ಶಿವಮೊಗ್ಗಶಿವಮೊಗ್ಗ ನಗರ

ಬಿಜೆಪಿ ಒಕ್ಕಲೆಬ್ಬಿಸುವುದರ ಮೂಲಕ ನೀಚ ಪ್ರವೃತ್ತಿ ಹಾಗೂ ರೈತ ವಿರೋಯಾಗಿದೆ;ರೈತರ ಹಿತರಕ್ಷಣೆ ಕಾಪಾಡುವಲ್ಲಿ ವಿಫಲ

ಶಿವಮೊಗ್ಗ: ಸೊರಬ ತಾಲ್ಲೂಕು ಕುಪ್ಪಗಡ್ಡೆ ತಾಳಗುಪ್ಪ ಗ್ರಾಮದ ಸರ್ವೆ ನಂ. 20ರಲ್ಲಿ 6 ಕುಟುಂಬಗಳನ್ನು ಅರಣ್ಯಾಕಾರಿಗಳು ಸೋಮವಾರ ಒಕ್ಕಲೆ ಬ್ಬಿಸಿ ಸುಮಾರು 20 ಎಕರೆ ಸಲು ಬಂದ ತೋಟವನ್ನು ನಾಶ ಮಾಡಿ ಸುತ್ತಲೂ ಟ್ರಂಚ್‌ ಹಾಕಿ ಅರಣ್ಯ ಭೂಮಿಯೆಂದು ಘೋಷಣೆ ಮಾಡಿರುವುದಕ್ಕೆ ಕಾಂಗ್ರೆಸ್‌ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಪಾಲಿಕೆ ಸದಸ್ಯ ಬಿ.ಎ.ರಮೇಶ್‌ ಹೆಗ್ಡೆ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅರಣ್ಯ ಭೂಮಿ ಸಾಗುವಳಿದಾರ ರಿಗೆ ಒಕ್ಕಲೆಬ್ಬಿಸುವುದಿಲ್ಲ ಎಂದು ಕಳೆದ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಭರವಸೆ ನೀಡಿತ್ತು. ಮಾಜಿ ಸಿಎಂ ಬಿ.ಎಸ್‌ .ಯಡಿಯೂರಪ್ಪ ನವರು ಸಹ ಯಾವುದೇ ಕಾರಣ ಕ್ಕೂ ಅರಣ್ಯ ಭೂಮಿ ಸಾಗುವಳಿ ದಾರರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ಈಗ ಈ ಬಡ ರೈತ ಕುಟುಂ ಬಗಳನ್ನು ನಿನ್ನೆ ಒಕ್ಕಲೆಬ್ಬಿಸಿದ್ದಾರೆ ಎಂದು ದೂರಿದರು.

ತಾಳಗುಪ್ಪದ ಸರ್ವೆ ನಂ.20 ರಲ್ಲಿ ಸುಮಾರು 6 ಕುಟುಂಬಗಳು ತೋಟ ಮಾಡಿಕೊಂಡಿದ್ದಾರೆ. ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಇವರ ಹೆಸರಿನಲ್ಲಿ ದಾಖಲೆಗಳೂ ಇವೆ. ಸಾಗುವಳಿದಾರರನ್ನು ಒಕ್ಕಲೆ ಬ್ಬಿಸದಂತೆ ಸುಮಾರು 8 ಕಾಯ್ದೆ ಗಳು ಜೀವಂತವಾಗಿವೆ. ಅದರಲ್ಲಿ 1963ರ ಕಾಯ್ದೆ ಪ್ರಕಾರ ಇಬ್ಬರು ರೈತರನ್ನು ಒಕ್ಕಲೆಬ್ಬಿಸುವ ಹಾಗೆಯೇ ಇಲ್ಲ. ಇನ್ನುಳಿದ ನಾಲ್ಕು ರೈತರು ಅರ್ಜಿ ಹಾಕಿ ಕೊಂಡು ಕಾಯುತ್ತಿದ್ದಾರೆ. ಇವರ ಜೊತೆಗೆ 80 ಸಾವಿರ ಅರ್ಜಿಗಳಿವೆ. ಅವರೆಲ್ಲರನ್ನೂ ಬಿಟ್ಟು ಇವರಿಗೆ ಮಾತ್ರ ನೋಟೀಸ್‌ ನೀಡಿದ್ದಾರೆ ಹಾಗೂ ನಿನ್ನೆ ಪೊಲೀಸ್‌ ಭದ್ರತೆ ಹಾಗೂ ಯಂತ್ರೋಪಕರಣಗ ಳನ್ನು ಬಳಸಿ ಸಲಿರುವ 20 ಎಕರೆ ತೋಟವನ್ನು ನಾಶಮಾಡಿ ಈ ಕುಟುಂಬಗಳನ್ನು ಬೀದಿಗೆ ತಂದಿದ್ಧಾರೆ ಎಂದು ದೂರಿದರು.

