ಜಿಲ್ಲಾ ಸುದ್ದಿತಾಜಾ ಸುದ್ದಿ

ಎಸ್‌.ಎನ್‌. ಚನ್ನಬಸಪ್ಪ ವಿಧಾನಸಭೆಗೆ ಹೋಗುವುದು ನಿಶ್ಚಿತ : ಡಿ.ಎಸ್‌. ಅರುಣ್‌

ಶಿವಮೊಗ್ಗ: ಬಿಜೆಪಿ ಕಾರ್ಯ ಕರ್ತರ ಪಕ್ಷ ವಾಗಿದ್ದು, ಶಿವಮೊಗ್ಗ ನಗರ ಕ್ಷೇತ್ರದಿಂದ ಹಿರಿಯ ಕಾರ್ಯಕರ್ತ ಎಸ್‌.ಎನ್‌. ಚನ್ನಬಸಪ್ಪ ನವರಿಗೆ ಪಕ್ಷ ಟಿಕೆಟ್‌ ನೀಡಿದ್ದು, ಅವರು ವಿಧಾನಸಭೆಗೆ ಹೋಗುವುದು ನಿಶ್ಚಿತ ಎಂದು ಶಾಸಕ ಡಿ.ಎಸ್‌. ಅರುಣ್‌ ಹೇಳಿದರು.

ಅವರು  ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಚನ್ನಬಸ್ಪ ನವರು ಕೋಟೆ ಸೀತಾರಾಮಾಂಜನೇಯ ದೇವಸ್ಥಾನದಿಂದ ಬೃಹತ್‌ ಮೆರವಣಿಗಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದ ಬಳಿಕ ಎನ್‌ಡಿವಿ ಹಾಸ್ಟೆಲ್‌ ಆವರಣಲದ್ಲಿ ನಡೆದ ಬೃಹತ್‌ ಸಭೆ ಉದ್ದೇಶಿಸಿ ಮಾತನಾಡಿದರು.

