ಜಿಲ್ಲಾ ಸುದ್ದಿ

ಅಭಿವೃದ್ಧಿ ಮಾಡದವರು ಒಂದಾಗಿದ್ದಾರೆ, ಜನ ನನ್ನೊಂದಿಗೆ ಇದ್ದಾರೆ: ಆರಗ ಜ್ಞಾನೇಂದ್ರ

ತೀರ್ಥಹಳ್ಳಿ: ಈ ಬಾರಿ ಅವರಿಬ್ವರು ಒಂದಾಗಿದ್ದಾರೆ ಆದರೆ ಜನ ನಮ್ಮೊಂದಿಗೆ ಇದ್ದಾರೆ ಎಂದು ಗೃಹ ಸಚಿವ ಆರಗಜ್ಞಾನೇಂದ್ರ ತಿಳಿಸಿದರು .

ಅವರು ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿ, ಕಿಮ್ಮನೆ ರತ್ನಾ ಕರ್‌ ಮತ್ತು ಆರ್‌ ಎಂ. ಮಂಜು ನಾಥ್‌ ಗೌಡರ ಹೆಸರು ಹೇಳದೆ ವಾಗ್ದಾಳಿ ನಡೆಸಿದ ಆರಗ ಜ್ಞಾನೇಂದ್ರ 10ನೇಬಾರಿ ನಾಮಪತ್ರ ಸಲ್ಲಿಸಿ ತೀರ್ಥಹಳ್ಳಿಯಲ್ಲಿ ಒಂದೇ ಪಕ್ಷದ ಅಡಿ ರ್ಸ್ಪಸುತ್ತಿದ್ದೇನೆ. ಇಂದು  15 ಸಾವಿರ ಜನ ಬೆಂಬಲಿ ಗರೊಂದಿಗೆ ನಾಮಪತ್ರ ಸಲ್ಲಿಸಿ ದ್ದೇನೆ ಎಂದರು.

ಬಿಜೆಪಿಯಲ್ಲಿ ಸಾಕಷ್ಟು ಬದ ಲಾವಣೆ ವಿಚಾರದಲ್ಲಿ ಯಾವುದೇ ಪರಣಾಮ ಆಗೊಲ್ಲ. ಹೈಕಮಾಂಡ್‌ ಸಾಕಷ್ಟು ವಿಚಾರ ಮಾಡಿ, ಸರ್ವೆ ಮಾಡಿ ತೀರ್ಮಾನ ಕೈಗೊಂ ಡಿದೆ. ಇಡೀ ದೇಶದಲ್ಲಿ ನಿರ್ಧಾರ ಗಳು ಯಶಸ್ವಿಯಾಗಿದೆ. ಹಾಗಾಗಿ ಕರ್ನಾಟಕದಲ್ಲಿ ಅಂತಹ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಜಗದೀಶ್‌ ಶೆಟ್ಟರ್‌ ಮತ್ತು ಲಕ್ಷ್ಮಣ್‌ ಸವದಿ ಹೆಸರು ಹೇಳದೆ ಹಿರಿಯರು ಪಕ್ಷ ಬಿಟ್ಟು ಹೋಗಬಾರದಿತ್ತು. ಬಿಟ್ಟು ಹೋದವರಿಗೆ ಪಕ್ಷ ಎಲ್ಲಾ ರೀತಿಯ ಅವಕಾಶ ಸವಲ ತ್ತುಗಳನ್ನ ನೀಇಡಿದೆ. ಕೆಲವರಿಗೆ ಸಿಎಂ ಸ್ಥಾನ ಡಿಸಿಎಂ ಸ್ಥಾನ ನೀಡಿ ದೆ.ಪಕ್ಷ ಬಿಟ್ಟುಹೋಗುವುದರಲ್ಲಿ ಅರ್ಥವಿಲ್ಲವೆಂದರು.

ಸೈದ್ಧಾಂತಿಕವಾಗಿ ನಾವು ಇದ್ದೇವೆ ಎಂದಾಗ ಪಕ್ಷಬಿಡುವ ಪಶ್ನೆಯೇ ಬರುವುದಿಲ್ಲ. ಖಂಡಿತ ವಾಗಿ ಜನ ಕ್ಷಮಿಸೊಲ್ಲವೆಂದರು.

ತೀರ್ಥಹಳ್ಳಿಯಲ್ಲಿ ಕಳೆದ ಎರಡು ಬಾರಿ ನಾನು ಸೋತಿದ್ದೆ ಸೋತಾಗ ಯಾವ ಅನುದಾನವೂ ತರಲಿಲ್ಲ 2008 ರಿಂದ 2018 ರವರೆಗೆ ಯಾವ ಅಭಿವೃದ್ಧಿಯಾ ಗಲಿಲ್ಲ. ನಾನು 2018 ರಲ್ಲಿ ಆಯ್ಕೆ ಯಾದ ನಂತರ ಮೊದಲು ವಿಪಕ್ಷ ದಲ್ದೆ ನಂತರ ಕೋವಿಡ್‌ ಆಯಿ ತು ಆಮೇಲೆ ಒಂದುವರೆ ವರ್ಷ ಅಕಾರದಲ್ಲಿದ್ದಾಗ 2254 ಕೋಟಿ ಹಣ ಅಭಿವೃದ್ಧಿಗೆ ಹಣ ತಂದಿ ದ್ದೇನೆ.ಕಾಲುಸಂಕ, ಸೇತುವೆ ಶಿಕ್ಷಣ, ರಸ್ತೆಗಳು ಅಭಿವೃದ್ಧಿಯಾ ಗಿದೆ. ಈಗ ನನ್ನನ್ನ ಸೋಲಿಸಲು ಒಂದಾಗಿದ್ದಾರೆ. ಕಳೆದೆರಡು ಅವ ಯಲ್ಲಿ ತೀರ್ಥಹಳ್ಳಿ ಅಭಿವೃದ್ಧಿ ಯಾಗದ ಹಿನ್ನಲೆಯಲ್ಲಿ ಜನ ಮನನೊಂದು ಅವರನ್ನ ಸೋಲಿ ಸಲು ಜನ ನನ್ನೊಂದಿಗೆ ಒಟ್ಟಾಗಿ ದ್ದಾರೆ ಎಂದು ಆರೋಪಿಸಿದರು.