ಜಿಲ್ಲಾ ಸುದ್ದಿ

ಬಿಜೆಪಿ ಸರ್ಕಾರದ ಅವಯಲ್ಲಿ ದೌರ್ಜನ್ಯ ಪ್ರಕರಣ ಹೆಚ್ಚಾಗಿದೆ : ಉಮೇಶ್‌ ಮಾರವಳ್ಳಿ

ಶಿಕಾರಿಪುರ: ಸ್ವಾತಂತ್ರ ನಂತರ ದಲ್ಲಿ ಪ.ಜಾತಿ/ವರ್ಗಕ್ಕೆ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ ಹಲವು ಯೋಜನೆ ಸೌಲಭ್ಯವನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದ್ದು ಇದ ರೊಂದಿಗೆ ಬಿಜೆಪಿ ಸರ್ಕಾರದ ಅವಯಲ್ಲಿ ದೌರ್ಜನ್ಯ ಪ್ರಕರಣ ಹೆಚ್ಚಾಗಿದೆ ಎಂದು ಗ್ರಾ.ಪಂ ಮಾಜಿ ಸದಸ್ಯ ಹಾಗೂ ತಾ. ವಾಲ್ಮೀಕಿ ನಾಯಕ ಸಮಾಜದ ಮುಖಂಡ ಉಮೇಶ್‌ ಮಾರವಳ್ಳಿ ಸುದ್ದಿ ಗೋಷ್ಟಿಯಲ್ಲಿ ಆರೋಪಿಸಿ ದರು.

ದೇಶ- ರಾಜ್ಯದ ಬದಲಾವ ಣೆಯ ಬಹು ದೊಡ್ಡ ನಿರೀಕ್ಷೆಯ ನ್ನು ಜನಸಾಮಾನ್ಯರಲ್ಲಿ ಬಿತ್ತಿ ಅಕಾರಗಳಿಸಿದ ಬಿಜೆಪಿ ಸರ್ಕಾರದ ಅವಯಲ್ಲಿ ಪ.ಜಾತಿ/ಪಂಗಡದ ಜನತೆ ನೆಮ್ಮದಿಯನ್ನು ಕಳೆದು ಕೊಂಡಿದ್ದಾರೆ ಎಂದು ಆರೋಪಿ ಸಿದ ಅವರು, ಬಿಜೆಪಿ ಸರ್ಕಾರದ ಅಸ್ಥಿತ್ವಕ್ಕೆ ಮುಂಚೆ ಬಡವರು ಪ.ಜಾತಿ/ಪಂಗಡದ ಜನತೆಗೆ ನಿವೇಶನ, ಮನೆ, ವಿದ್ಯುತ್‌, ಮೀಸಲಾತಿ ಸಹಿತ ಹಲವು ಸೌಲಭ್ಯವನ್ನು ಸ್ಥಗಿತಗೊಳಿಸಿರುವ ಬಿಜೆಪಿ ಸರ್ಕಾರ ಎಸ್‌ಟಿಪಿ, ಟಿಎಸ್‌ಪಿ ಶೇ.25 ಅನುದಾನದ ಜತೆಗೆ ವಿದ್ಯಾರ್ಥಿ ವೇತನ ಸೂಕ್ತ ಸಮಯಕ್ಕೆ ನೀಡುತ್ತಿಲ್ಲ. ಲ್ಯಾಪ್‌ಟಾಪ್‌, ಹನಿ ನೀರಾವರಿಗೆ ಅನುದಾನ ಸ್ಥಗಿತ ಗೊಳಿಸಲಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಪರಿಶಿಷ್ಟರು, ಶೋಷಿತರ ವಿರುದ್ದ ದೌರ್ಜನ್ಯ ಹೆಚ್ಚಾಗಿದೆ. ಆರೋಪಿ ಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಬದಲು ಹಾರಹಾಕಿ ಚುನಾವಣೆಯಲ್ಲಿ ರ್ಸ್ಪಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ದೂರಿದರು.

ಮೀಸಲಾತಿ ಜಾರಿಗೊಳಿಸುವ ಪರಮಾಕಾರ ಕೇಂದ್ರದ ವ್ಯಾಪ್ತಿ ಗೊಳಪಟ್ಟಿದ್ದು ಇದೀಗ ಚುನಾ ವಣೆಯ ಹಿನ್ನಲೆಯಲ್ಲಿ ಒಳಮೀಸ ಲಾತಿ ಜಾರಿ ನೆಪದಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ ಒಳಮೀಸಲಾತಿ ಬಗ್ಗೆ ಪರಿ ಪೂರ್ಣ ವಲ್ಲದ ನ್ಯಾ. ನಾಗಮೋಹನ್‌ ದಾಸ್‌ ಹಾಗೂ ರವಿವರ್ಮ ನೀಡಿದ ವರದಿಯನ್ನು ಅಂಗೀಕರಿಸಿ ಬಣಜಾರ್‌, ಭೋವಿ, ಕೊರಮ, ಕೊರಚ ಸಮುದಾಯಕ್ಕೆ ದ್ರೋಹ ಬಗೆಯಲಾಗಿದೆ. ಮುಸ್ಲಿಂರ ಮೀಸಲಾತಿಯನ್ನು ಕಿತ್ತುಕೊಂಡು ಇತರೆ ಹಿಂದುಳಿದವರಿಗೆ ನೀಡುವ ಸರ್ಕಾರದ ನಿರ್ಧಾರ ಮುಸ್ಲಿಂ ಹಾಗೂ ಹಿಂದುಗಳಲ್ಲಿ ವೈರತ್ವ ಬೆಳೆಸಿ ಮತಗಳಿಸುವ ಹುನ್ನಾರ ವಾಗಿದೆ ಎಂದು ಆರೋಪಿಸಿದರು.

