ಜಿಲ್ಲಾ ಸುದ್ದಿ

ತಹಶೀಲ್ದಾರ್‌ ಕಚೇರಿಯಲ್ಲಿ ಕಿಮ್ಮನೆ ಆರಗ ಮುಖಾಮುಖಿ

ತೀರ್ಥಹಳ್ಳಿ: ಕುಶಾವತಿ ಪಾರ್ಕ್‌ ಬಳಿಯ ಶ್ರೀ ರಾಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಕುಪ್ಪಳ್ಳಿ ವೃತ್ತದ ವರೆಗೆ ಬೈಕ್‌ ನಲ್ಲಿ ಬಂದು ನಂತರ ತಹಶೀಲ್ದಾರ್‌ ಕಚೇರಿಗೆ ನಡೆದುಕೊಂಡು ಹೋದ ಗೃಹ ಸಚಿವ ಆರಗ ಜ್ಞಾನೇಂದ್ರ ತೀರ್ಥಹಳ್ಳಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು

ಶ್ರೀರಾಮ ದೇವಸ್ಥಾನದಿಂದ ತಹಶೀಲ್ದಾರ್‌ ಕಚೇರಿಗೆ ಸರಳವಾಗಿ ಬಂದ ಆರಗ ಜ್ಞಾನೇಂದ್ರ ನಾಮಪತ್ರ ಸಲ್ಲಿಕೆ ಮಾಡಲು  ಕಚೇರಿಗೆ ತೆರಳಿದರು.

ಕುಶಾವತಿಯಿಂದ ಕುಪ್ಪಳ್ಳಿ ವೃತ್ತದ ವರೆಗೆ ಬೈಕ್‌ ನಲ್ಲಿ ಬಂದು ನಂತರ ಕುಪ್ಪಳ್ಳಿ ವೃತ್ತದ ಬಳಿ ನಡೆದುಕೊಂಡು ಬಂದ ಆರಗ ಜ್ಞಾನೇಂದ್ರ ನಾಮಪತ್ರ ಸಲ್ಲಿಕೆಗೆ ತೆರಳಿರುವುದು ವಿಶೇಷವಾಗಿತ್ತು.

ಕಿಮ್ಮನೆಯೂ ನಾಮಪತ್ರ ಸಲ್ಲಿಕೆ

ಕಾಂಗ್ರೆಸ್‌ ಅಭ್ಯರ್ಥಿ ಕಿಮ್ಮನೆ ರತ್ನಾಕರ್‌ ಸಹ ಇಂದು ನಾಮಪತ್ರ ಸಲ್ಲಿಸಲು ತಹಶೀಲ್ದಾರ್‌ ಕಚೇರಿಗೆ ನಡೆದುಕೊಂಡು ಬಂದರು. ಕಿಮ್ಮನೆಗೂ ಮೊದಲು ಮಂಜು ನಾಥ್‌ ಗೌಡರು ಕಚೇರಿಯಲ್ಲಿ ಹಾಜರಿದ್ದರು.

ಕಿಮ್ಮನೆ ರತ್ನಾಕರ್‌ ನಾಮಪತ್ರ ಸಲ್ಲಿಸುವ ಕಾರ್ಯ ಕ್ರಮವಿತ್ತು. ಆದರೆ ಒಂದು ದಿನ ಮೊದಲು ಅವರ ನಾಮಪತ್ರ ಸಲ್ಲಿಸಿದ್ದಾರೆ. ಬಹುತೇಕ ಅಭ್ಯ ರ್ಥಿಗಳು ಎರಡೆ ರುಡು ನಾಮಪತ್ರ ಸಲ್ಲಿಸಿದ್ದಾರೆ. ಕುಪ್ಪಳ್ಳಿ ವೃತ್ತದಿಂದ ತಹಶೀಲ್ದಾರ್‌ ಕಚೇರಿಯ ವರೆಗೆ ಬಿಜೆಪಿ ಬೆಂಬಲಿಗರು ಬೃಹತ್‌ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು.

ಅವರ ನಡುವೆ ಡಾ. ಸುಂದರೇಶ್‌ ಜೊತೆ ಸರಳವಾಗಿ ಬಂದ ಕಿಮ್ಮನೆ ನಾಮಪತ್ರ ಸಲ್ಲಿಕೆಗೆ ಕಚೇರಿಗೆ ಹೋಗಿದ್ದಾರೆ. ಕಚೇರಿಯಲ್ಲಿ ಇಬ್ವರು ನಾಯಕರು ಮುಖಾಮುಖಿ ಆಗುವ ಸಂಭವವಿದೆ.