ಜಿಲ್ಲಾ ಸುದ್ದಿಶಿವಮೊಗ್ಗಸಾಗರ

ಏ.17: ಆಮ್‌ಆದ್ಮಿ ಅಭ್ಯರ್ಥಿಯಾಗಿ ಸಾಗರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ : ಕೆ. ದಿವಾಕರ್‌

ಸಾಗರ : ಏ.17ರ ಸೋಮ ವಾರ ಬೆಳಿಗ್ಗೆ 10-30ಕ್ಕೆ ಆಮ್‌ಆದ್ಮಿ ಅಭ್ಯರ್ಥಿಯಾಗಿ ಸಾಗರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ಹೈಕೋರ್ಟ್‌ ಹಿರಿಯ ನ್ಯಾಯ ವಾದಿ ಹಾಗೂ ಅಭ್ಯರ್ಥಿ ಕೆ. ದಿವಾಕರ್‌ ತಿಳಿಸಿದರು.

ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೇ 10ರಂದು ನಡೆಯುವ ವಿಧಾನ ಸಭಾ ಚುನಾವಣೆಯ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ನೇರ ಪ್ರತಿರ್ಸ್ಪ ಕಾಂಗ್ರೇಸ್‌ ಪಕ್ಷ. ಬಿಜೆಪಿ ನಮ್ಮ ಪ್ರತಿರ್ಸ್ಪಯಲ್ಲ ಎಂದು ಹೇಳಿದರು.

ಕ್ಷೇತ್ರದಾದ್ಯಂತ ಅಮ್‌ಆದ್ಮಿ ಬಿಜೆಪಿ ಜೊತೆ ಒಳಒಪ್ಪಂದ ಮಾಡಿಕೊಂಡಿದೆ ಎಂದು ಬಿಜೆಪಿ ಕೆಲವರು ಅಪಪ್ರಚಾರ ಮಾಡು ತ್ತಿದ್ದಾರೆ. ನಾನೊಬ್ಬ ಕ್ರಿಮಿನಲ್‌ ವಕೀಲನಾಗಿದ್ದು ನನ್ನ ಕಕ್ಷಿದಾರ ರಿಂದ ಹಣ ಪಡೆಯು ತ್ತೇನೆಯೆ ವಿನಃ, ರಾಜಕಾರಣಿಗಳಿಂದ ಹಣ ಪಡೆಯುವಷ್ಟು ಚಿಲ್ಲರೆ ಕೆಲಸ ಮಾಡುವುದಿಲ್ಲ. ಚುನಾವಣಾ ಆಯೋಗ ವಿಸಿರುವ 40 ಲಕ್ಷ ರೂ. ಒಳಗೆ ನಾನು ಚುನಾವಣೆ ನಡೆಸುತ್ತೇನೆ. ಕ್ಷೇತ್ರವ್ಯಾಪ್ತಿಯಲ್ಲಿ ಆಮ್‌ಆದ್ಮಿ ಪರವಾಗಿ ಅಲೆ ಇದ್ದು, ಜನರು ಜಾತಿ ರಾಜಕಾರಣವನ್ನು ಮೀರಿ ಸಿದ್ದಾಂತದ ರಾಜಕಾರಣ ವನ್ನು ಬಯಸಿದ್ದು, ನನ್ನನ್ನು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