ಮೀಸಲಾತಿ ಜತೆಗೆ ತಾಲೂಕಿ ನಾದ್ಯಂತ ಕೈಗೊಂಡ ಅಭಿವೃದ್ದಿ ಕಾಮಗಾರಿಗಳ ಆಧಾರದಲ್ಲಿ ಮತಯಾಚಿಸುವುದನ್ನು ಬಿಟ್ಟು ಬಿಜೆಪಿ ಹೇರಳವಾಗಿ ಸಂಪಾದಿಸಿದ ಅಕ್ರಮ ಹಣವನ್ನು ಹಂಚಿ ಚುನಾವಣೆಯಲ್ಲಿ ಗೆಲ್ಲುವ ಏಕೈಕ ಗುರಿಯನ್ನು ಹೊಂದಿದೆ ಈ ದಿಸೆ ಯಲ್ಲಿ ಈಗಾಗಲೇ ಯಡಿಯೂ ರಪ್ಪ ನವರ ಸಮ್ಮುಖದಲ್ಲಿ ಅವರ ಖಾಸಗಿ ಕುಮದ್ವತಿ ಕಾಲೇಜಿನಲ್ಲಿ ಸಭೆಯ ಅನುಮತಿ ಪಡೆದು ಎಲ್ಲ ವರ್ಗದ ಜನತೆಯನ್ನು ಪ್ರತ್ಯೇಕ ವಾಗಿ ಆಹ್ವಾನಿಸಿ ಹಣ ಹಂಚಲಾ ಗುತ್ತಿದೆ ಈ ಬಗ್ಗೆ  ಚುನಾವಣಾಕಾರಿ, ಜಿಲ್ಲಾಕಾರಿಗಳಿಗೆ ದೂರು ನೀಡಲಾಗಿದೆ ಎಂದರು. ಬಿಜೆಪಿ ಯ ಆಮಿಷಗಳಿಗೆ ಬಲಿಯಾಗದೆ ಸರ್ಕಾರದ ಸೌಲಭ್ಯವನ್ನು ಪ್ರಾಮಾ ಣಿಕವಾಗಿ ಪಡೆ ಯಲು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ನಾಗರಾಜ ಗೌಡರನ್ನು ಬೆಂಬಲಿಸಿ ಎಂದು ಮನವಿ ಮಾಡಿದ ಅವರು, ಸಾಗು ವಳಿದಾರರ 10 ಸಾವಿರಕ್ಕಿಂತ ಅಕ ಅರ್ಜಿ ವಿಲೇಯಾಗದೆ ಬಾಕಿ ಯುಳಿದಿದ್ದು ನಿವೇಶನ, ಮನೆ, ಉದ್ಯೋಗ ಮತ್ತಿತರ ಸೌಲಭ್ಯ ಪಡೆಯಲು ಪ.ಜಾತಿ/ಪಂಗಡದ ಮತದಾರರು ಜಾಗ್ರತೆಯಿಂದ ಮ ತಚಲಾಯಿಸುವಂತೆ ತಿಳಿಸಿದರು.

 ಜಿಲ್ಲಾ ಕಾಂಗ್ರೆಸ್‌ ಎಸ್ಟಿ ಮೋರ್ಚಾ ಅಧ್ಯಕ್ಷ ವೀರೇಶ್‌ ಜೋಗೀಹಳ್ಳಿ ಮಾತನಾಡಿ,  ವಾಲ್ಮೀಕಿ ಸಮಾಜದ ಸ್ವಾಮೀಜಿ ಮೀಸಲಾತಿ ಹೆಚ್ಚಳಕ್ಕಾಗಿ ಸತತ 200 ದಿನ ಧರಣಿ ಸತ್ಯಾಗ್ರಹ ಹಮ್ಮಿಕೊಂಡಾಗ ಧಾವಿಸಿ ಬೆಂಬಲಿಸದ ನಟ ಸುದೀಪ್‌ ಇದೀಗ ಬಿಜೆಪಿಗೆ ಮತಕೇಳುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಟೀಕಿಸಿ, ಹಣ ಹಂಚಿ ಗೆಲ್ಲುವ ಭ್ರಮೆಯಲ್ಲಿರುವ ಬಿಜೆಪಿ ಮುಖಂಡರಿಗೆ ಈ ಬಾರಿ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಗ್ರಾ.ಪಂ ಮಾಜಿ ಸದಸ್ಯ ಸುರೇಶ್‌ ಭದ್ರಾ ಪುರ, ಬಣಜಾರ್‌ ಸಮಾಜದ ಭೀಮಾ ನಾಯ್ಕ, ಎಸ್ಸಿ ಸಮಾಜದ ನಾಗರಾಜ ಉಪಸ್ಥಿತರಿದ್ದರು.