ಶಿವಮೊಗ್ಗಸಾಗರ

ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಹೋದ ಪುಟ್ಟಾ.. ಬಂದಾ ಪುಟ್ಟ ಎನ್ನುವಂತೆ ಆಗುತ್ತಿದೆ: ರಮೇಶ್‌ ಈ. ಕೆಳದಿ

ಸಾಗರ : ಜಿಲ್ಲಾಽ ಕಾರಿಗಳ ಗ್ರಾಮವಾಸ್ತವ್ಯ ಹೋದ ಪುಟ್ಟಾ.. ಬಂದಾ ಪುಟ್ಟ ಎನ್ನುವಂತೆ ಆಗು ತ್ತಿದ್ದು, ಗ್ರಾಮ ವಾಸ್ತವ್ಯದಲ್ಲಿ ಅರ್ಜಿಗಳ ರೂಪದಲ್ಲಿ ನೀಡಿದ ಯಾವುದೇ ಸಮಸ್ಯೆಗಳು ಬಗೆಹರಿ ಯುತ್ತಿಲ್ಲ ಎಂದು ತಾಲ್ಲೂಕು ಪ್ರಗತಿಪರ ಯುವ ಒಕ್ಕೂಟದ ಅಧ್ಯಕ್ಷ ರಮೇಶ್‌ ಈ. ಕೆಳದಿ ದೂರಿದ್ದಾರೆ.

ಶುಕ್ರವಾರ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದ ಅವರು, ಸ್ವತಃ ಜಿಲ್ಲಾಽ ಕಾರಿಗಳಿಗೆ ಗ್ರಾಮ ಸ್ಥರು ಮನವಿ ಮೂಲಕ ಸಲ್ಲಿಸಿದ ಸಮಸ್ಯೆಗಳು ಇತ್ಯರ್ಥವಾಗದೆ ಹೋದ ಮೇಲೆ ಯಾವ ಪುರು ಷಾರ್ಥಕ್ಕೆ ಗ್ರಾಮವಾಸ್ತವ್ಯ ಮಾ ಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಕಳೆದ ವರ್ಷ ಸೆ. 18ಕ್ಕೆ ಹೆಗ್ಗೋಡು ಗ್ರಾಮದಲ್ಲಿ ಜಿಲ್ಲಾಽ ಕಾರಿಗಳು ಗ್ರಾಮವಾಸ್ತವ್ಯ ಹೂಡಿದ್ದಾಗ ಹೆಗ್ಗೋಡು-ಸೊಪ್ಪಿನ ಮಲೆ ರಸ್ತೆ ಸಮಸ್ಯೆ ಬಗ್ಗೆ ಗ್ರಾಮ ಸ್ಥರು ಮನವಿ ಸಲ್ಲಿಸಿದ್ದರು. ಜಿಲ್ಲಾ ಽ ಕಾರಿಗಳು ಒಂದು ದಿನದೊಳಗೆ ರಸ್ತೆ ಸಮಸ್ಯೆ ಬಗೆಹರಿಸಿ ಕೆ.ಎಸ್‌. ಆರ್‌.ಟಿ.ಸಿ. ಬಸ್‌ ಬಿಡಲು ಸೂಚನೆ ನೀಡಿದ್ದರು. ಅರ್ಜಿ ಸಲ್ಲಿಸಿ ಆರು ತಿಂಗಳಾದರೂ ಸಮಸ್ಯೆ ಬಗೆಹರಿದಿಲ್ಲ. ಸೊಪ್ಪಿನ ಮಲೆಯಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಏಳು ಕಿ.ಮೀ. ನಡೆದುಕೊಂಡು ಹೆಗ್ಗೋಡಿಗೆ ಬರುತ್ತಿದ್ದಾರೆ. ಮುಂಡಿಗೆಸರದ ಲಲಿತಮ್ಮ ಎಂಬ ಮಹಿಳೆ ವಿದ್ಯುತ್‌ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ್ದರು. ಮೆಸ್ಕಾಂ ಅಽ ಕಾರಿಗಳಿಗೆ ಜಿಲ್ಲಾಽ ಕಾರಿಗಳು ತಕ್ಷಣ ವಿದ್ಯುತ್‌ ಕಲ್ಪಿಸ ಲು ಸೂಚನೆ ನೀಡಿದ್ದರು. ಸಮಸ್ಯೆ ಹಾಗೆ ಉಳಿದಿದೆ ಎಂದರು.