ಪಕ್ಷದ ರಾಷ್ಟ್ರೀಯ ನಾಯಕ ರಾದ ಅರವಿಂದ ಕ್ರೇಜಿವಾಲ್‌ ಅವರನ್ನು ಸಾಗರಕ್ಕೆ ಪ್ರಚಾರಕ್ಕೆ ಕರೆಸುವ ಉದ್ದೇಶ ಹೊಂದಲಾ ಗಿತ್ತು. ಆದರೆ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡು ತ್ತಿದ್ದು, ಮೋದಿಯವರಿಗೆ ಸರಿಸಮಾನವಾಗಿ ಬೆಳೆಯುತ್ತಿರುವ ಕ್ರೇಜಿವಾಲ್‌ ಅವರನ್ನು ಮಟ್ಟ ಹಾಕುವ ಕೆಲಸ ಮಾಡುತ್ತಿದೆ. ಅವರಿಗೆ ನೋಟಿಸ್‌ ನೀಡಿದ್ದು ಬಂಸುವ ಆತಂಕ ಸೃಷ್ಟಿಯಾಗಿದೆ. ಒಂದೊಮ್ಮೆ ಕೇಂದ್ರ ಸರ್ಕಾರ ಅರವಿಂದ ಕ್ರೇಜಿವಾಲ್‌ ಅವರನ್ನು ಬಂಸಿದರೆ ರಾಜ್ಯಾದ್ಯಂತ ಬಂಧ ನವನ್ನೇ ಮುಂದಿಟ್ಟುಕೊಂಡು ಆಮ್‌ಆದ್ಮಿ ಪ್ರಚಾರ ಕೈಗೊಂಡು ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿ ಒಂದು ಸ್ಥಾನವನ್ನು ಸಹ ಗೆಲ್ಲುವುದು ಕಷ್ಟ ಎಂದರು.

ಕ್ಷೇತ್ರವ್ಯಾಪ್ತಿಯಲ್ಲಿ ಇಂಜಿನಿ ಯರಿಂಗ್‌ ಕಾಲೇಜು ಸ್ಥಾಪನೆ, ಫಿನ್‌ಲ್ಯಾಂಡ್‌ ಮಾದರಿಯಲ್ಲಿ ಕ್ಷೇತ್ರದಾದ್ಯಂತ ಇಂಟರ್‌ನೆಟ್‌ ಸೌಲಭ್ಯ, ಶರಾವತಿ ಮುಳುಗಡೆ ಸೇರಿದಂತೆ ವಿವಿಧ ಯೋಜನೆ ಯಡಿ ಸಂಕಷ್ಟಕ್ಕೆ ಒಳಗಾಗಿರುವ ಲಾನುಭವಿಗಳಿಗೆ ಭೂಒಡೆತನದ ಪತ್ರ, ಕೆಎ್‌‍ಡಿ ಸಂಶೋಧನಾ ಕೇಂದ್ರ, ಅಡಿಕೆ ಹಾನಿಕಾರಕವಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಅಫಿಡವೀಟ್‌, ಪ್ರವಾಸೋದ್ಯಮ ಅಭಿವೃದ್ದಿಗೆ ಪೂರಕವಾಗಿ ಟೂರಿ ಸಂ ಸರ್ಕ್ಯೂಟ್‌, ಸರ್ವಋತು ರಸ್ತೆ, ಅಭಯಾರಣ್ಯದ ನಡುವೆ ವಾಸಿಸುವವರಿಗೆ ಮೂಲಭೂತ ಸೌಲಭ್ಯ, ಭ್ರಷ್ಟಾಚಾರರಹಿತ ಆಡ ಳಿತ ನೀಡುವುದು ನನ್ನ ಉದ್ದೇ ಶವಾಗಿದೆ. ಕ್ಷೇತ್ರದ ಮತದಾರರು ತಮ್ಮನ್ನು ಬೆಂಬಲಿಸಲು ಮನವಿ ಮಾಡಿದರು.

ಗೋಷ್ಟಿಯಲ್ಲಿ ಸತೀಶ್‌ ಗೌಡ ಅದರಂತೆ, ಚಂದ್ರಶೇಖರ್‌, ವೀಣಾ ನಾಯ್ಡು, ಮಾಲತಿ, ಶರತ್‌ ನೇರಲಗಿ, ನಾಗರಾಜ್‌ ಬಂದಗ್ದೆ, ಶಿವಕುಮಾರ್‌, ನಂದಕುಮಾರಿ  ಹಾಜರಿದ್ದರು.