ಜಿಲ್ಲಾ ಸುದ್ದಿ

ಬಿಜಿಎಸ್‌ ಗ್ಲೆನಿಗಲ್ಸ್ ಗ್ಲೋಬಲ್‌ ಹಾಸ್ಪಿಟಲ್‌ ವೈದ್ಯರಿಂದ ಯಕೃತ್ತು ಮತ್ತು ಮೂತ್ರಪಿಂಡ ಕಸಿ ಶಸ ಚಿಕಿತ್ಸೆ ಯಶಸ್ವಿ

ಶಿವಮೊಗ್ಗ: ಅಪರೂಪದ ಅನುವಂಶಿಕ ಪಾಲಿಸಿಸ್ಟಿಕ್‌ ಯಕೃತ್‌ ಮತ್ತು ಮೂತ್ರಪಿಂಡ ಕಾಯಿಲೆ ಯಿಂದ ಬಳಲುತ್ತಿದ್ದ ದೆಹಲಿಯ 42 ವರ್ಷ ವಯಸ್ಸಿನ ಮಹಿಳೆಗೆ ಬಿಜಿಎಸ್‌ ಗ್ಲೆನಿಗಲ್ಸ್ ಗ್ಲೋಬಲ್‌ ಆಸ್ಪತ್ರೆಯ ಪರಿಣಿತ ವೈದ್ಯರ ತಂಡ ಯಕೃತ್ತು ಮತ್ತು ಮೂತ್ರಪಿಂಡದ ಕಸಿ ಶಸ ಚಿಕಿತ್ಸೆಯನ್ನು ಯಶಸ್ವಿ ಯಾಗಿ ನಡೆಸಿದೆ.

ಅನುವಂಶಿಕ ಅಸ್ವಸ್ಥತೆಯಿಂದ ಯಕೃತ್‌ ಮತ್ತು ಮೂತ್ರಪಿಂಡ ಬಾತವಾಗಿದ್ದವು. ಇದರಿಂದ ಅಂಗಗಳು ಅಸಮಾನ್ಯ ಕ್ರಿಯೆಗೆ ಕಾರಣವಾಗಿದ್ದು, ಜೀವ ಉಳಿಸುವ ವಿಧಾನದೊಂದಿಗೆ ಎರಡೂ ಅಂಗಗಳ ಕಸಿ ಮಾಡಬೇಕಾದ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿತ್ತು. ರೋಗಿಯ ಪರಿಸ್ಥಿತಿ ಮತ್ತು ವೈದ್ಯಕೀಯ ದಾಖಲೆಗಳನ್ನು ಆಸ್ಪತ್ರೆಯ ಯಕೃತ್‌ ಮತ್ತು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸಾ ತಂಡಗಳು ಪರಿಶೀಲಿಸಿದವು.

ಕಸಿ ತಜ್ಞ, ಹಿರಿಯ ಸಮಾಲೋಚಕ ಮತ್ತು ಈ ವಿಭಾಗದ ಮುಖ್ಯಸ್ಥ ಡಾ. ಮಹೇಶ್‌ಗೋಪ ಶೆಟ್ಟಿ ಮತ್ತು ಶಸ್ತ್ರಚಿಕಿತ್ಸಕರು, ಹಿರಿಯ ಸಮಾಲೋಚಕರಾದ ಡಾ. ಪ್ರದೀಪ್‌ ಕೃಷ್ಣ, ಡಾ. ರವೀಂದ್ರ ನಿಡೋಣಿ, ಡಾ. ಡಿ.ಎ. ಪ್ರಮೋ ದ್‌ ಕುಮಾರ್‌, ಯಕೃತ್‌ ಕಸಿ ತಜ್ಞ ಡಾ. ಬಿ.ಟಿ. ಅನಿಲ್‌ ಕುಮಾರ್‌, ಮೂತ್ರರೋಗ ಶಸ  ವಿಭಾಗದ ಹಿರಿಯ ಸಮಾಲೋಚಕ, ಕಸಿ ವೈದ್ಯ ಡಾ. ಎಸ್‌. ನರೇಂದ್ರ ನೇತೃತ್ವದ ತಂಡ ಎರಡೂ ಅಂಗಗಳ ಕಸಿ ಶಸ್ತ್ರಚಿಕಿತ್ಸೆ ಏಕಕಾಲಕ್ಕೆ ಮಾಡುವ ಕುರಿತು ರೋಗಿಗೆ ಮನವರಿಕೆ ಮಾಡಿಕೊಟ್ಟಿತು.

ಒಂದು ಅಂಗ ತೆಗೆದು ಕಸಿ ಮಾಡಿದರೆ ಉಪಯೋಗವಿಲ್ಲ, ಎರಡೂ ಅಂಗಗಳನ್ನು ತೆರವುಗೊ ಳಿಸಿ ಕಸಿ ಶಸ ಚಿಕಿತ್ಸೆ ನಡೆಸಿದರೆ ಆಗುವ ಲಾಭದ ಬಗ್ಗೆ ತಿಳಿವಳಿಕೆ ನೀಡಿತು. ನಂತರ ಆಕೆಯನ್ನು ಮೃತ ವ್ಯಕ್ತಿಯ ಯಕೃತ್ತು ಮತ್ತು ಮೂತ್ರ ಪಿಂಡ ಕಸಿಗಾಗಿ ಹೆಸರು ನೋಂದಾ ಯಿಸಲಾಗಿದ್ದು, ನಂತರ ಮೈಸೂರಿನ ವ್ಯಕ್ತಿಯೊಬ್ಬ ರಿಂದ ಎರಡೂ ಅಂಗಗಳು ದೊರೆತವು.  ಹಲವಾರು ವರ್ಷಗಳಿಂದ ಯಶಸ್ವಿಯಾಗಿ ಕಸಿ ಶಸ್ತ್ರಚಿಕಿತ್ಸೆ ನಡೆಸು ತ್ತಿರುವ ತಜ್ಞ ವೈದ್ಯರ ತಂಡ ಯಕೃತ್‌ ಮತ್ತು ಮೂತ್ರಪಿಂಡದ ಕಸಿ ಶಸ್ತ್ರಚಿಕಿತ್ಸೆ ನಡೆಸಿತು. ಆಕೆ ಚಿಕಿತ್ಸೆಗೆ ಸ್ಥಿರವಾಗಿ ಸ್ಪಂದಿಸಿದಳು.

ಬಿಜಿಎಸ್‌ ಗ್ಲೆನಿಗಲ್ಸ್ ಗ್ಲೋ ಬಲ್‌ ಆಸ್ಪತ್ರೆ ಸಂಕೀರ್ಣದಾಯಕ ಶಸ್ತ್ರಚಿಕಿತ್ಸೆಗಳನ್ನು ಸಮರ್ಥವಾಗಿ ನಡೆಸಿ, ಸವಾಲುಗಳನ್ನು ಎದುರಿಸಿ ಜೀವ ಉಳಿಸುವಲ್ಲಿ ಸಲವಾಗಿದೆ ಎಂದು ಕಸಿ ತಜ್ಞ, ಹಿರಿಯ ಸಮಾಲೋಚಕ ಮತ್ತು ಈ ವಿಭಾಗದ ಮುಖ್ಯಸ್ಥ ಡಾ. ಮಹೇಶ್‌ ಎಸ್‌. ಗೋಪಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.