ಈ ಹಿಂದೆಯೂ ಸುಮಾರು 41 ರೈತರನ್ನು ಒಕ್ಕಲೆಬ್ಬಿಸಿದ್ದರು. 110ಕ್ಕೂ ಹೆಚ್ಚು ಕೇಸ್‌ಗಳನ್ನು ಅರಣ್ಯ ಅಕಾರಿಗಳು ದಾಖಲಿಸಿ ದ್ದರು. ಸರ್ಕಾರದ ಮಾತನ್ನೇ ಅರಣ್ಯಾಕಾರಿಗಳು ನಿರ್ಲಕ್ಷ್ಯ ಮಾಡುತ್ತಾರೆ. ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪನವರು ನನ್ನ ಜೀವ ಇರುವತನಕ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಶಪಥ ಮಾಡಿದ್ದರು. ಆದರೆ, ಆ ಶಪಥ ಈಗ ಸುಳ್ಳಾಗಿದೆ ಎಂದರು.

ಬಗರ್‌ಹುಕುಂ ಸಾಗುವಳಿದಾ ರರನ್ನು ಒಕ್ಕಲೆಬ್ಬಿಸದಂತೆ ತಡೆಯ ಲು ಹಲವು ಕಾನೂನಿಗಳಿದ್ದರೂ ಅಕಾರಿಗಳು ದರ್ಪ ತೋರಿಸಿ ದ್ದಾರೆ. ರೈತರ ಪರವಾಗಿದೆ ಎಂದು ಹೇಳುತ್ತಲೇ ಬಂದಿರುವ ಬಿಜೆಪಿ ಒಕ್ಕಲೆಬ್ಬಿಸುವುದರ ಮೂಲಕ ನೀಚ ಪ್ರವೃತ್ತಿ ಹಾಗೂ ರೈತ ವಿರೋಯಾಗಿದೆ. ಹಾಗೂ ರೈತರ ಹಿತ ರಕ್ಷಣೆ ಕಾಪಾಡುವಲ್ಲಿ ವಿಲ ವಾಗಿದೆ ಎಂದರು.

ಸರ್ಕಾರ ಇದೇ ರೀತಿ ಅರಣ್ಯ ಭೂಮಿ ಸಾಗುವಳಿದಾರರಿಗೆ ಒಕ್ಕಲೆಬ್ಬಿಸುತ್ತಾ ಹೋದರೆ ಸೊರಬ ತಾಲ್ಲೂಕು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲೂ ಸಹ ಸಾಗು ವಳಿದಾರರನ್ನು ಒಕ್ಕಲೆಬ್ಬಿಸಲಾಗು ತ್ತದೆ. 2012ರಲ್ಲಿದ್ದ ಬಿಜೆಪಿ ಸರ್ಕಾರ ಒಕ್ಕಲೆಬ್ಬಿಸಲು ಪ್ರಯ ತ್ನಿಸಿತ್ತು. ವಿರೋಧ ವ್ಯಕ್ತವಾಗಿದ್ದರಿ ಂದ ಕೈಬಿಟ್ಟಿತ್ತು. ಆದರೆ ಈಗ ಮತ್ತೆ ಒಕ್ಕಲೆಬ್ಬಿಸುತ್ತಿದೆ. ಸ್ಥಳೀಯ ಶಾಸಕ ಕುಮಾರ್‌ ಬಂಗಾರಪ್ಪ ಈ ಬಗ್ಗೆ ಮಾತನಾಡಬೇಕು. ಇಲ್ಲದಿದ್ದರೆ ಚುನಾವಣೆಯಲ್ಲಿ  ಬಿಜೆಪಿಗೆ ತಕ್ಕ ಪಾಠ ಮತದಾರರು ಕಲಿಸಲಿದ್ದಾರೆ ಎಂದ ಅವರು, ಒಕ್ಕಲೆಬ್ಬಿಸುವು ದನ್ನು ವಿರೋಸಿ ಮುಂದಿನ ದಿನದಲ್ಲಿ ಪಕ್ಷದಿಂದ ಉಗ್ರ ಹೋ ರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎನ್‌.ರಮೇಶ್‌, ಪ್ರಮುಖರಾದ ಧರ್ಮರಾಜ್‌, ವಿಜಯ್‌ ಕು ಮಾರ್‌, ಸಿ.ಎಸ್‌.ಚಂದ್ರ ಭೂಪಾ ಲ್‌, ಗಣಪತಿ, ಎಂ.ಡಿ.ಶೇಖರ್‌, ಭೀಮಪ್ಪ ಉಪಸ್ಥಿತರಿದ್ದರು.