ಜಿಲ್ಲಾ ಸುದ್ದಿ

ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಮತದಾನ ಮರೆಯದಿರಿ : ಡಿ. ಮಂಜುನಾಥ

ಶಿವಮೊಗ್ಗ : ವಿಶ್ವದಲ್ಲಿಯೇ ನಮ್ಮ ರಾಷ್ಟ್ರ ಪ್ರಜಾಪ್ರಭುತ್ವಕ್ಕೆ ಮಾದರಿಯಾಗಿದೆ. ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳು ಕಳೆದಿದೆ. ಅಮೃತಮಹೋತ್ಸವ ಆಚರಣೆ ಮಾಡಿ ಸಂಭ್ರಮಿಸಿ ದ್ದೇವೆ. ಪ್ರಜಾ ಪ್ರಭುತ್ವ ವ್ಯವಸ್ಥೆ ಯಲ್ಲಿ ನಮ್ಮ ಪ್ರತಿನಿಯನ್ನು ಐದು ವರ್ಷಗಳಿಗೊಮ್ಮೆ ಚುನಾವ ಣೆಯ ಮೂಲಕ ಆಯ್ಕೆಮಾಡಿ ಕೊಳ್ಳುವ ಅವಕಾಶ ನೀಡಲಾಗಿದೆ. ಚುನಾವಣೆಯ ದಿನ ಮತಗಟ್ಟೆಗೆ ಹೋಗಿ ನಮ್ಮ ಪವಿತ್ರವಾದ ಮತವನ್ನು ಯೋಗ್ಯ ಅಭ್ಯರ್ಥಿಗೆ ದಾನ ಮಾಡುವ ಕಾರ್ಯದಲ್ಲಿ ಭಾಗಿಗಳಾಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾದ ಡಿ. ಮಂಜುನಾಥ ಕರೆ ನೀಡಿದರು.

ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಮತದಾರರಿಗೆ ಮತದಾನದ ಜಾಗೃತಿ ಮತ್ತು ಅರಿವು ಸಮಿತಿ ಸಹಯೋಗದಲ್ಲಿ ನಗರದ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ನಿಯರ ನಿಲಯ ಆವರಣದಲ್ಲಿ ಮತದಾನದ ಮಹತ್ವ, ಕವಿಗಳು -ಕಲಾವಿದರ ಕಾವ್ಯ ಸಂಭ್ರಮ- ಜಾನಪದ ಲಾವಣಿ ಮೆರಗು ಕಾರ್ಯಕ್ರಮವನ್ನು ಗಿಡಕ್ಕೆ ನೀರೆ ರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಾವು ಪ್ರಜೆಗಳು ನಮ್ಮ ನೈತಿಕತೆ ಮರೆಯಬಾರದು. ಯಾವುದೇ ಆಮಿಷಗಳಿಗೆ ಬಲಿ ಯಾಗಬಾರದು. ನಾವೆಲ್ಲರೂ ವಿದ್ಯಾವಂತರು. ನೀವು ನಿಮ್ಮ ಮನೆಯ, ಸುತ್ತಲಿನ ಪರಿಸರಕ್ಕೆ ಈ ಮಹತ್ವ ಸಾರುವ ರಾಯಬಾರಿಗ ಳಂತೆ ಕಾರ್ಯನಿರ್ವಹಿಸಲು ಮನವಿ ಮಾಡಿದರು.

 ಸಹ್ಯಾದ್ರಿ ವಿಜ್ಞಾನ ಕಾಲೇಜು ಪ್ರಾಂಶುಪಾಲರಾದ ಡಾ. ಎನ್‌. ರಾಜೇಶ್ವರಿ ಮಾತನಾಡಿ, ಆಮಿಷ ಗಳಿಗೆ ಬಲಿಯಾಗದೆ ಮತಗಟ್ಟೆ ಗೆಬಂದು ಮತಚಲಾಯಿಸುವ ಕಾರ್ಯ ಸಂಭ್ರಮದಿಂದಾಗಲಿ, ಜ್ಞಾನವಂತರನ್ನೇ ಜಾಗೃತಿ ಮಾಡು ವ ಕಾರ್ಯ ಇದಾಗಿದೆ ಎಂದರು

ರಾಜ್ಯ ಮಟ್ಟದ ತರಬೇ ತುದಾರ ಸ್ವೀಪ್‌ ಜಿಲ್ಲಾ ಉಪನೊಡಲ್‌ ಅಕಾರಿ ನವೀದ್‌ ಅಹ್ಮದ್‌ ಪರ್ವೀಜ್‌ ಮಾತನಾಡಿ, ತಪ್ಪು ಎಲ್ಲರೂ ಮಾಡುತ್ತೇವೆ. ಅದನ್ನು ತಿದ್ದಿಕೊಳ್ಳುವುದು ಜವಾ ಬ್ದಾರಿ. ನೈತಿಕತೆ ಮುಖ್ಯ. ಭ್ರಷ್ಠಾ ಚಾರಕ್ಕೆ ನಾವೇ ಕಾರಣರಾಗುವುದು ಬೇಡ. ಯುವ ಮತದಾರರು ನೈತಿಕತೆಯಿಂದ ಕಡ್ಡಾಯವಾಗಿ ಮತದಾನ ಮಾಡಲು ಮನವಿ ಮಾಡಿದರು.

ಹಿರಿಯ ಜಾನಪದ ಕಲಾವಿದ ರಾದ ಗುಡ್ಡಪ್ಪ ಜೋಗಿ ಅವರು ಲಾವಣಿ ಹಾಡಿದರು. ಕವಿಗಳು ತಾವು ಬರೆದ ಮತದಾರ ಜಾಗೃತಿ ಕವನಗಳನ್ನು ವಾಚಿಸಿದರು. ಸಾಹಿತಿ ಡಾ. ಶುಭಾಮರವಂತೆ, ಕಸಾಪ ತಾಲ್ಲೂಕು ಅಧ್ಯಕ್ಷರಾದ ಮಹಾದೇವಿ, ನಫೀಜಾ ಬೇಗಂ, ಭೈರಾಪುರ ಶಿವಪ್ಪಗೌಡ,  ತುರುವ ನೂರು ಮಲ್ಲಿಕಾರ್ಜುನ, ಸುಜಾ ತಾ ಆರ್‌.,ದೀಪಾ ಕುಬ್ಸದ್‌, ಎಂ. ಎಂ. ಸ್ವಾಮಿ, ಡಿ. ಗಣೇಶ್‌, ಭಾರತಿಬಾಯಿ, ಪಿ. ಕೆ. ಸತೀಶ್‌ ಇದ್ದರು.