ಜಿಲ್ಲಾ ಸುದ್ದಿ

ಏ. 22 ರಿಂದ 29 ರವರೆಗೆ ಶ್ರೀ ಕ್ಷೇತ್ರ ಹೊರನಾಡಿನ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಶ್ರೀ ಜಗನ್ಮಾತೆಯ ಪುನಃ ಪ್ರತಿಷ್ಠಾ ಸ್ವರ್ಣ ಮಹೋತ್ಸವ, ಬ್ರಹ್ಮ ಕುಂಭಾಭಿಷೇಕ ಮತ್ತು ರಥೋತ್ಸವ ಕಾರ್ಯಕ್ರಮ

ಶಿವಮೊಗ್ಗ: ಶ್ರೀ ಕ್ಷೇತ್ರ ಹೊರನಾಡಿನ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಶ್ರೀ ಜಗನ್ಮಾತೆಯ ಪುನಃ ಪ್ರತಿಷ್ಠಾ ಸ್ವರ್ಣ ಮಹೋತ್ಸವ, ಬ್ರಹ್ಮ ಕುಂಭಾಭಿಷೇಕ ಮತ್ತು ರಥೋತ್ಸವ ಕಾರ್ಯಕ್ರಮ ಏ. 22 ರಿಂದ 29 ರವರೆಗೆ ಜರುಗಲಿದೆ.
ಏ. 22 ರಂದು ಮುಂಜಾನೆ 5.30 ಕ್ಕೆ ಶ್ರೀ ಉದ್ಭವ ಗಣಪತಿ ಸ್ವಾಮಿ, ಶ್ರೀ ಜಗನ್ಮಾತೆ, ಶ್ರೀ ನವಗ್ರಹ ದೇವರು ಮತ್ತು ಶ್ರೀ ಆಂಜನೇಯ ಸ್ವಾಮಿಗೆ ಮಹಾ ಭಿಷೇಕ ಆರಂಭವಾಗಲಿದ್ದು, 7.30 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನದ ಶಿವಮೊಗ್ಗದ ಭಕ್ತವೃಂದದ ಪರವಾಗಿ ಕೆ.ವಿ. ವಸಂತಕುಮಾರ್‌ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಏ. 23 ರಂದು ವಾರ್ಷಿಕ ವರ್ಧಂತ್ಯುತ್ಸವ, 24 ರಂದು ಉದ್ಭವ ಗಣಪತಿ ಸ್ವಾಮಿ ಸನ್ನಿಽಯಲ್ಲಿ ಕುಂಭಾಭಿಷೇಕ, 25 ರಂದು ಆದಿತ್ಯಾದಿ ನವಗ್ರಹ ದೇವರುಗಳ ಸನ್ನಿಽಯಲ್ಲಿ, 26 ರಂದು ಆಂಜನೇಯ ಸ್ವಾಮಿ ಸನ್ನಿಽಯಲ್ಲಿ ಕುಂಭಾಭಿಷೇಕ ನಡೆಯಲಿದೆ. 27 ರಂದು ಶ್ರೀ ಧರಣಿ ಹೋಮ ಮತ್ತು ಬ್ರಹ್ಮ ಕುಂಭಾಭಿಷೇಕದ ಕಲಶ ಸ್ಥಾಪನೆ, 28 ರಂದು ಶ್ರೀ ಜಗನ್ಮಾತೆಗೆ ಬ್ರಹ್ಮ ಕುಂಭಾಭಿಷೇಕ ಮತ್ತು ರಥೋತ್ಸವ ನಡೆಯಲಿದೆ. ಏ. 29 ರಂದು ಸಂಪೋಕ್ಷಣೆ ನಡೆಯಲಿದೆ ಎಂದರು.
ಪ್ರತಿದಿನ ಮಧ್ಯಾಹ್ನ 11.30 ರಿಂದ ಧಾರ್ಮಿಕ ಸಭೆಗಳು ಜರುಗಲಿದ್ದು, ವಿವಿಧ ಮಠಗಳ ಮಠಾಽೕಶರು ಸಾನಿಧ್ಯ ವಹಿಸ ಲಿದ್ದು, ಧಾರ್ಮಿಕ ಉಪನ್ಯಾಸ ನಡೆದು ವಿವಿಧ ಕ್ಷೇತ್ರಗಳ ಸೇವಾ ಸಾಧಕರಿಗೆ ಸನ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ಚಲನಟ ಚಿತ್ರ ನಟರು ಹಾಗೂ ಹಿರಿಯ ಪತ್ರಕರ್ತರು ಭಾಗವಹಿಸಲಿದ್ದಾರೆ. ಪ್ರತಿದಿನ ಸಂಜೆ 7 ಗಂಟೆಗೆ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಈ ಧಾರ್ಮಿಕ ಕಾರ್ಯ ಕ್ರಮಕ್ಕೆ ಹೊರೆ ಕಾಣಿಕೆ ಸಲ್ಲಿಸುವ ವರು ತರಕಾರಿ ಹೊರತುಪಡಿಸಿ ಧವಸ ಧಾನ್ಯ, ಧನ ಸಲ್ಲಿಸಬ ಹುದಾಗಿದೆ.
ಹೊರೆ ಕಾಣಿಕೆ ಸಲ್ಲಿ ಸುವವರು ವಿನೋಬನಗರದಲ್ಲಿ ರುವ ವಿಪ್ರ ಟ್ರಸ್‌್ಟ, ಬ್ರಾಹ್ಮಣ ವಿದ್ಯಾರ್ಥಿ ನಿಲಯ, ರವೀಂದ್ರನ ಗರದ ಶ್ರೀ ಪ್ರಸನ್ನಗಣಪತಿ ದೇವಾಲಯ, ಗೋಪಾಳದ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನಕ್ಕೆ ಏ. 20 ರೊಳಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 82175 40090, 94816 29665 ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸೂರ್ಯನಾರಾಯಣ, ಕೆ.ಜೆ. ಕುಮಾರಶಾಸಿ, ನಾಗೇಶ್‌, ವೆಂಕಟೇಶ್‌ ಮೂರ್ತಿ, ಕೇಶವಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.