ಜಿಲ್ಲಾ ಸುದ್ದಿಶಿವಮೊಗ್ಗಸೊರಬ

ನಾಟಾ ಸಾಗಾಟ: ಮುಖ್ಯಾಕಾರಿ ಅಮಾನತಿಗೆ ರಾಜ್ಯ ರೈತ ಸಂಘ  ಆಗ್ರಹ

ಸೊರಬ : ಪಟ್ಟಣದ ಹಳೆ ತಾಲ್ಲೂಕು ಕಛೇರಿ ಸೇರಿದಂತೆ ವಿವಿಧ ಸರ್ಕಾರಿ ಕಟ್ಟಡಗಳ ತೆರವುಗೊಳಿಸಿದ್ದ ಕೋಟ್ಯಂತರ ಬೆಲೆ ಬಾಳುವ ವಿವಿಧ ಉತ್ತಮ ಜಾತಿಯ ನಾಟಾಗಳನ್ನು ಪುರಸಭೆ ಮುಖ್ಯಾಕಾರಿ ಟಿ.ಎಸ್‌. ಗಿರೀಶ್‌ರವರು ಅಕ್ರಮವಾಗಿ ಹಳೇ ನಾಟಾ ಕಳ್ಳ ಸಾಗಾಟ ನಡೆಸಿ ದ್ದರ ಕುರಿತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರೂ ಮೇಲಾಕಾರಿಗಳು ಕ್ರಮ ಕೈಗೊಳ್ಳದಿರುವುದನ್ನು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಖಂಡಿಸಿವೆ.

 ಶನಿವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ಕಾರ್ಯ್ಧ್ಯಕ್ಷ ಎನ್‌. ಕೆ. ಮಂಜುನಾಥ ಗೌಡ,  ಭಾಗಿಯಾ ಗಿರುವ ಅಕಾರಿ ವಿರುದ್ಧ್ದ ತನಿಖೆ ನಡೆಸಬೇಕು.  ಮತ್ತು ಅಮಾನತು ಗೊಳಿಸಬೇಕು.  ಇಂತಹ ಆರೋಪ ಹೊತ್ತಿರುವವರ ವಿರುದ್ಧ ಚುನಾ ವಣಾ ಆಯೋಗ  ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ದರು.

ಸೊರಬ ಪಟ್ಟಣದ ಹಳೇ ತಾಲೂಕು ಕಛೇರಿ ಸೇರಿದಂತೆ ವಿವಿಧ ಸರ್ಕಾರಿ ಕಟ್ಟಡಗಳ ತೆರವುಗೊಳಿಸಿದ್ದ ಕೋಟ್ಯಾಂತರ ಬೆಲೆ ಬಾಳುವ ಉತ್ತಮ ಜಾತಿಯ ಹಳೇ ನಾಟಾಗಳನ್ನು ಸೊರಬ ಪುರಸಭೆಯ ಮುಂಭಾಗದ ಐ.ಡಿ. ಎಸ್‌.ಎಮ್‌.ಟಿ ವಾಣಿಜ್ಯ ಸಂಕೀರ್ಣದ ಸೆಲ್ಲಾರ್‌ನಲ್ಲಿ 2019 ರಲ್ಲಿ ಅಂದಿನ ಪುರಸಭೆ ಅಧ್ಯಕ್ಷರು, ಸದಸ್ಯರು ಅಕಾರಿಗಳ ಉಪಸ್ಥಿತಿ ಯಲ್ಲಿ ನಿಯಮಾನುಸಾರ ಸಂಗ್ರಹಿ ಸಿಡಲಾಗಿತ್ತು. ಆದರೆ ಕೋಟ್ಯಾಂ ತರ ರೂಪಾಯಿ ಬೆಲೆಬಾಳುವ ನಾಟಾಗಳಾದ ಸಾಗುವಾನಿ, ಬೀಟೆ, ಸೇರಿದಂತೆ ಉತ್ತಮ ಜಾತಿ ಯ ಪುರಸಭೆ ವಾಣಿಜ್ಯ ಸಂಕೀರ್ಣ ಸೆಲ್ಲಾರ್‌ನಲ್ಲಿ 

