ಜಿಲ್ಲಾ ಸುದ್ದಿ

ಬ್ರಾಹ್ಮಣ ಸಮಾಜ ಅಭಿವೃದ್ಧಿ ವೇದಿಕೆಯಿಂದ ಹಾಲಪ್ಪನವರನ್ನು ಬೆಂಬಲಿಸಲು ನಿರ್ಧಾರ ಸರ್ವರಿಗೂ ಸಮಪಾಲು-ಸಮಬಾಳು ತತ್ವ ಅನುಷ್ಠಾನಗೊಳಿಸಿದವರು ಹಾಲಪ್ಪ- ಹರನಾಥರಾವ್‌

ಸಾಗರ: ಈ ಕ್ಷೇತ್ರದ ಶಾಸಕ ರಾಗಿ ಸರ್ಕಾರದ ನೀತಿಯಾಗಿ ಸರ್ವರಿಗೂ ಸಮಪಾಲು, ಸಮ ಬಾಳು ನೀತಿಯನ್ನು ಅನುಷ್ಠಾನ ಗೊಳಿಸಿದವರು ಶಾಸಕ ಹರತಾಳು ಹಾಲಪ್ಪನವರು. ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಬೆಂಬ ಲಿಸಬೇಕು ಎಂದು ಬ್ರಾಹ್ಮಣ ಸಮುದಾಯದ ಹಿರಿಯ ಮುಖಂ ಡ ಎಂ.ಹರನಾಥರಾವ್‌ ಹೇಳಿ ದರು.

ಪಟ್ಟಣದಲ್ಲಿ ಬ್ರಾಹ್ಮಣ ಸಮಾಜ ಅಭಿವದ್ಧಿ ವೇದಿಕೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶಾಸಕರಾಗಿ ಹಾಲಪ್ಪನವರು ಜಾತ್ಯತೀತವಾಗಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಯಾವ ಜಾತಿ, ವರ್ಗದವರೂ ಮೇಲಲ್ಲ, ಕೀಳಲ್ಲ ಎಂಬ ಮನೋ ಭಾವ ಅವರದ್ದು. ಎಲ್ಲ ಸಮುದಾ ಯದವರ ಬಗ್ಗೆ ಸಮಾನ ಕಾಳಜಿ ಇದೆ ಎಂದು ಅವರು ಅಭಿ ಪ್ರಾಯಪಟ್ಟರು.

ಬ್ರಾಹ್ಮಣ ಸಮುದಾಯ ದವರಿಗೆ ಬೇರೇನೂ ಬೇಡ. ಜನ ಪ್ರತಿನಿಯಾದವರು ನಮ್ಮನ್ನು ಗೌರವದಿಂದ ಕಾಣಬೇಕು. ಕಳೆದ 50 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿರುವ ನಾನು ಈ ಹಿಂದೆ ನಾನು ಬಹಳಷ್ಟು ಶಾಸಕ ರನ್ನು ನೋಡಿದ್ದೇನೆ. 30 ವರ್ಷ ಗಳಿಂದ ಆಗದ ರಸ್ತೆ ಕಾಮಗಾ ರಿಗಳು ಹಾಲಪ್ಪನವರು ಶಾಸಕ ರಾಗಿ ಬಂದ ಮೂರು ತಿಂಗಳಲ್ಲಿ ಮಾಡಿಸಿದ್ದಾರೆ. ಯಾವ ಪ್ರದೇಶ ಎಂದು ನೋಡದೇ ಅಭಿವೃದ್ಧಿ ಯಷ್ಟೇ ಅವರಿಗೆ ಮಾನದಂಡ. ಇಂಥವರನ್ನು ಮತ್ತೊಮ್ಮೆ ಗೆಲ್ಲಿಸ ಬೇಕು ಎಂದು ಮನವಿ ಮಾಡಿ ದರು.

