ಜಿಲ್ಲಾ ಸುದ್ದಿ

ಬಿಜೆಪಿ ಸಂಘಟನಾತ್ಮಕವಾಗಿ ಪ್ರಬಲವಾಗಿದೆ ಶಿವಮೊಗ್ಗದಲ್ಲಿ ಗೆಲುವಿಗೆ ಪೂರಕ ವಾತಾವರಣವಿದೆ

ಶಿವಮೊಗ್ಗ: ಸಂಘಟನೆ ಮತ್ತು ಈಶ್ವರಪ್ಪ ಅವರ ಮಾರ್ಗದರ್ಶನ ದಲ್ಲಿ ಗೆದ್ದು ಅವರ ಆಶೀರ್ವಾದ ಪಡೆದು ಸಂಘಟನೆಯ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ನಗರದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ನಗರದ ನಾಗರಿಕರು ಬಿಜೆಪಿ ಬಗ್ಗೆ ಅಪೇಕ್ಷೆ ಹೊಂದಿದ್ದಾರೆ  ಎಂದು ಪಕ್ಷದ ಅಭ್ಯರ್ಥಿ ಎಸ್‌.ಎನ್‌. ಚನ್ನಬಸಪ್ಪ ಹೇಳಿದರು.

ಅವರು  ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಮೀಡಿಯಾ ಹೌಸ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಸಂಘಟನೆಯೇ ಶಕ್ತಿ. ಬಿಜೆಪಿ ಸಂಘಟನಾತ್ಮಕವಾಗಿ ಪ್ರಬಲವಾ ಗಿದ್ದು, ಶಿವಮೊಗ್ಗದಲ್ಲಿ ಗೆಲುವಿಗೆ ಪೂರಕ ವಾತಾವರಣವಿದೆ ಎಂದರು.

ಬಿಜೆಪಿ ಕಾರ್ಯಕರ್ತನಾದ ನನಗೆ ಪಕ್ಷ ಸ್ಪರ್ಧೆಗೆ ಅವಕಾಶ ನೀಡಿದೆ. ಯಡಿಯೂರಪ್ಪ, ಈಶ್ವರಪ್ಪ, ಮೇಲ್ಪಂಕ್ತಿ ಹಾಕಿದ್ದಾರೆ. 1980ರ ದಶಕದಿಂದ ಶಿವಮೊಗ್ಗ ಶಾಸಕರಾಗಿ ಈಶ್ವರ್ಪಪ್ಪ ಕೆಲಸ ಮಾಡಿದ್ದಾರೆ. ನಾನು ಕಾರ್ಯ ಕರ್ತನಾಗಿ ಕೆಲಸ ಮಾಡಿದ್ದೇನೆ. ಅವರು ನನ್ನನ್ನು ಬೆಳೆಸಿದ್ದಾರೆ ಎಂದರು.

ದೇಶ ಮೊದಲು ಎನ್ನುವ ಪಕ್ಷ ನಮ್ಮದು. ಸರ್ವೆ ಆಧರಿಸಿ ನನಗೆ ಟಿಕೆಟ್‌ ನೀಡಲಾಗಿದೆ. ನಾನು ಟಿಕೆಟ್‌ ಹಿಂದೆ ಹೋದವನಲ್ಲ. ನಾನು ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡಿದ್ದೇನೆಯೇ ಹೊರತು ರೇಸ್‌ನಲ್ಲಿ ಇರಲಿಲ್ಲ. ಪಕ್ಷದ ಮುಖಂಡರು ಪಕ್ಷ ಬಿಟ್ಟು ಹೋಗಬಹುದು. ಆದರೆ ಬಿಜೆಪಿ ಕಾರ್ಯಕರ್ತರ ಪಕ್ಷ. ಕಾರ್ಯಕರ್ತರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದರು.

ನಾವು ಎಂದೂ ಕೂಡ ಅಶಾಂತಿ ನಿರ್ಮಾಣಕ್ಕೆ ಕಾರಣ ರಾಗಿಲ್ಲ. ಆ ರೀತಿ ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ಹೋರಾಟ ನಡೆಸಿದ್ದೇವೆ. ನಮ್ಮಿಂದ ಎಂದೂ ಕೂಡ ಗಲಭೆ ಆರಂಭವಾಗಿಲ್ಲ. ಗಲಭೆ ನಡೆದ ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ಚನ್ನಬಸಪ್ಪ ಹೇಳಿದರು.