ಸಂಗ್ರಹಿಸಲಾದ ನಾಟಾಗ ಳನ್ನು ಶಾಸಕ ಕುಮಾರ್‌ ಬಂಗಾರ ಪ್ಪನವರ ಅಣತಿಯಂತೆ  ನಿಯಮ ಬಾಹಿರವಾಗಿ ದಿ.16 ರಂದು ನಾಟಾ ಸಾಗಾಟಕ್ಕೆ ತಯಾರಿ ನಡೆಸಿದ್ದ ಸಂದರ್ಭದಲ್ಲಿ ಸಾರ್ವ ಜನಿಕರ ಸಮಯ ಪ್ರಜ್ಞೆ ಹಾಗೂ ವಿವಿಧ ಸಂಘಟನೆಗಳು ನೀಡಿದ ಮಾಹಿತಿಯಂತೆ ಸೊರಬ ಅರಣ್ಯಾ ಕಾರಿಗಳು ನಾಟಾ ತುಂಬಿದ ವಾಹನವನ್ನು ಹಾಗೂ ವಾಹನ ಚಾಲಕನನ್ನು ವಶಕ್ಕೆ ಪಡೆದಿದ್ದರು ಎಂದರು.

ವಿಚಾರಣೆ ನಡೆಸಿ ನ್ಯಾಯಾಲ ಯಕ್ಕೆ ಸಲ್ಲಿಸಿದ ಪ್ರಥಮ ವರ್ತ ಮಾನ ವರದಿ(ಎ್‌‍.ಐ.ಆರ್‌) ನಲ್ಲಿ ಇಲಾಖೆ ವಶಕ್ಕೆ ಪಡೆದ ನಾಟಾಗಳು ಸಾಗುವಾನಿಯಂದು ನಮೂದಾಗಿದೆ. ಪ್ರಕರಣದಲ್ಲಿ ಭಾಗಿಯಾದವರನ್ನು ಕೂಡಲೇ ಬಂಸಿ ವಿಚಾರಣೆ ನಡೆಸಬೇಕು. ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡವಿದೆ ಎಂದು ವಿವಿಧ ರೀತಿಯಲ್ಲಿ ವಿವಿಧ ಸಂಘಟನೆಗಳು ಹಲವು ರೀತಿಯ ಹೋರಾಟ ನಡೆಸಿ ಸೆಲ್ಲಾರ್‌ನ ಬೀಗವನ್ನು ನೀಡಿ ಅಕ್ರಮ ಸಾಗಾಟಕ್ಕೆ ಕುಮ್ಮಕ್ಕು ನೀಡಿದ್ದವರನ್ನು ಕೂಡಲೇ ಅಮಾನತುಗೊಳಿಸಿ ಈ ಪ್ರಕರಣದಲ್ಲಿ ಭಾಗಿಯಾದವರು ಯಾರೇ ಇರಲಿ, ಸೂಕ್ತ ತನಿಖೆ ನಡೆಸಿ ವಿವಿಧ ಹಂತದ ಹೋರಾಟ ನಡೆಸಿದರೂ ಮೇಲಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಶಫಿಯುಲ್ಲಾ, ಶಿಕಾರಿಪುರದ ಪಿ ವೈ ರವಿ, ಎಚ್‌. ವಿ ಸತೀಶ್‌, ಕೆ ಜಿ ಮೇಘರಾಜ್‌, ಉಮೇಶ್‌ ಪಾಟೀಲ್‌, ಈಶ್ವರಪ್ಪ ಕೊಡಕಣಿ ಮೊದಲಾದವರಿದ್ದರು.