ನಿವೃತ್ತ ಪ್ರಾಂಶುಪಾಲ ಡಾ. ಟಿ.ಎಸ್‌. ರಾಘವೇಂದ್ರ ಮಾತ ನಾಡಿ, ವಿಧಾನಸಭೆಯಲ್ಲಿ ನಮ್ಮ ಅಹವಾಲುಗಳನ್ನು ಮನೋಜ್ಞ ವಾಗಿ ಹೇಳುವ ತಾಕತ್ತು ಹಾಲಪ್ಪನ ವರಿಗಿದೆ. ಕುವೆಂಪು, ಬಸವಣ್ಣ ನವರ ವಿಚಾರಲಹರಿ ಯನ್ನು ಪ್ರಸ್ತಾಪಿಸಿ ಯಾರಿಗೂ ಅರ್ಥವಾ ಗುವಂತೆ ಹೇಳುವ ಅವರ ಶೈಲಿಯಿಂದ ಅವರೊಬ್ಬ ಮಾತು ಗಾರ ಎನ್ನಬಹುದು. ಮಂಗನ ಕಾಯಿಲೆ, ಶರಾವತಿ ಸಂತ್ರಸ್ತರ ಬವಣೆ ಕುರಿತು ಅವರು ಮಾತ ನಾಡಿರುವುದು ಉಲ್ಲೇಖನಾರ್ಹ. ಕೋವಿಡ್‌ ಸಂದರ್ಭದಲ್ಲಿ ಅದ್ಭುತ ವಾಗಿ ನಿರ್ವಹಣೆ ಮಾಡಿದ್ದಾರೆ. ಅವರ ದೂರದಷ್ಟಿ, ಹೋರಾಟದ ಬಗ್ಗೆ ಪಟಗುಪ್ಪೆ ಸೇತುವೆಯೊಂದೇ ಉದಾಹರಣೆ ಸಾಕು ಎಂದರು.

ಶಾಸಕ ಹಾಲಪ್ಪ ಅವರ ಹಿಂಬಾಲಕರ ವರ್ತನೆಯಿಂದ ಅವರ ವರ್ಚಸ್ಸಿಗೆ ಧಕ್ಕೆ ಬರುತ್ತಿದೆ.  ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯ ಬಾರದು ಎಂದವರು ಸಲಹೆ ನೀಡಿದರು.

ಮುಖಂಡ ಯು.ಎಚ್‌. ರಾಮಪ್ಪ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಮತದಾನ ಹೆಚ್ಚು ಮಾಡಬೇಕು. ನಮ್ಮವರನ್ನು ಬೂತ್‌ವರೆಗೂ ಕರೆತಂದು ಮತದಾನ ಮಾಡಿಸ ಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಹವ್ಯಕ ಸಮಾಜಕ್ಕೆ ಯಾವುದೇ ಪ್ರಾತಿನಿಧ್ಯ ದೊರಕಿಲ್ಲ. ನಾನು ಟಿಕೇಟ್‌ ಆಕಾಂಕ್ಷಿಯಾದ ಸಂದ ರ್ಭದಲ್ಲಿ ಅವರ ಬಳಿ ಹಣ ಎಲ್ಲಿದೆ   ಎಂದು ಪ್ರಶ್ನಿಸಿದರು. ಮುಂಬ ರುವ ಜಿಲ್ಲಾ, ತಾಪಂ, ಚುನಾವಣೆ ಯಲ್ಲಿ ನಮ್ಮ ಸಮಾಜ ದವರಿಗೆ ಎಲ್ಲಿ ಗೆಲ್ಲುವ ಅವಕಾಶವಿ ದೆಯೋ ಅಲ್ಲಿ ನಮ್ಮ ಸಮಾಜದ ವರಿಗೆ ಟಿಕೇಟ್‌ ಕೊಡಬೇಕು. 1989ರಲ್ಲಿ ಬಿಜೆಪಿ ಯಿಂದ ಚುನಾ ವಣೆಗೆ ನಿಲ್ಲಲು ಜನ ಇರಲಿಲ್ಲ. ನಂತರ ಪಕ್ಷದ ಬೆಳವಣಿಗೆ ಆದ ಸಂದರ್ಭ ದಲ್ಲಿ ಬ್ರಾಹ್ಮಣ ಸಮು ದಾಯಕ್ಕೆ ನಿರಾಸೆಯೇ ಆಯಿತು. ಹಾಲಪ್ಪ ನವರು ನಮಗೆ ಸಿಕ್ಕ ವರ. ಅವ ರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದರು.

