ತಾಜಾ ಸುದ್ದಿ

ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವಕ್ಕೆ ವಿಜೃಂಭಣೆಯ ಚಾಲನೆ

ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವಕ್ಕೆ ವಿಜೃಂಭಣೆಯ ಚಾಲನೆ ನೀಡಲಾ ಯಿತು. ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ವರ್ಗದವರು, ಹಳೆಯ ವಿದ್ಯಾರ್ಥಿಗಳು ಈ ಸಮಾರಂಭಕ್ಕೆ ಸಾಕ್ಷಿಯಾದರು.
ಅಮೃತ ಮಹೋತ್ಸವದ ಅಂಗವಾಗಿ ಇಂದಿನಿಂದಲೇ ಕಾರ್ಯ ಕ್ರಮಗಳು ಆರಂಭವಾಗಿವೆ. ಪ್ರತಿ ಭಾ ಪುರಸ್ಕಾರ, ವಸ್ತು ಪ್ರದರ್ಶನ, ಮಲೆನಾಡು ವೈಭವದ ಹೆಸರಿನಲ್ಲಿ ದೇಸೀತನದ ಪರಿಚಯ ವನ್ನು ಸಂಸ್ಥೆ ಆಯೋಜಿಸಿತ್ತು. ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇ ಶಕ ಮಂಡಳಿ, ಶಾಲಾ ಕಾಲೇಜುಗಳ ಸಿಬ್ಬಂದಿವರ್ಗ, ಜಿಲ್ಲೆಯ ವಿವಿಧೆಡ ಇರುವ ಸಂಸ್ಥೆಗಳೂ ಸೇರಿದಂತೆ ಸುಮಾರು 35 ಸಂಸ್ಥೆಗಳ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಮೃತ ಮಹೋತ್ಸವದಲ್ಲಿ ಭಾಗಿಯಾಗಿ ದ್ದರು.
ಮಲೆನಾಡು ಉತ್ಸವದಲ್ಲಿ ಜಿಲ್ಲೆಯ ವಿವಿಧ ಕರಕುಶಲ ವಸ್ತುಗಳು, ತಿಂಡಿ, ತಿನಿಸುಗಳು, ಕೋಣದ ಗಾಣದಿಂದ ಕಬ್ಬಿನ ಹಾಲನ್ನು ತಯಾರಿಸುವ ಪ್ರಾತ್ಯ ಕ್ಷಿತೆ ಯನ್ನು ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಗಾಣದಿಂದ ತೆಗೆದ ಕಬ್ಬಿನ ಹಾಲನ್ನು ಕುಡಿದು ಸಂಭ್ರಮಿಸಿದರು.
ವಿವಿಧ ತಿನಿಸುಗಳು ಗಮನ ಸೆಳೆದವು. ರಾಗಿ ಕೀಲ್ಸ, ಮಂಡಕ್ಕಿ, ವಿವಿಧ ಬಗೆಯ ತಿನಿಸುಗಳು, ಅಂಟುಂಡೆಗಳು, ಗಾರ್ಗೆ, ಮುಂತಾದ ತಿನಿಸುಗಳು ಬಾಯಲ್ಲಿ ನೀರೂರಿಸುವಂತಿತ್ತು. ಬಹು ದೊಡ್ಡ ವೇದಿಕೆಯನ್ನು ನಿರ್ಮಿಸ ಲಾಗಿತ್ತು. ಮಂಗಳವಾರ ನಡೆದ ಹಬ್ಬದ ಉದ್ಘಾಟನೆಯನ್ನು ಪ್ರಖ್ಯಾತ ಹಾಸ್ಯಗಾರ ಗಂಗಾವತಿ ಪ್ರಾಣೇಶ್‌ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ರ್ಯ್ಂಕ್‌ ಪಡೆದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವ ರನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾ ಯಿತು. ರ್ಯ್ಂಕ್‌ ಪಡೆದ ವಿದ್ಯಾ ರ್ಥಿಗಳ ಜೊತೆಗೆ ಅವರ ಪೋಷಕರನ್ನು ಸಹ ಗೌರವಿಸಲಾ ಯಿತು.
ಇಡೀ ಎನ್‌ಇಎಸ್‌ ಮೈದಾ ನದ ತುಂಬ ಜನರು ಜಾತ್ರೆಯಂತೆ ನೆರೆದಿದ್ದರು. ವಿದ್ಯಾರ್ಥಿಗಳು ಅಲ್ಲಲ್ಲಿ ಗುಂಪುಗುಂಪಾಗಿ ನಿಂತು ಸೆಲಿ ತೆಗೆದುಕೊಳ್ಳುತ್ತಿದ್ದರು. ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿಕೊಳ್ಳುತ್ತಿದ್ದರು. ಬಹಳಷ್ಟು ವಿದ್ಯಾರ್ಥಿಗಳು ಹೊಸ ಬಟ್ಟೆ ತೊಟ್ಟು ಹಬ್ಬದಲ್ಲಿ ಭಾಗವ ಹಿಸುವಂತೆ ಈ ವಿಶೇಷ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಒಟ್ಟಾರೆ 75 ವರ್ಷಗಳ ಇತಿಹಾಸವಿರುವ ರಾ ಷ್ಟ್ರೀಯ ಶಿಕ್ಷಣ ಸಮಿತಿಯ ಈ ಸುಂ ದರ `ಎನ್‌ಇಎಸ್‌ ಹಬ್ಬ ಕಾರ್ಯ ಕ್ರಮ ನೆನಪಿನಲ್ಲಿಡುವಂತೆ ಮಾಡಿತು.