ಜಿಲ್ಲಾ ಸುದ್ದಿ

ಬಸವನಕಟ್ಟೆ ಕೆರೆ ಗುದ್ದಲಿ ಪೂಜೆ

ಸೊರಬ: ಕೆರೆಕಟ್ಟೆಗಳನ್ನು ಮುಂದಿನ ಪೀಳಿಗೆಗೂ ಉಳಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ಬಾಬು ನಾಯಕ ಹೇಳಿದರು.

ತಾಲೂಕಿನ ಜಡೆ ಹೋಬಳಿ ಸೂರಣಗಿ ಗ್ರಾಮದಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಯಲ್ಲಿ 8 ಎಕರೆ 10 ಗುಂಟೆ ವಿಸ್ತೀರ್ಣವುಳ್ಳ ಬಸವನಕಟ್ಟೆ ಕೆರೆ ಗುದ್ದಲಿ ಪೂಜೆ ಮತ್ತು ಸರಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಅತಿ ಹೆಚ್ಚು ಕೆರೆಗಳಿದ್ದು ನಮ್ಮ ಯೋಜನೆಯ ಮೂಲಕ ಪುನಃಚೇತನ ಗೊಳ್ಳು ತ್ತಿರುವ 10 ನೇ ಕೆರೆ ಇದಾಗಿದ್ದು ಗ್ರಾಮಸ್ಥರು ಸಹಕಾರ ನೀಡಿ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ನೀರಿನ ರಕ್ಷಣೆ ಮಾಡ ಬೇಕೆಂಬ ಪೂಜ್ಯ ಹೆಗ್ಗಡೆಯವರ ಕನಸನ್ನು ಸಾಕಾರ ಗೊಳಿಸಬೇಕು, ಈ ಮೂಲಕ ಹಿರಿಯರು ಮುಂದಿನ ಪೀಳಿಗೆಗಾಗಿ ನೀಡಿದ ಉಡುಗೊರೆಯನ್ನು ರಕ್ಷಣೆ ಮಾಡಿ ದಂತಾಗುತ್ತದೆ.

ಕೆರೆಕಟ್ಟೆಗಳು ನಾಡಿನ ಜೀವ ನಾಡಿ. ರೈತಾಪಿ ಜನರ ಉಸಿರು. ಇರುವ ಕೆರೆಗಳನು ಉಳಿಸಿಕೊಳ್ಳ ಬೇಕಿದೆ. ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಕೆರೆ ಹೂಳೆತ್ತಿ ಅವುಗಳಿಗೆ ಮರು ಜೀವ ನೀಡಿ ಊರಿನವರಿಗೆ ವರ್ಗಾಯಿಸುವ ಮೂಲಕ ಕೆರೆಯ ಮಹತ್ವ, ಕೆರೆಯ ಅಗತ್ಯತೆ, ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಕೆಲಸ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಕೆರೆಯಲ್ಲಿ ನೀರು ನಿಲ್ಲುವುದರಿಂದ ಅಂತ ರ್ಜಲ ವೃದ್ಧಿಯಾಗಿ ರೈತರಿಗೆ ಕೃಷಿ ಮಾಡಲು ಅನುಕೂಲವಾಗುತ್ತದೆ. ನೀರು ಜನರಿಗಷ್ಟೇ ಅಲ್ಲದೇ ಜಾನುವಾರು, ಪಕ್ಷಿಗಳಿಗೂ ಅನು ಕೂಲವಾಗುತ್ತದೆ ಎಂದರು. 

ಗ್ರಾಪಂ ಅಭಿವೃದ್ಧಿ ಅಕಾರಿ ಕಾಳಿಂಗರಾಜ, ಧರ್ಮಸ್ಥಳ ಸಂಸ್ಥೆಯ ತಾಲೂಕು ಯೋಜನಾಕಾರಿ ಸುಬ್ರಾಯ ನಾಯ್‌್ಕ ಸರ್‌, ಜಿಲ್ಲಾ ಯೋಜ ನಾಕಾರಿ ಬಸವ ರಾಜ್‌, ಕೆರೆ ಸಮಿತಿ ಅಧ್ಯಕ್ಷ ಮೃತ್ಯುಂಜಯ ಗೌಡ್ರ, ಅನಿತ್‌ ಗೌಡ್ರ, ಮಲ್ಲಿಕಾ ರ್ಜುನಗೌಡ್ರ, ರಾಮಪ್ಪ, ಶಿವಾಜಿಗೌಡ್ರ,ಕೃಷಿ ಮೇಲ್ವಿಚಾರಕ ಲೋಕೇಶ್‌,  ರಾಜಪ್ಪ ಮತ್ತಿತರರು ಇದ್ದರು.