್ಲಿ ದಾಸ್ತಾನು ಇರುತ್ತದೆ. ಕಳ್ಳತನ, ದರೋಡೆ ಭಯದಿಂ ದಲೇ ಬದುಕು ಸಾಗಿಸುತ್ತೇವೆ. ಕೃಷಿ ಭೂಮಿಯಲ್ಲಿ ನಿರಂತರ ಪ್ರಾಣಿ ಗಳ ಕಾಟದಿಂದ ಹಗಲು ರಾತ್ರಿ ಎನ್ನದೆ ಕಾವಲು ಮಾಡುವುದು ನಿರಂತರ ಕಾಯಕ. ಹೀಗಿರುವಾಗ ನಮ್ಮ ಜೀವ, ಆಸ್ತಿ, ಬೆಳೆ ರಕ್ಷಣೆಗೆ ಅನಿವಾರ್ಯ ಆಸರೆಯಾಗಿರುವ ಬಂದೂಕುಗಳನ್ನು ಚುನಾವಣೆ ನೆಪದಲ್ಲಿ ಪೊಲೀಸರಿಗೆ ಒಪ್ಪಿಸಿ ಎಂದು ಆದೇಶಿಸುವುದು ನಮ್ಮ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವ ಜನವಿರೋ ನೀತಿ ಆಗುತ್ತದೆ ಎಂದಿದ್ದಾರೆ.

ರೈತರು ಚಳವಳಿ ಮಾಡು ವಾಗ ಲಾಠಿ ಚಾರ್ಜ್‌, ಗೋಲಿಬಾ ರುಗಳು ಆದಾಗಲೂ ರೈತರು ಹಿಂಸಾತ್ಮಕವಾಗಿ ವರ್ತಿಸಿರುವು ದಿಲ್ಲ. ಇಂತಹ ಸಂಯಮ ಹೊಂದಿದ ಸಮುದಾಯದ ಬಗ್ಗೆ ಪೂರ್ಣ ಮಾಹಿತಿ ಹೊಂದಿರುವ ಚುನಾವಣಾ ಆಯೋಗದ ನಡೆಯನ್ನು ನಾವು ಖಂಡಿಸುತ್ತೇವೆ. ನಮ್ಮ ಹಕ್ಕುಗಳಿಗೆ ಚ್ಯುತಿ ತರು ತ್ತಿರುವ ಚುನಾವಣಾ ಆಯೋಗದ ಇಂತಹ ನಿರ್ಧಾರಗಳ ವಿರುದ್ಧ ಬರುವ ಚುನಾವಣೆಯಲ್ಲಿ ಜನ ತಂತ್ರದ ಅತ್ಯಂತ ಮಹತ್ವದ ಮತ ಚಲಾವಣೆಯನ್ನು ಬಹಿಷ್ಕರಿಸು ವಂತಹ ಕಠಿಣ ತೀರ್ಮಾನಗಳಿಗೆ ಮುಂದಾಗುತ್ತೇವೆ. ಮತದಾರರ ಇಂತಹ ನಕಾರಾತ್ಮಕ ತೀರ್ಪುಗಳಿಗೆ ಚುನಾವಣಾ ಆಯೋಗವೇ ಹೊಣೆಗಾರ ಎಂದು ವಿವರಿಸಿ ದರು.ಮುಖ್ಯವಾಗಿ, ಸ್ಥಳೀಯ ಪರಿಸ್ಥಿತಿಗಳನ್ನು ಅವಲೋಕಿಸಿ ಈ ಸಂಬಂಧ ತೀರ್ಮಾನ ಕೈಗೊಳ್ಳಲು ಆಯಾ ಜಿಲ್ಲಾ, ಸಬ್‌ ಡಿವಿಸನ್‌ ಮತ್ತು ತಾಲ್ಲೂಕಿನ ಕಾರ್ಯ ನಿರ್ವಾಹಕ ದಂಡಾಕಾರಿಗಳ ವಿವೇಚನ ಅಕಾರಕ್ಕೆ ವಹಿಸುವುದು ಅಗತ್ಯ ಎಂದರು.

 ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಹೊರಬೈಲು ರಾಮಕೃಷ್ಣ್ಣ, ಪಿ ಎಸ್‌ ರಾಜೇಂದ್ರ ಹಾಜರಿದ್ದರು.