ಜಿಲ್ಲಾ ಸುದ್ದಿ

ಮತದಾರರ ಜಾಗೃತಿ ಸ್ಕೇಟಿಂಗ್‌ ಅಭಿಯಾನ ಚಾಲನೆ

ಶಿವಮೊಗ್ಗ: ಪತ್ರಿಕಾ ಸಂಪಾ ದಕರ ಸಂಘ, ಮಹಾನಗರ ಪಾಲಿಕೆ, ನ್ಯೂ ಹಾಟ್‌ ವ್ಹೀಲ್‌ ಸ್ಕೇಟಿಂಗ್‌ ಸಂಸ್ಥೆ, ಜಿಲ್ಲಾಡಳಿತ, ಜಿಪಂ ,ಇವರ ಸಂಯುಕ್ತಾಶ್ರಯ ದಲ್ಲಿ   ಮತದಾರರ ಜಾಗೃತಿ ಸ್ಕೇಟಿ ಂಗ್‌ ಅಭಿಯಾನ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಆವರಣ ದಿಂದ ಹಮ್ಮಿಕೊಳ್ಳಲಾಗಿತ್ತು.

ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಲೋಖಂಡೆ ಸ್ನೇಹಲ್‌ ಸುಧಾಕರ್‌, ಮತದಾನ ಜಾಗೃತಿ ಇಂದು ಬಹುಮುಖ್ಯ ವಾಗಿದೆ. ಎಲ್ಲರೂ ತಪ್ಪದೆ ಮತ ದಾನ ಮಾಡಬೇಕು. ಆ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸ ಬೇಕು ಎಂದು ಕರೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಮಾತ ನಾಡಿ, ಸದೃಢ ರಾಜ್ಯ ಕಟ್ಟಲು ಮತದಾನದ ಅವಶ್ಯಕತೆ ಇದೆ. ಮೇ 10ರಂದು ಚುನಾವಣೆ ನಡೆಯಲಿದೆ. ಆ ದಿನ ಯಾವುದೇ ಕಾರಣ ಹೇಳದೆ ಮತಗಟ್ಟೆಗೆ ಬಂದು ಪ್ರತಿಯೊಬ್ಬ ಮತದಾ ರನೂ ಮತ ಚಲಾಯಿಸಬೇಕು ಎಂದು ಕರೆ ನೀಡಿದರು.

ಸ್ವೀಪ್‌ ಸಮಿತಿಯ ಟಿ.ಆರ್‌. ಅನುಪಮಾ ಮಾತನಾಡಿ, ಮತ ದಾನ ಜಾಗೃತಿ ಮೂಡಿಸಲು ಹಲ ವಾರು ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಂಡಿದ್ದೇವೆ. ವಿಕಲ ಚೇತನರಿಂದ ಕ್ಯಾಂಡಲ್‌ ಅಭಿಯಾ ನದ ಮೂಲಕ ಹಾಗೂ ಬೈಕ್‌ ಮತ್ತು ಸೈಕಲ್‌ ಜಾಥಾದ ಮೂಲ ಕವೂ ಜಾಗೃತಿ ಹಮ್ಮಿ ಕೊಳ್ಳಲಾಗು ವುದು ಎಂದರು.

ಶ್ರೀನಿ ಸಂಸ್ಥೆಯ  ಟಿ. ಆರ್‌. ಅಶ್ವತ್ಥ ನಾರಾಯಣ ಶೆಟ್ಟಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ದ ಅಧ್ಯಕ್ಷ ಎನ್‌ ಗೋಪಿ ನಾಥ್‌, ಜಿ. ವಿಜಯಕುಮಾರ್‌ ಸೇರಿದಂತೆ ಹಲವರು ಮತದಾನದ ಜಾಗೃತಿ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ನ್ಯೂ ಹಾಟ್‌ ವ್ಹೀಲ್‌ ಸ್ಕೇಟಿಂಗ್‌ ಸಂಸ್ಥೆಯ ಅಧ್ಯಕ್ಷ ಶಿ.ಜು. ಪಾಷಾ, ಸಂಪಾದಕರ ಸಂಘದ ಅಧ್ಯಕ್ಷ ಜಿ. ಚಂದ್ರಶೇಖರ್‌,  ಪ್ರಧಾನ ಕಾರ್ಯದರ್ಶಿ ಗಜೇಂದ್ರ ಸ್ವಾಮಿ, ಖಜಾಂಚಿ ರಘುರಾಜ್‌, ಪದಾಕಾರಿಗಳಾದ ಜಿ.ಪದ್ಮನಾಭ್‌, ಹಾಲೇಶ್‌, ಕೃಷ್ಣಬನಾರಿ, ಸಹ್ಯಾದ್ರಿ ಮಂಜುನಾಥ್‌, ಕಣ್ಣಪ್ಪ, ನಾಗೇಶ್‌ ನಾಯ್ಕ, ಆನಂದ್‌, ಪಿ. ಆಕಾಶ್‌, ಭರತೇಶ್‌, ನಾಗರಾಜ ಕಲ್ಲುಕೊಪ್ಪ,  ಕನ್ನಡ ಪ್ರಭ ವರದಿಗಾರ ಗೋಪಾಲ ಯಡಗೆರೆ, ಸ್ಕೇಟಿಂಗ್‌ ಪ್ರಧಾನ ಕಾರ್ಯ ದರ್ಶಿ, ರವಿಕುಮಾರ್‌ ಸ್ವೀಪ್‌ ಸಮಿತಿಯ  ನವೀದ್‌ ಅಹಮದ್‌ ಪರ್ವೀಜ್‌, ಪ್ರಮುಖರಾದ ಲೋಕೇಶ್‌, ರತ್ನಾಕರ್‌, ಎಂ ರವಿ, ಪ್ರವೀಣ್‌, ಉಮಾ ಟಿ. ಸೇರಿದಂತೆ ಹಲವರು  ಇದ್ದರು.

ಸ್ಕೇಟಿಂಗ್‌ ಜಾಥಾ ಮಹಾ ನಗರ ಪಾಲಿಕೆ ಆವರಣದಿಂದ ಆರಂಭವಾಗಿ, ವೀರಭದ್ರೇಶ್ವರ ಟಾಕೀಸ್‌ ರಸ್ತೆ, ಎಎ ಸರ್ಕಲ್‌, ಬಸ್‌ಸ್ಟ್ಯಾಂಡ್‌, ಕುವೆಂಪು ರಸ್ತೆ, ಜಿಲ್ಲಾಕಾರಿಗಳ ಕಚೇರಿ, ಮಹಾವೀರ ವೃತ್ತ, ಗೋಪಿ ವೃತ್ತದ ಮೂಲಕ ಮಹಾನಗರ ಪಾಲಿಕೆ ತಲುಪಿತು.