ಜಿಲ್ಲಾ ಸುದ್ದಿ

ಗ್ರಾಮಾಂತರ ಕ್ಷೇತ್ರಕ್ಕೆ ಬಿಎಸ್‌ವೈ, ಬಿವೈಆರ್‌ ಹೆಚ್ಚಿನ ಅನುದಾನ : ಎಸ್‌.ರುದ್ರೇಗೌಡ ಅಭಿವೃದ್ಧಿ ವೇಗ ದ್ವಿಗುಣಗೊಳ್ಳಲು ರಾಜ್ಯದಲ್ಲಿ ಬಿಜೆಪಿ ಅಕಾರಕ್ಕೆ ಬರುವುದು ಅವಶ್ಯಕ : ಮುಖೇಶ್‌ ಸಿಂಗ್‌ ಕೋಲಿ

ಶಿವಮೊಗ್ಗ: ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕ ಕೆ.ಬಿ. ಅಶೋಕ ನಾಯ್ಕ ಅವರು ಕೋಟ್ಯಾಂತರ ರೂ. ಅನುದಾನ ತಂದಿದ್ದು, ಬಿ. ಎಸ್‌.ಯಡಿಯೂರಪ್ಪ ಸಿಎಂ ಆಗಿದ್ದ ಅವಯಲ್ಲಿ ಹಾಗೂ ಲೋಕಸಭೆ ಸದಸ್ಯ ಬಿ.ವೈ. ರಾಘ ವೇಂದ್ರ ಅವರಿಂದಲೂ ಅನುದಾನ ತರುವ ಮೂಲಕ ಅಭಿವೃದ್ಧಿ ಮಾಡಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌. ರುದ್ರೇ ಗೌಡ ಹೇಳಿದರು.

ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಹರಮ ಘಟ್ಟ ವ್ಯಾಪ್ತಿಯಲ್ಲಿ ಗ್ರಾಮದ ಪ್ರಮುಖರ ಮನೆ ಭೇಟಿ ಹಾಗೂ ಸಾರ್ವಜನಿಕರ ಭೇಟಿ ಮಾಡಿ ಸಮಾಲೋಚನೆ ನಡೆಸಿ ಮಾತ ನಾಡಿ, ಪ್ರತಿಯೊಂದು ಗ್ರಾಮಗಳ ಲ್ಲಿಯು ಅಗತ್ಯ ಮೂಲಸೌಕರ್ಯ ಒದಗಿಸುವ ಕೆಲಸಗಳನ್ನು ಮಾಡಿ ದ್ದಾರೆ. ಮುಂದಿನ ಬಾರಿಯು ಅತಿ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಲು ಅವಕಾಶ ಮಾಡಿಕೊಡ ಬೇಕು. ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಉತ್ತರಖಂಡ ಮಾಜಿ ಎಂಎಲ್‌ಎ, ಶಿವಮೊಗ್ಗ ಗ್ರಾಮಾಂತರ ಚುನಾವಣಾ ಪ್ರಮುಖ ರಾದ ಮುಖೇಶ್‌ ಸಿಂಗ್‌ ಕೋಲಿ ಮಾತ ನಾಡಿ, ಅಭಿವೃದ್ಧಿ ವೇಗವು ದ್ವಿಗುಣಗೊಳ್ಳಬೇಕಾದರೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷದಲ್ಲಿ ಆಡಳಿತದಲ್ಲಿ ಇರುವುದು ಅತ್ಯಂತ ಮುಖ್ಯ. ದೇಶ, ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಬಿಜೆಪಿ ಯನ್ನು ಬೆಂಬಲಿಸಬೇಕು. ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಜತೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿ ಅಕಾರಕ್ಕೆ ತರಬೇಕು ಎಂದು ಹೇಳಿದರು.

ನರೇಂದ್ರ ಮೋದಿ ಪ್ರಧಾನಿ ಅವಯಲ್ಲಿ ಭಾರತ ಅತಿ ಸದೃಢ ದೇಶವಾಗಿ ಬೆಳೆಯುತ್ತಿದ್ದು, ವಿಶ್ವದ ಬಹುತೇಕ ದೇಶಗಳು ಭಾರತದ ನಾಯಕತ್ವ ಒಪ್ಪಿವೆ. ರಾಜ್ಯದ ಲ್ಲಿಯೂ ಬಿಜೆಪಿ ಸರ್ಕಾರವು ಹೆಚ್ಚಿ ನ ಅಭಿವೃದ್ಧಿ ಕೆಲಸಗಳನ್ನು ಮಾ ಡುವ ಮೂಲಕ ಮುನ್ನಡೆದಿದೆ. ಈ ಬಾರಿಯೂ ಬಿಜೆಪಿ ಅಕಾರಕ್ಕೆ ಬ ರುವುದು ನಿಶ್ಚಿತ ಎಂದರು.

ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಬಿ. ಅಶೋಕ ನಾಯ್ಕ ಮಾತನಾಡಿ, ಐದು ವರ್ಷಗಳ ಅವಯಲ್ಲಿ ಎಲ್ಲ ಗ್ರಾಮಗಳಿಗೆ ಅವಶ್ಯಕವಿರುವ ಪ್ರಥಮ ಆದ್ಯತಾ ಕೆಲಸಗಳನ್ನು ಮಾಡಿದ್ದು, ಸಂಪೂರ್ಣ ಅನು ದಾನದ ಸದ್ಭಳಕೆ ಮಾಡಲಾಗಿದೆ. ಬಿಜೆಪಿ ಸರ್ಕಾರ ಮತ್ತೊಮ್ಮೆ ಅಕಾರಕ್ಕೆ ಬಂದ ನಂತರ ಹೆಚ್ಚಿನ ಕೆಲಸಗಳನ್ನು ಮಾಡಲಾಗುತ್ತದೆ. ಗ್ರಾಮಾಂತರ ಕ್ಷೇತ್ರದಲ್ಲಿ ನೀರಾ ವರಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಗ್ರಾಮಾಂತರ ವಿಧಾನ ಸಭಾ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ ಅವರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದರು. ಪಕ್ಷದ ಕಾರ್ಯ ಕರ್ತರು ಹಾಗೂ ಮುಖಂಡರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಅನಾರೋಗ್ಯದಿಂದ ಇರುವ ಮುಖಂಡರನ್ನು ಭೇಟಿ ಆರೋಗ್ಯ ವಿಚಾರಿಸಿದರು.

ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಗಿರೀಶ್‌, ಪ್ರಮು ಖರಾದ ಷಡಾಕ್ಷರಪ್ಪ, ವಿರೂಪಾ ಕ್ಷಪ್ಪ, ಅಶೋಕ್‌ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು. ಕ್ಷೇತ್ರ ಪ್ರಭಾರಿ ಎಸ್‌.ದತ್ತಾತ್ರಿ, ಮಂಡಲ ಅಧ್ಯಕ್ಷ ರತ್ನಾಕರ ಶೆಣೈ, ಮಂಜುನಾಥ್‌ ಕಲ್ಲಜ್ಜನಾಳ್‌, ಪ್ರಧಾನ ಕಾರ್ಯದರ್ಶಿ ಗೋ ಪಾಲ್‌, ಉಜ್ಜಿನಪ್ಪ, ಮಲ್ಲೇಶ್‌, ರಂಗೋಜಿರಾವ್‌ ಸೇರಿದಂತೆ ಪ್ರಮುಖರು ಗ್ರಾಮಾಂತರ ಕಾ ರ್ಯ್ಲಯದಲ್ಲಿ ಸಭೆ ನಡೆಸಿದರು.