ಪ್ರತಿಯೊಬ್ಬ ಕಾರ್ಯಕರ್ತ ನಾನೇ ಚನ್ನಬಸಪ್ಪ ಎಂದು ಭಾವಿಸಿ ಮನೆಮನೆಗೆ ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳು ಮತ್ತು ಹಿಂದುತ್ವದ ಹೋರಾಟಗಳ ಬಗ್ಗೆ ತಿಳಿಸಿ ಗೆಲ್ಲಿಸೋಣ. ಚನ್ನ ಬಸಪ್ಪನವರ ಕಣಕಣದಲ್ಲೂ ಹಿಂದುತ್ವ ಇದೆ. ಪ್ರತಿಯೊಬ್ಬ ಕಾರ್ಯಕರ್ತನ್ನು ಗುರುತಿಸಿ ಅವರು ಸಂಘಟನೆಯಲ್ಲಿ ತೊಡಗಿ ಕೊಂಡಿದ್ದಲ್ಲದೆ ಎಲ್ಲಾ ಕಾರ್ಯಕರ್ತರಿಗೆ ಸೂರ್ತಿಯ ಚಿಲುಮೆಯಾಗಿ ದ್ದಾರೆ. ಅಂತಹ ಹಿರಿಯ ನಾಯಕನನ್ನು ಗುರುತಿಸಿ ಪಕ್ಷ ಸ್ಥಾನ ನೀಡಿದ್ದು ಈ ಬಾರಿಯ ಚುನಾವಣೆ ಯಲ್ಲಿ ಬಿಜೆಪಿ 130ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌ ಮಾತನಾಡಿ, ಇವತ್ತು ಆದರ್ಶದ ದಿನ. ಒಬ್ಬ ಕಾರ್ಯಕರ್ತನಿಗೆ ಬಿಜೆಪಿಯಲ್ಲಿ ಯಾವ ಸ್ಥಾನ ಸಿಗುತ್ತದೆ ಎಂಬು ದನ್ನು ಪಕ್ಷ ತೋರಿಸಿದೆ. ಅಲ್ಲದೆ ದೇಶಕ್ಕಾಗಿ ಮತ್ತು ಪಕ್ಷಕ್ಕಾಗಿ ತ್ಯಾಗ ಮಾಡಿ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟ ಬಿ.ಎಸ್‌. ಯಡಿ ಯೂರಪ್ಪ ಮತ್ತು ಈಶ್ವರಪ್ಪರಂ ತಹ ನಾಯಕರು ನಮಗೆ ಸೂರ್ತಿ.ಪಕ್ಷವನ್ನು ತಾಯಿಗೆ ಹೋಲಿಸಿ ತನ್ನ ಶಿಷ್ಯನಿಗೆ ಟಿಕೆಟ್‌ ನೀಡಿದಾಗ ಪಕ್ಷದ ಸೂಚನೆಯನ್ನು ಮನ್ನಿಸಿ ಯುವ ಪೀಳಿಗೆಗೆ ಅವಕಾಶ ಮಾಡಿ ಕೊಟ್ಟು ಬೆನ್ನು ತಟ್ಟಿ ಪೋತ್ಸಾಹಿಸಿ ದ್ದಲ್ಲದೆ ನಾನು 40 ಸಾವಿರ ಲೀಡಲ್ಲಿ ಗೆದ್ದೆ. ನೀರು 60 ಸಾವಿರ ಲೀಡಲ್ಲಿ ಗೆಲ್ಲುತ್ತೀಯಾ ಎಂದು ಆಶೀ ರ್ವಾದ ಮಾಡಿದ ಈಶ್ವರಪ್ಪನವರು ನಮಗೆಲ್ಲಾ  ನಾಯಕರು.ಪೇಪರ್‌ ಟೈಗರ್‌ಗಳಿಗೆ ಹೆದರುವುದು ಬೇಡ. ಮಂಜಣ್ಣನವರೇ ನೀವು ನಮ್ಮ ಪಕ್ಷದ ಕಾರ್ಯಕರ್ತರ ಬೆವರಿನಿಂದ ನಾಲ್ಕೂ ಮನೆಯ ಸದಸ್ಯರಾಗಿ ಅಕಾರ ಅನುಭವಿ ಸಿದ್ದೀರಿ. ನಿಮ್ಮ ಅಕಾರ ಅದು ಬಿಜೆಪಿ ಕಾರ್ಯಕರ್ತನ ಕೊಡುಗೆ. ಪಕ್ಷ ಚಿಕ್ಕದಲ್ಲ. ನೀವು ನುಡಿದಂತೆ ನಡೆಯವವರು ಎಂದಾದರೆ ಜೆಡಿ ಎಸ್‌ನಿಂದ ಸಲ್ಲಿಸಿದ ನಾಮಪತ್ರ ಹಿಂಪಡೆದು ಭಾರತ ಮಾತೆಯ ಸೇವೆಗೆ ಸಿದ್ಧರಾಗಿ ಎಂದರು.

ಈಗಿನ ಚುನಾವಣೆ ಕೇವಲ ಚೆನ್ನಿಗಾಗಿ ಅಲ್ಲ.ದೇಶಕ್ಕಾಗಿ. ಯಾಕೆಂದರೆ ಗೋಹತ್ಯೆ ನಿಷೇಧ ಸೇರಿದಂತೆ ಪಿಎೈ ಮೇಲಿನ ಕೇಸುಗಳನ್ನು ಕೂಡ ವಾಪಾಸು ಪಡೆಯುವುದಾಗಿ ಕಾಂಗ್ರೆಸ್ಸಿಗರು ಹೇಳಿದ್ದಾರೆ. ಅವರು ಅಕಾರಕ್ಕೆ ಬರುವುದನ್ನು ತಡೆಯಲು ಚೆನ್ನಿ ಯನ್ನು ಗೆಲ್ಲಿಸಬೇಕು ಎಂದರು.

