ಜಿಲ್ಲಾ ಸುದ್ದಿ

ಅಭಿವೃದ್ಧಿ ಕಾರ್ಯಗಳೇ ಗ್ರಾಮಾಂತರ ಗೆಲ್ಲುವುದಕ್ಕೆ ಸಹಕಾರಿ

ಶಿವಮೊಗ್ಗ: ಐದು ವರ್ಷಗಳ ಅವಯಲ್ಲಿ ಗ್ರಾಮಾಂತರ ಕ್ಷೇತ್ರ ದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ ಗಳೇ ಚುನಾವಣೆಯಲ್ಲಿ ಗೆಲುವು ಸಾಸಲು ಸಹಕಾರಿಯಾಗಲಿದೆ ಎಂದು ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಬಿ.ಅಶೋಕ ನಾಯ್ಕ ಹೇಳಿದರು.

ಶಿವಮೊಗ್ಗ ತಾಲೂಕಿನ ಸಂತೇ ಕಡೂರಿನಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಹಾಗೂ ವಿವಿಧ ಪಕ್ಷಗಳ ಮುಖಂಡರು ಬಿಜೆಪಿ ಸೇರ್ಪಡೆಗೊಳ್ಳುವ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಸದೃಢವಾಗಿದ್ದು, ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ವಿವಿಧ ಪಕ್ಷದ ಮುಖಂಡರು ಪಕ್ಷಕ್ಕೆ ಬರುತ್ತಿದ್ದಾರೆ. ಇದರಿಂದ ಪಕ್ಷದ ಸಂಘಟನಾ ಶಕ್ತಿ ಹೆಚ್ಚಾಗಿದೆ. ಅಭಿವೃದ್ಧಿ ಕೆಲಸಗಳನ್ನು ಮನೆ ಮನಗಳಿಗೆ ತಲುಪಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.

ಕ್ಷೇತ್ರ ಪ್ರಭಾರಿ ಎಸ್‌.ದತ್ತಾತ್ರಿ ಮಾತನಾಡಿ,ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ಇರುವ ಕಾರಣ ರಾಜ್ಯ ಪ್ರಗತಿಪಥದಲ್ಲಿ ಮುನ್ನಡೆದಿದೆ. ಮುಂದಿನ ದಿನಗಳಲ್ಲಿಯೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಮತ್ತೆ ಅಕಾರಕ್ಕೆ ಬರುವ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡ ಬೇಕಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವು ಸಾಸಬೇಕಿದೆ ಎಂದು ಹೇಳಿದರು.

ಡಬ್ಬಲ್‌ ಇಂಜಿನ್‌ ಸರ್ಕಾರದ ಪ್ರಯತ್ನದ ಲವಾಗಿ ಶಿವಮೊಗ್ಗ ದಲ್ಲಿ ವಿಮಾನ ನಿಲ್ದಾಣ ಲೋಕಾ ರ್ಪಣೆಗೊಂಡಿದೆ. ರೈಲ್ವೇ ಕಾಮ ಗಾರಿಗಳು ಹಾಗೂ ಸಾರಿಗೆ ಕ್ಷೇತ್ರ ದಲ್ಲಿ ಮಹತ್ತರ ಕೆಲಸಗಳು ಆಗಿವೆ. ನೀರಾವರಿ ಕ್ಷೇತ್ರದಲ್ಲೂ ಮಹತ್ತರ ಕೆಲಸಗಳು ಆಗಿವೆ. ಬಿಜೆಪಿ ರಾಜ್ಯ ದಲ್ಲಿ ಮತ್ತೆ ಅಕಾರಕ್ಕೆ ಬರುವ ವಿಶ್ವಾಸವಿದೆ ಎಂದು ತಿಳಿಸಿದರು.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಕಾರ್ಯ್ಲಯ, ಸಂತೇಕಡೂರು, ಹರಮಘಟ್ಟ ಸೇರಿದಂತೆ ವಿವಿಧೆಡೆಗಳಲ್ಲಿ ಆಯೊ ೕಜಿಸಿದ್ದ ಡಾ. ಬಿ.ಆರ್‌.ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮಗಳಲ್ಲಿ  ಗ್ರಾಮಾಂತರ ಅಭ್ಯರ್ಥಿ ಕೆ.ಬಿ. ಅಶೋಕನಾಯ್ಕ ಪಾಲ್ಗೊಂಡರು.

ಬಿಜೆಪಿ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ಗ್ರಾಮದ ಮುಖಂಡ ಕೃಷ್ಣಪ್ಪ ಸೇರಿದಂತೆ ನೂರಾರು ಕಾರ್ಯ ಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡರು. ಮಂಡಲ ಅಧ್ಯಕ್ಷ ರತ್ನಾಕರ ಶೆಣೈ, ಪ್ರಧಾನ ಕಾರ್ಯ ದರ್ಶಿ ಗೋಪಾಲ್‌, ಮಹಾಶಕ್ತಿ ಕೇಂದ್ರದ ಸುಬ್ಬಣ್ಣ, ಆನಂದ, ತಾಪಂ ಮಾಜಿ ಸದಸ್ಯ ಶ್ರೀಧರ್‌, ಮುನ್ನಿರತ್ನ ಇದ್ದರು.