ಜಿಲ್ಲಾ ಸುದ್ದಿ

ಶಿವಮೊಗ್ಗ ಗ್ರಾಮಾಂತರದಲ್ಲೂ ಬಂಡಾಯ ಏಳುವ ಸಾಧ್ಯತೆಯನ್ನ ತಳ್ಳಿಹಾಕುವ ಹಾಗೆ ಇಲ್ಲ: ಧೀರಾಜ್ ಹೊನ್ನವಿಲೆ

ಶಿವಮೊಗ್ಗ : ಭೋವಿ ಸಮಾ ಜವನ್ನು ಎರಡೂ ರಾಷ್ಟ್ರೀಯ ಪಕ್ಷ ಗಳು ಕಡೆಗಣಿಸುತ್ತಿದ್ದು, ಕೊನೆಯ ಕ್ಷಣದಲ್ಲಾದರೂ ಭೋವಿ ಸಮಾ ಜದ ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಆಗಲಿ, ಬಿಜೆಪಿಯಾಗಲಿ ಪ್ರಾತಿ ನಿಧ್ಯ ನೀಡಬೇಕು ಎಂದು ಭೋವಿ ಸಮಾಜದ ಮುಖಂಡರು ಆಗ್ರಹಿ ಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಬೋವಿ ಸಮಾಜದ ಮುಖಂಡ ೕರರಾಜ್‌ ಹೊನ್ನ ವಿಲೆ, ಬೋವಿ ಸಮಾಜವನ್ನು ಎರಡೂ ರಾಷ್ಟೀಯ ಪಕ್ಷಗಳು ನಿರ್ಲಕ್ಷ್ಯ ಮಾಡುತ್ತಿವೆ. ರಾಜ ಕೀಯ ಪ್ರಾತಿನಿಧ್ಯ ನೀಡದೆ ಅನ್ಯಾ ಯ ಮಾಡಲಾಗಿದೆ ಎಂದರು.

ಕಳೆದ ಬಾರಿ ಬಿಜೆಪಿಯಿಂದ 9 ಕ್ಷೇತ್ರ ನೀಡಲಾಗಿತ್ತು. 5ರಲ್ಲಿ ಗೆಲ್ಲ ಲಾಗಿತ್ತು. ಕಾಂಗ್ರೆಸ್‌ನಿಂದ 7 ಕ್ಷೇತ್ರಕ್ಕೆ ನೀಡಲಾಗಿತ್ತು. 3ರಲ್ಲಿ ಗೆಲ್ಲ ಲಾಗಿತ್ತು. ಸಮಾಜದ ನಾಯಕ ರಾದ ಗೂಳಿಹಟ್ಟಿ ಶೇಖರ್‌, ಅರವಿಂದ ಲಿಂಬಾವಳಿ, ಸುನಿಲ್‌ ಹುಲಿಗಪ್ಪ ಲಿಂಗಸೂಗೂರು ಗೆದ್ದಿ ದ್ದರು. ಈಗ ಅಖಂಡ ಶ್ರೀನಿ ವಾಸ ಮೂರ್ತಿ,  ಗೂಳಿಹಟ್ಟಿ ಶೇಖರ್‌ ಅರವಿಂದ ಲಿಂಬಾವಳಿ ಕೈತಪ್ಪಿ ಸಲಾಗಿದೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಸಮಾಜದ ಒಂದೂಕಾಲು ಲಕ್ಷ ಮತದಾರರಿದ್ದಾರೆ. ಯಾವ ಪಕ್ಷ ನಮಗೆ ಪ್ರಾತಿನಿಧ್ಯ ನೀಡುತ್ತ ದೆಯೋ ಆ ಕಡೆ ಗಮನ ಹರಿಸಲಾ ಗುತ್ತದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಬರಲು ಭೋವಿ ಸಮಾ ಜದ ಕೊಡುಗೆ ಇದೆ. ಕಾಂಗ್ರೆಸ್‌ ನಿಂದಲಾದರೂ ಭೋವಿ ಸಮಾಜಕ್ಕೆ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿದರು.

ಮತ್ತೋರ್ವ ಮುಖಂಡ ವೀರಭದ್ರಪ್ಪ ಪೂಜಾರ್‌ ಮಾತ ನಾಡಿ, ಬಿ.ಎಸ್‌. ಯಡಿಯೂರಪ್ಪ ನವರು ಸರ್ವರಿಗೂ ಸಮಪಾಲು, ಸಮಬಾಳು ಎಂದಿದ್ದರು. ಆದರೆ ಈಗ ಈ ಸಮಪಾಲು, ಸಮ ಬಾಳು ಸಾಧ್ಯವಾಗುತ್ತಿಲ್ಲ. ಯಡಿ ಯೂರಪ್ಪ ನವರನ್ನು ಸಹ ದಿಕ್ಕುತ ಪ್ಪಿಸುವ ಕೆಲಸ ನಡೆಯುತ್ತಿದೆ. ಇದರ ಹಿಂದೆ ಬೇರೆಯೇ ಶಕ್ತಿ ಇರಬಹುದು ಎಂದರು.

ಅಕಾರಕ್ಕೆ ಬರಲು ಸಹಾಯ ಮಾಡಿದ ಸಮಾಜದ ಕೈ ಹಿಡಿಯ ಬೇಕಿತ್ತು. ಆದರೆ ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ಮಾಡುತ್ತಿವೆ. ಪಕ್ಷದ ನಿಷ್ಠೆಯಲ್ಲಿ ನಾನೂ ಕೂಡ ರಘುಪತಿ ಭಟ್ಟರಂತೆ ಹೇಳುತ್ತೇನೆ. ನಿಷ್ಠೆಯಿಂದ ಕೆಲಸ ಮಾಡಿ ಮೇಲೆ ಬಂದಿದ್ದೇವೆ. ಬಸವಣ್ಯಪ್ಪ ನಂತರ ಯಾರಿಗೂ ಪ್ರಾತಿನಿಧ್ಯ ಸಿಗುತ್ತಿಲ್ಲ. ನಾವು ಕಟ್ಟಡ ಕಟ್ಟುವವರೇ ಹೊರತು ಕಟ್ಟಡಕ್ಕೆ ಕಲ್ಲು ಹೊಡೆಯುವವರಲ್ಲ. ನಮ್ಮ ಸಮಾಜಕ್ಕೆ ಪ್ರಾತಿನಿಧ್ಯ ತಪ್ಪಿಸುವ ಕೆಲಸ ಮಾಡಬಾರದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಾ ಜದ ಮುಖಂಡರಾದ ರಾಮ ಕೃಷ್ಣಪ್ಪ, ಲೋಕೇಶ್‌, ತಿಮ್ಮ ರಾಜು, ಲಿಂಗರಾಜ್‌, ರಘು, ಚಂದ್ರಣ್ಣ, ಇನ್ನಿತರರು ಉಪಸ್ಥಿ ತರಿದ್ದರು.