ಜಿಲ್ಲಾ ಸುದ್ದಿ

ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ

ಸಾಗರ : ರಾಜ್ಯದಲ್ಲಿ ಈ ಬಾರಿ ಪುನಾ ಬಿಜೆಪಿ ಅಕಾರಕ್ಕೆ ಬರುವುದು ನಿಶ್ಚಿತ ಎಂದು ಶಾಸಕ ಹಾಗೂ ಸಾಗರ ವಿಧಾನಸಭಾ ಬಿಜೆಪಿ ಅಭ್ಯರ್ಥಿ ಎಚ್‌.ಹಾಲಪ್ಪ ಹರತಾಳು ಹೇಳಿದರು.

ತಾಲ್ಲೂಕಿನ ಕರೂರು ಹೋಬ ಳಿಯ ವಿವಿಧ ಪ್ರದೇಶಗಳಲ್ಲಿ ಗುರುವಾರ ಚುನಾವಣಾ ಪ್ರಚಾರ ಸಭೆ ನಡೆಸಿ, ಮತದಾರರನ್ನು ಭೇಟಿಯಾಗಿ ಚದುರವಳ್ಳಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿ, ದೇಶ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಕಾರದಲ್ಲಿದ್ದರೆ ಕ್ಷೇತ್ರದ ಅಭಿವೃದ್ಧಿ ಮಾಡಲು ಅನುಕೂಲವಾಗುತ್ತದೆ ಎಂದರು.

ಕಳಸವಳ್ಳಿ-ಅಂಬಾರಗೊಡ್ಲು ಸೇತುವೆ ಮಂಜೂರಾತಿ ಬಗ್ಗೆ ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಅಂದು ಕರ್ನಾಟಕ ವಿದ್ಯುತ್‌ ನಿಗಮದವರು ನಿರಾಪೇಕ್ಷಣ ಪತ್ರ ನೀಡಲು ಮಿನಾಮೇಷ ಎಣಿಸಿದಾಗ ಕಛೇರಿಯ ಎದುರಿನಲ್ಲೇ ಧರಣಿ ಮಾಡಿ ನಿರಾಪೇಕ್ಷಣ ಪತ್ರ ಪಡೆದು ಮಂಜೂರಾತಿಗೆ ಸಹಕರಿಸಿದ್ದೇನೆ. ಸೇತುವೆ ಬಗ್ಗೆ ಕರೂರು ಹೋಬಳಿ ಯವರು ಸಂಘಟಿಸಿದ ಪಾದ ಯಾತ್ರೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಿದ್ದೇನೆ ಎಂದರು.

ಮಲೆನಾಡಿನ ಭಾಗದಲ್ಲಿ ಕಾಲುಸಂಕದಂತಹ (ಕಿರು ಸೇತು ವೆ) ಯೋಜನೆಗಳನ್ನು ಮಂಜೂ ರು ಮಾಡಿಸಲು ವಿಧಾನಸಭೆಯಲ್ಲಿ ಧ್ವನಿಯೆತ್ತಿ ಸಾಗರ ಕ್ಷೇತ್ರದಲ್ಲಿ 139 ಕ್ಕೂ ಹೆಚ್ಚು ಕಿರು ಸೇತುವೆಯನ್ನು ಮಾಡಿಸಿರುತ್ತೇನೆ. ಒಂದಿಷ್ಟು ಅಭಿ ವೃದ್ಧಿ ಕಾರ್ಯಕ್ಕೆ ಚಾಲನೆ ಸಿಕ್ಕಿದೆ ಅದನ್ನು ಮುಂದುವರೆಸಲು ಮ ತ್ತೊಮ್ಮೆ ಆಶೀರ್ವದಿಸಿ ಎಂದರು.

ಡಾ. ರಾಜನಂದಿನಿ ಕಾಗೋ ಡು ಮಾತನಾಡಿ, ಸಾಗರ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ಹಾಲಪ್ಪ ನವರ ಚಿಂತನೆ. ಅವರ ಅಧ್ಯಯ ನಶೀಲತೆ, ಜನಪರ ಕಾಳಜಿ ಹಾಗೂ ಕ್ಷೇತ್ರಕ್ಕೆ ತಂದಿರುವ ಅನುದಾನ ಅವರ ಬೆಂಬಲಕ್ಕೆ ನಿಲ್ಲುತ್ತದೆ. ಈ ಬಾರಿ ಅತಿ ಹೆಚ್ಚು ಮತಗಳ ಅಂತರ ದಿಂದ ಹಾಲಪ್ಪನವರನ್ನು ಬೆಂಬಲಿಸಿ ಜಯ ಗಳಿಸಿಕೊಡಬೇಕೇಂದು ಮನವಿ ಮಾಡಿದರು.

ಶಾಸಕರು ಸಿಗಂದೂರು, ಗುಮಗೋಡು, ಚುಟ್ಟಿಕೆರೆ, ಮಾರ ಳಗೋಡು, ಕಳೂರು, ಬೆಳಮಕ್ಕಿ, ಶಿಗ್ಲು, ಬೆಳಮಕ್ಕಿ, ಇರಂ ದೂರು ಭಾಗಗಳಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದರು. ಇದೇ ಸಂದರ್ಭ ದಲ್ಲಿ ಬಿಜೆಪಿ ಸಿದ್ಧಾಂತ ಮತ್ತು ಶಾಸಕರ ಅಭಿವೃದ್ಧಿ ಕಾರ್ಯ ಮೆಚ್ಚಿ ವಿವಿಧ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಾದ ರಾಜಪ್ಪ, ನೀಲನಾಯ್‌್ಕ, ಪದ್ಮರಾಜ್‌, ಮಲ್ಲೇಶ್‌, ಶ್ರೀಧರ್‌, ರಾಮ ನಾಯ್ಕ್, ಗಣಪತಿ ಸೀಗೆಮಕ್ಕಿ, ಪದ್ಮರಾಜ್‌ ಹೆಸಿಗೆ, ಮಂಜಪ್ಪ ತಲ್ಲೆ, ಅಶೋಕ್‌ ತಲ್ಲೆ, ನಾಗಪ್ಪ ತಲ್ಲೆ, ಉದಯ ನೀಡಗೋಡು, ಉಮೇಶ್‌ ಮತ್ತು ರಾಘವೇಂದ್ರ ಮುಂತಾದವರು ಬಿಜೆಪಿ ಸೇರಿ ದರು. ಈ ಸಂದರ್ಭದಲ್ಲಿ ಆವಿನಹಳ್ಳಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಸುಧೀಂದ್ರ ಹೊಸಕೊಪ್ಪ, ಕುದರೂರು ಗ್ರಾ.ಪಂ. ಅಧ್ಯಕ್ಷ ನಾಗರಾಜ್‌ ಬೊಬ್ಬಿಗೆ, ಅಲ್ಪಸಂಖ್ಯಾತ ಮುಖಂಡ ಮಂಜಯ್ಯ ಜೈನ್‌, ಮಾಜಿ ಗ್ರಾ.ಪಂ. ಸದಸ್ಯ ಲೋಕರಾಜ್‌ ಒಳಗೆರೆ, ಪಕ್ಷದ ಮುಖಂಡರು, ಶಕ್ತಿಕೇಂದ್ರ ಪ್ರಮುಖರು, ಬೂತ್‌ ಸಮಿತಿ ಅಧ್ಯಕ್ಷರು ಇದ್ದರು.