ಜಿಲ್ಲಾ ಸುದ್ದಿಶಿವಮೊಗ್ಗಸಾಗರ

ನಗರವ್ಯಾಪ್ತಿಯ ನಾಯಕರು ಒಟ್ಟಾಗಿದ್ದೇವೆ; ನಾವು ಬಿಜೆಪಿಯ ಯಾವುದೇ ಆಮೀಷಕ್ಕೆ ಒಳಗಾಗಿಲ್ಲ : ಐ.ಎನ್‌.ಸುರೇಶಬಾಬು

ಸಾಗರ : ನಗರವ್ಯಾಪ್ತಿಯ ನಾಯಕರು ಒಟ್ಟಾಗಿದ್ದೇವೆ. ನಾವು ಬಿಜೆಪಿಯ ಯಾವುದೇ ಆಮೀಷಕ್ಕೆ ಒಳಗಾಗಿಲ್ಲ. ಬಿಜೆಪಿ ಪ್ರಮುಖರು ಎಲ್ಲರೂ ತಮ್ಮ ಜೊತೆ ಬರುತ್ತಿ ದ್ದಾರೆ ಎಂದು ಅಪಪ್ರಚಾರ ಮಾಡುವುದನ್ನು ನಿಲ್ಲಿಸಲಿ ಎಂದು ಕಾಂಗ್ರೇಸ್‌ ನಗರ ಅಧ್ಯಕ್ಷ ಐ.ಎನ್‌ .ಸುರೇಶಬಾಬು ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ ಕೈ ಪ್ರಮುಖರು ಬಿಜೆಪಿ ಸೇರಿದ್ದಾರೆ, ಸೇರುತ್ತಿದ್ದಾರೆ ಎನ್ನುವ ಅಪಪ್ರಚಾರ ಮಾಡು ತ್ತಿದೆ. ಹಿಂದಿನಿಂದಲೂ ಬಿಜೆಪಿ ಅಪಪ್ರಚಾರದ ಮೂಲಕವೇ ಅಸ್ತಿತ್ವ ಕಂಡು ಕೊಂಡಿದ್ದು, ಕಾಂ ಗ್ರೇಸ್‌ ಕಾರ್ಯಕರ್ತರು ಅಧೈ ರ್ಯಗೊಳ್ಳುವುದು ಬೇಡ. ನಾವೆಲ್ಲಾ ಒಟ್ಟಾಗಿದ್ದೇವೆ ಎಂದು ಹೇಳಿದರು.

ಕಳೆದ ಎರಡೂವರೆ ವರ್ಷ ದಿಂದ ಕಾಗೋಡು ತಿಮ್ಮಪ್ಪ ನಾಯ ಕತ್ವ ಹಾಗೂ ಕಾಂಗ್ರೇಸ್‌ ತತ್ವಾ ದರ್ಶಗಳನ್ನು ಮೈಗೂಡಿಸಿಕೊಂಡು ಪಕ್ಷ ಸಂಘಟನೆ ಮಾಡಿಕೊಂಡು ಬರಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಹಾಲಿ ಶಾಸಕ ಹರತಾಳು ಹಾಲಪ್ಪ ಅವರ ಜನವಿರೋ ಆಡಳಿತದ ವಿರುದ್ದ ಪ್ರತಿಭಟನೆ ಮಾಡಲಾಗಿದೆ. ಚುನಾವಣೆಗೂ ಮೊದಲು ಕಾಂಗ್ರೇಸ್‌ ಬಿಡುಗಡೆ ಮಾಡಿದ ಗ್ಯಾರಂಟಿ ಕಾರ್ಡನ್ನು ನಗರ ವ್ಯಾಪ್ತಿಯ ಮನೆಮನೆಗೆ ತಲುಪಿ ಸುವ ಕೆಲಸವನ್ನು ಪ್ರಾಮಾ ಣಿಕವಾಗಿ ಮಾಡಿದ್ದೇವೆ. ಇಂತಹ ಸಂದರ್ಭದಲ್ಲಿ ಪಕ್ಷವನ್ನು ಒಡೆ ಯಲು ಮತ್ತು ಕಾರ್ಯಕರ್ತ ರದಲ್ಲಿ ಅಪನಂಬಿಕೆ ಹುಟ್ಟಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿರು ವುದನ್ನು ಕಾಂಗ್ರೇಸ್‌ ತೀವೃವಾಗಿ ಖಂಡಿಸುತ್ತದೆ ಎಂದರು.

ಡಾ. ರಾಜನಂದಿನಿ ಸೇರಿದಂತೆ ಒಂದೆರಡು ಜನರು ಕಾಂಗ್ರೇಸ್‌ ಟಿಕೇಟ್‌ ಸಿಕ್ಕಿಲ್ಲ ಎಂದು ಬಿಜೆಪಿ ಕಡೆ ಹೋಗಿದ್ದಾರೆ. ಇದು ಕಾಂಗ್ರೇಸ್‌ ಪಕ್ಷಕ್ಕೆ, ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಗೆಲುವಿಗೆ ಯಾವುದೇ ಹಿನ್ನಡೆ ಉಂಟು ಮಾಡುವುದಿಲ್ಲ. ಕ್ಷೇತ್ರವ್ಯಾಪ್ತಿಯಲ್ಲಿ ಗೋಪಾಲಕೃಷ್ಣ ಬೇಳೂರು ಗೆಲ್ಲಿಸಲು ಎಲ್ಲ ರೀತಿ ಯ ಪ್ರಯತ್ನ ನಡೆಸಲಾಗುತ್ತಿದ್ದು ಅದರಲ್ಲಿ ಯಶಸ್ಸು ಸಹ ಕಾಣು ತ್ತೇವೆ. ಎಲ್ಲರೂ ಇದಕ್ಕೆ ಸಹಕಾರ ನೀಡಲು ಮನವಿ ಮಾಡಿದ ಅವರು ನಾವು ಪಕ್ಷಾಂತರ ಮಾಡಿ ಹಣಕ್ಕಾಗಿ ನಮ್ಮನ್ನು ನಾವು ಮಾರಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗೋಷ್ಟಿಯಲ್ಲಿ ಕಾಂಗ್ರೇಸ್‌ ಪ್ರಮುಖರಾದ ಮಧುಮಾಲತಿ, ಗಣಪತಿ ಮಂಡಗಳಲೆ, ನಾಗರತ್ನ ನಾರಾಯಣಪ್ಪ, ಗಣಾೕಶ್‌, ವೀಣಾ ಪರಮೇಶ್ವರ್‌, ಶ್ರೀನಾಥ್‌, ಡಿ.ದಿನೇಶ್‌, ಅನ್ವರ್‌, ಬಾಬಣ್ಣ, ಹರೀಶ್‌, ನಿಸಾರ್‌ ಅಹ್ಮದ್‌, ನಿತ್ಯಾ ನಂದ ಶೆಟ್ಟಿ, ಗ್ರೇಸಿ ಡಯಾಸ್‌, ಪರಿಮಳ, ಜಗನ್ನಾಥ್‌, ತಾರಾ ಮೂರ್ತಿ, ಕೃಷ್ಣಪ್ಪ ಹಾಜರಿದ್ದರು.