ಈ ಸಂದರ್ಭದಲ್ಲಿ ಕೆಯುಡಬ್ಲ್ಯುಜೆಎ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್‌, ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್‌ ಇದ್ದರು.

ಮತದಾನ ಪ್ರಮಾಣ ಹೆಚ್ಚಿಸುವುದಕ್ಕಾಗಿ ಸ್ವೀಪ್‌ ಎಕ್ಸ್ ಪ್ರೆಸ್‌ ಬಸ್‌-ಜಾಗೃತಿ

ಶಿವಮೊಗ್ಗ: ಜನರಲ್ಲಿ ಇವಿಎಂ/ವಿವಿಪ್ಯಾಟ್‌ ಸೇರಿದಂತೆ ಮತದಾನ ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸುವುದು ಹಾಗೂ ಮತದಾನ ಪ್ರಮಾಣ ಹೆಚ್ಚಿಸು ವುದು ಈ ಸ್ವೀಪ್‌ ಎಕ್ಸ್ ಪ್ರೆಸ್‌ ಬಸ್‌ ಸಂಚಾರದ ಮುಖ್ಯ ಉದ್ದೇಶವಾ ಗಿದೆ ಎಂದು ಜಿಲ್ಲಾಕಾರಿ ಡಾ. ಸೆಲ್ವಮಣಿ .ಆರ್‌ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ಮತ್ತು ಶಿವಮೊಗ್ಗ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮದಡಿಯಲ್ಲಿ   ಜಿಲ್ಲಾ ಪಂಚಾಯತ್‌ ಆವರಣದಲ್ಲಿ ಸ್ವೀಪ್‌ ಎಕ್ಸ್ ಪ್ರೆಸ್‌ ಬಸ್‌ ಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಈ ಹಿಂದೆ ಉತ್ತಮವಾಗಿ ಮತದಾನ ಆಗಿದೆ. ಆದರೆ ನಗರ ಪ್ರದೇಶದಲ್ಲಿ ಕಡಿಮೆ ಮತದಾನ ಆಗಿದ್ದು, ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್‌ ವತಿಯಿಂದ ಅನೇಕ ಉತ್ತಮ ಕಾರ್ಯ ಚಟುವಟಿ ಕೆಗಳು ನಡೆಯುತ್ತಿವೆ. ಕಳೆದ ಬಾರಿಗಿಂತ ಶೇ.10 ರಷ್ಟಾದರೂ ಮತದಾನ ಪ್ರಮಾಣ ಹೆಚ್ಚಬೇಕು. ಈ ಎಕ್ಸ್ ಪ್ರೆಸ್‌ ಬಸ್‌ ಜಿಲ್ಲಾದ್ಯಂತ ಕಡಿಮೆ ಮತದಾನ ಆದ ಸ್ಥಳಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸ ಲಿದೆ. ಮೇ 09 ರವರೆಗೆ ಸಂಚರಿಸಿ ಮತದಾನ ಕುರಿತು ಜಾಗೃತಿ ಮೂಡಿಸಬೇಕೆಂದರು.

ಸ್ವೀಪ್‌ ಎಕ್ಸ್ ಪ್ರೆಸ್‌ ಬಸ್‌ ಒಳಗೆ ಮಾದರಿ ಮತದಾನ ಕೇಂದ್ರ, ಮತದಾನ ಕೇಂದ್ರಗಳಲ್ಲಿನ ಮೂಲಭೂತ ಸೌಕರ್ಯ ಗಳು, ಇವಿಎಂ/ವಿವಿಪ್ಯಾಟ್‌  ಪ್ರತಿಕೃತಿಗಳು ಹಾಗು ಮತದಾನ ಜಾಗೃತಿ ಬಿತ್ತಿ ಚಿತ್ರಗಳಿವೆ. ಬಸ್‌ ಹೊರಮೈಯಲ್ಲಿ ಸಿವಿಜಿಲ್‌ ಆ್ಯಪ್‌ , 1950 ಟಾಲ್‌ಫ್ರೀ ಸಂಖ್ಯೆ, ವೋಟರ್‌ ಹೆಲ್ಪ್ ಲೈನ್‌ ಪೋರ್ಟಲ್‌ ಹಾಗೂ ಸ್ವೀಪ್‌ ಕುರಿತು ಮಾಹಿತಿ ಇದೆ. ಜಿಲ್ಲಾಕಾರಿ, ಜಿಲ್ಲಾ ಪೊಲೀಸ್‌ ವರಿಷ್ಟಾಕಾರಿ, ಜಿ.ಪಂ. ಸಿಇಓ, ಪಾಲಿಕೆ ಆಯು ಕ್ತರು ಸೇರಿದಂತೆ ಅಕಾರಿಗಳು ಬಸ್‌ ಒಳಗಿನ ಮತದಾನ ಕೇಂದ್ರ ದಲ್ಲಿ ಕುಳಿತು ಪರಿವೀಕ್ಷಿಸಿದರು.