2003ರಲ್ಲಿ ಕೆಳದಿ ಗ್ರಾಮದ ಸರ್ವೇ ನಂ. 96ರಲ್ಲಿ 55 ಜನರಿಗೆ ಹಕ್ಕುಪತ್ರ ನೀಡಿದ್ದರು. ಈ ಪೈಕಿ 10 ಲಾನುಭವಿಗಳಿಗೆ ಪಹಣಿ ಆಗಿರಲಿಲ್ಲ. ಕೆಳದಿಯಲ್ಲಿ ಉಪವಿ ಭಾಗಾಽ ಕಾರಿ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ವಾಸ್ತವ್ಯದಲ್ಲಿ ಸಮಸ್ಯೆ ಬಗೆಹರಿಸಲು ಗ್ರಾಮ ಸ್ಥರು ಮನವಿ ಸಲ್ಲಿಸಿದ್ದರು. 6 ತಿಂಗಳಾದರೂ ತಹಶೀಲ್ದಾರ್‌ ಕಚೇರಿಯಿಂದ ಹಿಂಬರಹ ನೀಡಿಲ್ಲ. ಹುಚ್ಚಪ್ಪ ಕೆಳದಿ ಎಂಬ 80 ವರ್ಷದ ವೃದ್ದರು ಪಹಣಿ ಯಲ್ಲಿ ಹೆಸರು ಸೇರಿಸಿಕೊಳ್ಳಲು ಕಚೇರಿ ಅಲೆದು ಅಲೆದು ಸುಸ್ತಾಗಿ ದ್ದಾರೆ. ತಹಶೀಲ್ದಾರ್‌ ಕಚೇರಿ ಯಲ್ಲಿ ಏಕವ್ಯಕ್ತಿ ಪ್ರಕರಣದಲ್ಲ ಪಕ್ಕಾಪೋಡಿ ಮಾಡಲು 1 ಲಕ್ಷ ರೂ. ಲಂಚ ಪಡೆಯುತ್ತಿದ್ದಾರೆ. ಆಡಳಿತ ವ್ಯವಸ್ಥೆ ಹದೆಗೆಟ್ಟಿದ್ದು, ಲಂಚ ಕೊಡದೆ ಯಾವುದೇ ಕೆಲಸ ಕ್ಷೇತ್ರವ್ಯಾಪ್ತಿಯ ಕಚೇರಿಗಳಲ್ಲಿ ಆಗುತ್ತಿಲ್ಲ ಎಂದರು.

ಜಿಲ್ಲಾಽ ಕಾರಿಗಳ ನಡೆ ಹಳ್ಳಿ ಕಡೆ ರಾಜ್ಯ ಸರ್ಕಾರದ ಮಹ ತ್ವಾಕಾಂಕ್ಷಿ ಯೋಜನೆಯಾಗಿದೆ. ಆದರೆ ಅಽ ಕಾರಿಗಳು ಗ್ರಾಮ ವಾಸ್ತವ್ಯದಲ್ಲಿ ಕೊಟ್ಟ ಭರವಸೆ ಈಡೇರಿಸುತ್ತಿಲ್ಲ. ಜನರು ತಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ದಿನಗಟ್ಟಲೆ ಕಾಯುತ್ತಾರೆ. ಈ ಹಿನ್ನೆಲೆಯಲ್ಲಿ ಮಾ. 18ರಂದು ಜಿಲ್ಲಾಽ ಕಾರಿಗಳ ಗ್ರಾಮ ವಾಸ್ತವ್ಯ ಸೈದೂರು ಗ್ರಾಮದಲ್ಲಿ ಹಮ್ಮಿಕೊ ಳ್ಳಲಾಗಿದೆ. ಹಿಂದೆ ನೀಡಿದ ಅಹವಾಲುಗಳಿಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಪ್ರಗತಿಪರ ಯುವ ಒಕ್ಕೂಟದ ವತಿಯಿಂದ ಸೈದೂರಿ ನಲ್ಲಿ ಅರ್ಜಿ ಸಲ್ಲಿಸಿದ ಲಾನು ಭವಿಗಳ ಜೊತೆ ಜಿಲ್ಲಾಽ ಕಾರಿಗಳ ಎದುರು ಧರಣಿ ನಡೆಸಲಾಗುತ್ತದೆ ಎಂದು ಹೇಳಿದರು. ಗೋಷ್ಟಿಯಲ್ಲಿ ಹುಚ್ಚಪ್ಪ ಕೆಳದಿ, ಜಯಂತ್‌ ಕೆಳದಿ ಹಾಜರಿದ್ದರು.