ವಕೀಲರಾದ ಅಶೋಕ್‌ ಭಟ್‌ ಮಾತನಾಡಿ, ರಸ್ತೆ, ಕುಡಿಯುವ ನೀರು ಮುಂತಾದ ಮೂಲಭೂತ ಸೌಲಭ್ಯಗಳನ್ನು ಜನರಿಗೆ ಒದಗಿಸು ವಲ್ಲಿ ಶಾಸಕ ಹಾಲಪ್ಪನವರು ಯಶಸ್ವಿಯಾಗಿದ್ದಾರೆ. ಸಮಾಜದ ಕಳಕಳಿ

ಅವರಿಗೆ ಅರ್ಥವಾಗಿದೆ. ಎಲ್ಲಿ ಯಾವ ಕೆಲಸವಾಗಬೇಕೋ ಅಲ್ಲಿಗೆ ಹೆಚ್ಚು ಅನುದಾನ ತರುತ್ತಾರೆ. ನಮ್ಮ ಊರಿನಲ್ಲೇ ರಸ್ತೆ ಅಭಿ ವೃದ್ಧಿಗೆ 1 ಕೋಟಿ ರೂ. ವೆಚ್ಚ ವಾಗಿದೆ. ಬೇರೆ ಶಾಸಕರು ಇದ್ದಾಗ ಒತ್ತಾಯ ಮಾಡಿದ್ದರೂ ಕೆಲಸ ಆಗಿ ರಲಿಲ್ಲ. ಕೆಲಸ ಮಾಡು ವವರು ಅಽ ಕಾರದಲ್ಲಿರಬೇಕು ಎಂದರು.

ನಿವೃತ್ತ ಪ್ರಾಧ್ಯಾಪಕ ತಿರು ಮಲ ಮಾವಿನಕುಳಿ, ತಾಪಂ ಮಾಜಿ ಅಧ್ಯಕ್ಷ ಬಿ.ಸಿ.ಲಕ್ಷ್ಮೀನಾರಾ ಯಣ, ಕೋಡೂರು ವಿಜಯೇಂದ್ರರಾವ್‌, ಗಣೇಶ್‌ ಪ್ರಸಾದ್‌, ಮ.ಸ. ನಂಜುಂಡಸ್ವಾಮಿ ಮಾತ ನಾಡಿದರು. ಶಾಸಕ ಹಾಲಪ್ಪ ಮಾತನಾಡಿ, ನಾನು ಯಾವತ್ತೂ ಬ್ರಾಹ್ಮಣ ವಿರೋಽಯಲ್ಲ. ಆದರೂ ಇಂಥ ಆರೋಪ ಮಾಡು ತ್ತಾರೆ. ನನ್ನ ಸುತ್ತಮುತ್ತ ಇರುವ ವರೆಲ್ಲ ಬ್ರಾಹ್ಮಣ-ಲಿಂಗಾಯಿತ ಸಮುದಾಯದವರು. ಅವರ ಜೊತೆಗಿದ್ದ ಮೇಲೆ ವಿರೋಧಿ  ಹೇಗಾಗುತ್ತೇನೆ ಎಂದು ಪ್ರಶ್ನಿಸಿದರು. ಭವಿಷ್ಯದ ದಿನಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಗಣಪತಿ ದೇವಸ್ಥಾನ, ವರದಾನದಿ ಅಭಿ ವೃದ್ಧಿಪಡಿಸುವುದಾಗಿ ಹೇಳಿ ದರು. ಮತ್ತೊಮ್ಮೆ ನನ್ನನ್ನು ಬೆಂಬಲಿಸಿ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಕೆ.ಸಿ.ದೇವಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಡಿಕೆ ಬೆಳೆಗಾರರಿಗೆ ಸಂಕಷ್ಟ ಬಂದ ಸಂದರ್ಭದಲ್ಲೆಲ್ಲ ದೆಹಲಿಯವರೆಗೂ ನಮ್ಮ ಅಹವಾಲುಗಳನ್ನು ಒಯ್ದು ಸಂಧ ಪಟ್ಟವರಿಗೆ ತಲುಪಿಸಿದ ಕೀರ್ತಿ ಹಾಲಪ್ಪನವರಿಗೆ ಸಲ್ಲುತ್ತದೆ ಎಂದರು. ಸುಭದ್ರ ಪ್ರಾರ್ಥಿಸಿದರು. ಅಕ್ಷ ರ ಎಲ್‌.ವಿ. ಸ್ವಾಗತಿಸಿದರು. ಹು. ಬಾ.ಅಶೋಕ್‌ ನಿರೂಪಿಸಿದರು.