ಜಿಲ್ಲಾ ಪಂಚಾಯತ್‌ ಸಿಇಓ ಸ್ನೇಹಲ್‌ ಸುಧಾಕರ್‌ ಲೋಖಂಡೆ ಮಾತನಾಡಿ, ಮತದಾನ ಕುರಿತು ಜಾಗೃತಿ ಮೂಡಿಸಿ ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಈ ಸ್ವೀಪ್‌ ಎಕ್ಸ್ ಪ್ರೆಸ್‌ ಬಸ್‌ ಸಂಚಾರ ಆರಂಭಿಸಲಾಗಿದೆ. ಕಡಿಮೆ ಮತದಾನ ಆದ ಪ್ರದೇಶ ಗಳಿಗೆ ಇದು ಭೇಟಿ ನೀಡಿ ಮತದಾನ ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸುವುದು. ಹಾಗೂ ಚುನಾವಣಾ ಅಕ್ರಮ ತಡೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಕುರಿತು, ಸಿವಿಜಿಲ್‌ ಆ?ಯಪ್‌ ಕುರಿತು ಮಾಹಿತಿ ನೀಡಲಿದ್ದು, ಸಾರ್ವಜನಿಕರು ಇದರ ಸದು ಪಯೋಗ ಪಡೆಯಬೇಕೆಂದರು.

ಶಿವಮೊಗ್ಗ ನಗರ ಸೇರಿದಂತೆ, ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರ ಮತ್ತು ಜನ ಸಾಂದ್ರತೆ ಹೆಚ್ಚಿರುವ ಪ್ರದೇಶಗಳಿಗೆ ದಿನಾಂಕ:25/04/2023 ರಿಂದ 02/05/2023 ರ ವರೆಗೆ, ಭೇಟಿನೀಡಿ ಮತದಾನ ಜಾಗೃತಿ ಮೂಡಿಸಲಿದೆ.

   ಇಂದು ಈ ಬಸ್‌ ಕುವೆಂಪು ಪ್ರತಿಷ್ಟಾನ ಬಿ.ಎಡ್‌ ಕಾಲೇಜ್‌, ನ್ಯಾಷನಲ್‌ ಕಾಲೇಜ್‌, ಡಿವಿಎಸ್‌ ಕಾಲೇಜ್‌, ಸಹ್ಯಾದ್ರಿ ಕಾಲೇಜ್‌ ಮಾರ್ಗವಾಗಿ ಸಾಗಿ ಒಡ್ಡಿನಕೊಪ್ಪ, ಓಲ್ಡ್ ಮಂಡ್ಲಿ, ಗೋಪಾಳ, ಅಶೋಕನಗರ, ಗಾಡಿಕೊಪ್ಪ, ಶಾಂತಿನಗರ, ರಾಜೇಂದ್ರನಗರ, ರವೀಂದ್ರ ನಗರ, ಬಸವನಗುಡಿಗೆ ಬಂದು ತಲುಪಿ ಅಲ್ಲಿಂದ ಜಿಲ್ಲಾ ಪಂಚಾಯ್ತಿಗೆ ಆಗಮಿಸಲಿದೆ.

     ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಪ್ರೊಬೇಷನರಿ ಐಎಎಸ್‌ ಅಕಾರಿ ದಲ್ಜೀತ್‌ ಕುಮಾರ್‌, ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ, ಸ್ವೀಪ್‌ ನೋಡಲ್‌ ಅಕಾರಿ ಶ್ರೀಕಾಂತ್‌ ಸೇರಿದಂತೆ ಅಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.