ಅಭ್ಯರ್ಥಿ ಚನ್ನಬಸಪ್ಪ ಮಾತ ನಾಡಿ, ಪಕ್ಷವನ್ನು ಉತ್ತುಂಗ ಶಿಖರಕ್ಕೆ ಏರಿಸಿದ ಬಿಎಸ್‌ವೈ, ಕೆ.ಎಸ್‌. ಈಶ್ವರಪ್ಪ,ಡಿ.ಹೆಚ್‌. ಶಂಕ ರಮೂರ್ತಿಯಂತಹ ನಾಯಕರು ಕಟ್ಟಿ ಬೆಳೆಸಿದ ಪಕ್ಷವನ್ನು ಕಾರ್ಯ ಕರ್ತ ಹಾಳಾಗಲು ಬಿಡಬಾರದು. ಬಿಜೆಪಿ ಎಂದೂ ಸ್ವಾರ್ಥವನ್ನು ಕಲಿಸಿ ಕೊಟ್ಟಿಲ್ಲ. ದೇಶಕ್ಕಾಗಿ ಹೋರಾಟ ಗಳನ್ನು ಕಟ್ಟುತ್ತಾ ಬಂದಿದೆ. ದೇಶದ ಮುಕುಟ ಕಾಶ್ಮೀರಕ್ಕಾಗಿ ಬಿಜೆಪಿ ಅನೇಕ ಬಲಿದಾನ ಮಾಡಿದೆ. ಲಾಲ್‌ಚೌಕ್‌ನಲ್ಲಿ ಪ್ರಧಾನಿ ಮೋದಿ ಹಾಗೂ ಮುರಳೀ ಮನೋಹರ ಜೋಷಿ ನೇತೃತ್ವದಲ್ಲಿ ತಾಯಿಯ ಹಾಲು ಕುಡಿದಿದ್ದರೆ ಭಾರತದ ಧ್ವಜ ಹಾರಿಸಿ ಎಂದು ಭಯೋತ್ಪಾದಕರು ಸವಾಲು ಹಾಕಿದ್ದಾಗ ಅಲ್ಲಿ ತಿರಂಗ ಹಾರಿಸಿ ಉತ್ತರ ಕೊಟ್ಟ ಪಕ್ಷ ನಮ್ಮದು. ಈಗ ಕಾಶ್ಮೀರದಲ್ಲಿ ನೆಮ್ಮದಿ ಕಾಣಲು ಬಿಜೆಪಿಯೆ ಕಾರಣ. ಜನಸಂಘ ಪ್ರಾರಂಭ ವಾಗಿದ್ದು ಅಕಾರಕ್ಕಾಗಿ ಅಲ್ಲ. ಕಾಶ್ಮೀರ ಉಳಿಸಲು. ದೀನ್‌ದ ಯಾಳ್‌ ಉಪಾಧ್ಯ ಹಾಗೂ ಶ್ಯಾಮ್‌ ಪ್ರಸಾದ್‌ ಮುಖರ್ಜಿ  ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಲ್ಲದೆ ಕಾರ್ಯಕರ್ತ ಹೇಗಿರ ಬೇಕೆಂಬು ದನ್ನು ತೋರಿಸಿಕೊಟ್ಟಿದ್ದಾರೆ. ಮತ್ತು ರಾಜ್ಯ ಬಿಜೆಪಿ ಮುಖಂಡರು ನಮಗೆ ಉತ್ತಮ ಮಾರ್ಗ ಹೇಳಿ ಕೊಟ್ಟಿದ್ದು, ಬಿ.ಎಸ್‌.ವೈ. ಹಾಗೂ ಈಶ್ವರಪ್ಪ ನೇತೃತ್ವ ದಲ್ಲಿ ದೇಶಕ್ಕಾಗಿ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಮತ್ತೆ ಗೆಲ್ಲಿಸೋಣ ಎಂದರು.

ಈ ಸಂದರ್ಭದಲ್ಲಿ ಜಿಜೆಪಿ ಪ್ರಮುಖರಾದ ಗಣೇಶ್‌ ಕಾರ್ಣಿಕ್‌, ಕುಲದೀಪ್‌ಕುಮಾರ್‌, ಜ್ಯೋತಿಪ್ರಕಾಶ್‌, ಡಾ. ಧನಂಜ ಯ ಸರ್ಜಿ, ಜ್ಞಾನೇಶ್ವರ್‌, ಹರಿ ಕೃಷ್ಣ, ಕೇಬಲ್‌ಬಾಬು, ಎಸ್‌. ಎನ್‌. ನಾಗರಾಜ್‌, ಮೇಯರ್‌ ಶಿವಕುಮಾರ್‌, ಉಪಮೇಯರ್‌ ಲಕ್ಷ್ಮಿಶಂಕರನಾಯಕ್‌, ಚಂದ್ರ ಶೇಖರ್‌, ಜಗದೀಶ್‌, ಸುರೇಖಾ ಮುರಳೀಧರ್‌, ಸಂತೋಷ್‌ ಬಳ್ಳೆಕೆರೆ ಸೇರಿದಂತೆ ಹಲವರಿದ್ದರು.